ನೆಟ್ಟಿಗರಲ್ಲಿ ಕಳವಳ ಮೂಡಿಸಿದ ವಿಡಿಯೋ; ಗಾಯಗೊಂಡಿರುವ ಸ್ಥಿತಿಯಲ್ಲೇ ಟ್ರಾಫಿಕ್ ನಲ್ಲಿ ಕೀ ಚೈನ್ ಮಾರುತ್ತಿರುವ ಬಾಲಕ

ಗಾಯಗೊಂಡಿರುವ ಬಾಲಕನೊಬ್ಬ ಟ್ರಾಫಿಕ್ ಪಾಯಿಂಟ್ ನಲ್ಲಿ ಕೀ ಚೈನ್ ಗಳನ್ನು ಮಾರುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಸಾಕಷ್ಟು ಗಮನ ಸೆಳೆದಿದ್ದು ನೆಟ್ಟಿಗರು ಸಹಾಯಕ್ಕೆ ಧಾವಿಸಿದ್ದಾರೆ.

ಗುಜರಾತ್‌ನ ಟ್ರಾಫಿಕ್ ಪಾಯಿಂಟ್‌ನಲ್ಲಿ ಗಾಯಗೊಂಡ ಪುಟ್ಟ ಹುಡುಗನೊಬ್ಬ ಕೀಚೈನ್‌ಗಳನ್ನು ಮಾರುತ್ತಿರುವುದನ್ನು ವಿಡಿಯೋ ತೋರಿಸುತ್ತದೆ. ಸಾಕ್ಷಿ ಅವರು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡ ವೀಡಿಯೊವನ್ನು ಜೂನ್ 7 ರಂದು ಪೋಸ್ಟ್ ಮಾಡಲಾಗಿದೆ. ಆನ್‌ಲೈನ್‌ನಲ್ಲಿ ವಿಡಿಯೋ ಹಂಚಿಕೊಂಡಾಗಿನಿಂದ ಇದು 7.4 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಗುರುತು ಪತ್ತೆಯಾಗದ ಬಾಲಕ ಗುಜರಾತ್‌ನ ಟ್ರಾಫಿಕ್ ಪಾಯಿಂಟ್‌ನಲ್ಲಿ ಕೀಚೈನ್‌ಗಳನ್ನು ಮಾರಾಟ ಮಾಡುತ್ತಿದ್ದು. ಟ್ರಾಫಿಕ್ ಪಾಯಿಂಟ್‌ನಲ್ಲಿ ನಿಂತಿದ್ದವರೊಬ್ಬರು ಬಾಲಕನೊಂದಿಗೆ ಮಾತನಾಡಿ ವಿಡಿಯೊ ರೆಕಾರ್ಡ್ ಮಾಡಿದ್ದಾರೆ. ಬಾಲಕನ ಬಲಗಾಲು ಗಾಯಗೊಂಡಿರುವುದನ್ನು ವಿಡಿಯೋ ತೋರಿಸುತ್ತದೆ.

ಗಾಯಗೊಂಡ ಸ್ಥಳಕ್ಕೆ ಯಾವುದೇ ಹೆಚ್ಚಿನ ಹಾನಿಯಾಗದಂತೆ ಅದನ್ನು ಬಟ್ಟೆ ಮತ್ತು ಪ್ಲಾಸ್ಟಿಕ್‌ನಿಂದ ಕಟ್ಟಲಾಗಿದೆ. ಈ ವೀಡಿಯೋ ಅಂತರ್ಜಾಲದಲ್ಲಿ ಸಾಕಷ್ಟು ಕಳವಳ ಮೂಡಿಸಿದೆ. ಈ ಹುಡುಗನಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡಬೇಕು ಇಲ್ಲದಿದ್ದರೆ ಗಾಯವು ಗ್ಯಾಂಗ್ರೀನ್‌ಗೆ ಕಾರಣವಾಗಬಹುದು ಎಂದು ಜನರು ಸಲಹೆ ನೀಡಿದ್ದಾರೆ. ಹಲವರು ಅವನ ವಿಳಾಸ ಅಥವಾ ಸಂಪರ್ಕ ಸಂಖ್ಯೆಯನ್ನು ಕೇಳಿದ್ದು ವೈದ್ಯರ ಬಳಿ ಕರೆದೊಯ್ಯುವುದಾಗಿ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read