ಕೆ-ಸೆಟ್ ಅರ್ಹತಾ ಪರೀಕ್ಷೆಯಲ್ಲಿ ಅರ್ಹರಾದ ಹಾಗೂ ಸದ್ಯ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ತಾವು ಕ್ಲೇಮ್ ಮಾಡಿರುವ ಒಳಮೀಸಲಾತಿಗೆ(SC-A, SC-B, SC-C) ಸಂಬಂಧಿಸಿದ ಜಾತಿ ಪ್ರಮಾಣ ಪತ್ರಗಳ ಪರಿಶೀಲನೆಗೆ ಡಿ.22ರಿಂದ 24ರವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಕಚೇರಿಗೆ ಬರಲು ಸೂಚಿಸಲಾಗಿದೆ.
ಇದು ಕೇವಲ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಮಾತ್ರ ಅನ್ವಯಿಸಲಿದೆ. ಸದ್ಯ ವಾಸಂಗ ಮಾಡುತ್ತಿರುವ ಸಾಮಾನ್ಯ ಸೇರಿದಂತೆ ಇತರ ಪ್ರ ವರ್ಗಗಳ ಅಭ್ಯರ್ಥಿಗಳು ಬರುವ ಅಗತ್ಯ ಇಲ್ಲ.
ಕ್ಲೇಮ್ ಪ್ರಕಾರ ಆರ್ ಡಿ ಸಂಖ್ಯೆಯ ಹೊಸ ಪ್ರಮಾಣ ಪತ್ರದ ಜತೆಗೆ ಬರಬೇಕು. ಜಾತಿ ಪ್ರಮಾಣ ಪತ್ರ ಪರಿಶೀಲಿಸಿಕೊಂಡು, ಸ್ನಾತಕೋತ್ತರ ಪದವಿಯ ಪ್ರಮಾಣ ಪತ್ರಗಳ ಪರಿಶೀಲನೆ ಪೂರ್ಣಗೊಳ್ಳದ ಅಭ್ಯರ್ಥಿಗಳು, ತಮ್ಮ ಪದವಿ ಪೂರ್ಣಗೊಂಡ ನಂತರ ಅಂತಿಮ ಅಂಕಪಟ್ಟಿಯನ್ನು ಪ್ರಾಧಿಕಾರ ಸೂಚಿಸುವ ದಿನಾಂಕಗಳಂದು ಸಲ್ಲಿಸಿ, ಕೆಸೆಟ್ ಪ್ರಮಾಣ ಪತ್ರ ಪಡೆಯಬಹುದು.
ಈ ದಿನಾಂಕಗಳಂದು ಜಾತಿ ಪ್ರಮಾಣ ಪತ್ರಗಳ ಪರಿಶೀಲನೆಗೆ ಹಾಜರಾಗದೇ ಇರುವ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಅಭ್ಯರ್ಥಿಗಳನ್ನು ಅನರ್ಹರೆಂದು ಪರಿಗಣಿಸಿ, ತಾತ್ಕಾಲಿಕ ಅರ್ಹತಾ ಪಟ್ಟಿಯಿಂದ ಕೈಬಿಡಲಾಗುವುದು.
ವಿಷಯವಾರು ವೇಳಾಪಟ್ಟಿ ಹಾಗೂ ಇತರ ಮಾಹಿತಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
KSET_INTRES_VER_NOTEkannada.pdf https://share.google/etFSKHWDccRO7wpD6 ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

