HomeBusinessಇನ್ಶೂರೆನ್ಸ್ ಪ್ರೀಮಿಯಂ ಟೆನ್ಷನ್ ಬೇಡ: ಸೇವಿಂಗ್ಸ್ ದುಡ್ಡಿಗೆ ಕೈ ಹಾಕದೆ ಪಾಲಿಸಿ ಕಟ್ಟಲು ಇಲ್ಲಿವೆ 4...

ಇನ್ಶೂರೆನ್ಸ್ ಪ್ರೀಮಿಯಂ ಟೆನ್ಷನ್ ಬೇಡ: ಸೇವಿಂಗ್ಸ್ ದುಡ್ಡಿಗೆ ಕೈ ಹಾಕದೆ ಪಾಲಿಸಿ ಕಟ್ಟಲು ಇಲ್ಲಿವೆ 4 ಸ್ಮಾರ್ಟ್ ದಾರಿಗಳು

ಬೆಂಗಳೂರು: ವರ್ಷಕ್ಕೊಮ್ಮೆ ಬರೋ ಇನ್ಶೂರೆನ್ಸ್ ಪಾಲಿಸಿ ಪ್ರೀಮಿಯಂ (Insurance Premium) ಅಂದ್ರೆ ಸಾಕು, ಎಲ್ರಿಗೂ ಒಂಥರಾ ಶಾಕ್! ಕಷ್ಟಪಟ್ಟು ಕೂಡಿಟ್ಟಿರೋ ಸೇವಿಂಗ್ಸ್ ದುಡ್ಡನ್ನೆಲ್ಲಾ ಒಂದೇ ಸಲ ವಿಮಾ ಕಂಪನಿಗೆ ಸುರಿಯಬೇಕಲ್ಲ ಅನ್ನೋ ನೋವು ಕಾಡೋದು ಸಹಜ. ಆದ್ರೆ ಫ್ರೆಂಡ್ಸ್, ಕಾಲ ಬದಲಾಗಿದೆ! ಈಗ ವಿಮೆ ಕಟ್ಟೋಕೆ ಅಂತಾನೇ ಮಾರುಕಟ್ಟೆಯಲ್ಲಿ ಮಸ್ತ್ ಫೈನಾನ್ಷಿಯಲ್ ಆಪ್ಷನ್ಸ್ ಇವೆ. ನೀವು ಒಟ್ಟಿಗೆ ದೊಡ್ಡ ಮೊತ್ತ ಕಟ್ಟೋ ಬದಲು ಆರಾಮಾಗಿ ಈಸಿ ಇಎಂಐ (Easy EMI) ಮೂಲಕ ಕಂತುಗಳಲ್ಲಿ ಹಣ ಪಾವತಿಸಬಹುದು.

ಆ 4 ಸೂಪರ್ ದಾರಿಗಳು ಇಲ್ಲಿವೆ ನೋಡಿ:

ಪ್ರೀಮಿಯಂ ಫೈನಾನ್ಸ್ ಕಂಪನಿಗಳ ಸಾಥ್
ನೀವು ಒಂದೇ ಸಲ ಹಣ ಕಟ್ಟೋ ಬದಲು ತಿಂಗಳು ಅಥವಾ ಮೂರು ತಿಂಗಳಿಗೊಮ್ಮೆ (ತ್ರೈಮಾಸಿಕ) ಕಂತುಗಳಲ್ಲಿ ಹಣ ಕಟ್ಟಬಹುದು. ಬಜಾಜ್ ಫೈನಾನ್ಸ್, ಕ್ಯಾಪಿಟಲ್ ಫ್ಲೋಟ್‌ನಂತಹ ಪ್ಲಾಟ್‌ಫಾರ್ಮ್‌ಗಳು ನೋ-ಕಾಸ್ಟ್ ಇಎಂಐ ಸೌಲಭ್ಯವನ್ನೂ ನೀಡುತ್ತವೆ.

    ಹೇಗೆ?: ಪ್ಯಾನ್, ಆಧಾರ್ ಮತ್ತು ಬ್ಯಾಂಕ್ ಸ್ಟೇಟ್‌ಮೆಂಟ್ ಕೊಟ್ಟರೆ ಸಾಕು, 24 ರಿಂದ 72 ಗಂಟೆಗಳಲ್ಲಿ ಸಾಲ ಮಂಜೂರಾಗಿ ನೇರವಾಗಿ ಇನ್ಶೂರೆನ್ಸ್ ಕಂಪನಿಗೆ ಪಾವತಿಯಾಗುತ್ತದೆ.

    📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
    APP ತೆರೆಯಿರಿ

    ಎಚ್ಚರಿಕೆ: ಇಲ್ಲಿ ವಾರ್ಷಿಕ 12% ರಿಂದ 24% ವರೆಗೆ ಬಡ್ಡಿ ಇರಬಹುದು. ಒಂದು ವೇಳೆ ಸಾಲವನ್ನು ಅವಧಿಗಿಂತ ಮುಂಚೆ ತೀರಿಸಿದರೆ 2% ರಿಂದ 5% ಪೆನಾಲ್ಟಿ ಬೀಳುತ್ತೆ, ಹುಷಾರು!

    ಕ್ರೆಡಿಟ್ ಕಾರ್ಡ್ ಇದ್ರೆ ಲೈಫ್ ಈಸಿ
    ಅಕೌಂಟ್‌ನಲ್ಲಿ ಪೂರ್ತಿ ದುಡ್ಡಿಲ್ಲ ಅಂದಾಗ ಕ್ರೆಡಿಟ್ ಕಾರ್ಡ್ ಗೀಚಿ ಪ್ರೀಮಿಯಂ ಕಟ್ಟಿಬಿಡಿ. ಆಮೇಲೆ ಅದನ್ನ ನಿಮ್ಮ ಅನುಕೂಲಕ್ಕೆ ತಕ್ಕಂತೆ ಇಎಂಐ ಆಗಿ ಕನ್ವರ್ಟ್ ಮಾಡ್ಕೋಬಹುದು.

      ಪ್ಲಸ್ ಪಾಯಿಂಟ್: ಟೈಮ್‌ಗೆ ಸರಿಯಾಗಿ ಬಿಲ್ ಕಟ್ಟಿದ್ರೆ ನಿಮ್ಮ ಕ್ರೆಡಿಟ್ ಸ್ಕೋರ್ ಮಸ್ತ್ ಆಗಿ ಇಂಪ್ರೂವ್ ಆಗುತ್ತೆ. ಜೊತೆಗೆ ಕ್ಯಾಶ್‌ಬ್ಯಾಕ್ ಮತ್ತು ರಿವಾರ್ಡ್ ಪಾಯಿಂಟ್ಸ್ ಕೂಡ ನಿಮ್ಮ ಜೇಬು ಸೇರುತ್ತವೆ ಇಎಂಐ ಮಾಡಿಸದಿದ್ದರೆ ಮಾತ್ರ ಬಡ್ಡಿ ಮೀಟರ್ ಜೋರಾಗಿ ಓಡುತ್ತೆ, ಮರೆಯಬೇಡಿ.

      ಪರ್ಸನಲ್ ಲೋನ್ ತಗೋಬಹುದಾ?
      ಬ್ಯಾಂಕ್ ಅಥವಾ NBFC ಇಂದ ಪರ್ಸನಲ್ ಲೋನ್ ಪಡೆದು ಒಂದೇ ಏಟಿಗೆ ಪ್ರೀಮಿಯಂ ಕ್ಲಿಯರ್ ಮಾಡಿ, ಆಮೇಲೆ ಪ್ರತಿ ತಿಂಗಳು ಲೋನ್ ಕಂತು ಕಟ್ತಾ ಹೋಗಬಹುದು.

        ಕ್ಯಾಚ್ ಇಲ್ಲಿದೆ: ಲೋನ್ ಅವಧಿ ಜಾಸ್ತಿ ತಗೊಂಡಷ್ಟು ನೀವು ಕಟ್ಟೋ ಒಟ್ಟು ಬಡ್ಡಿ ಕೂಡ ಹೆಚ್ಚಾಗುತ್ತದೆ. ಹಾಗಾಗಿ, ಒಂದು ವರ್ಷದ ಪ್ರೀಮಿಯಂಗೆ ಎಷ್ಟು ಬಡ್ಡಿ ಎಕ್ಸ್ಟ್ರಾ ಬೀಳುತ್ತೆ ಅಂತ ಲೆಕ್ಕ ಹಾಕಿ ಮುಂದುವರಿಯಿರಿ.

        ಇನ್ಶೂರೆನ್ಸ್ ಕಂಪನಿಯಲ್ಲೇ ಇದೆ ‘ಇನ್-ಬಿಲ್ಟ್ ಇಎಂಐ
        ಈಗಿನ ಬಹುತೇಕ ಇನ್ಶೂರೆನ್ಸ್ ಕಂಪನಿಗಳೇ ಸಾಲದ ಕಿರಿಕಿರಿ ಇಲ್ಲದ ಇಎಂಐ ಆಪ್ಷನ್ ಕೊಡುತ್ತಿವೆ. ಇದರಿಂದ ಬೇರೆ ಕಡೆ ಲೋನ್ ತಗೊಳೋ ಅಗತ್ಯವೇ ಇರೋದಿಲ್ಲ. ನಿಮ್ಮ ತಿಂಗಳ ಬಜೆಟ್ ಮ್ಯಾನೇಜ್ ಮಾಡ್ಕೊಂಡು ಪ್ರೀಮಿಯಂ ಕಟ್ಟೋಕೆ ಇದು ಅತ್ಯಂತ ಸೇಫ್ ಮತ್ತು ಸಿಂಪಲ್ ದಾರಿ.

          ಲೆಕ್ಕಾಚಾರ ಮುಖ್ಯ: ಇಎಂಐ ಕಮ್ಮಿ ಇದೆ ಅಂತ ಕಣ್ಣು ಮುಚ್ಚಿ ಸೈನ್ ಮಾಡ್ಬೇಡಿ. ಒಟ್ಟು ಎಷ್ಟು ಬಡ್ಡಿ ಮತ್ತು ಪ್ರೊಸೆಸಿಂಗ್ ಫೀ ಬೀಳುತ್ತೆ ಅಂತ ಪಕ್ಕಾ ಲೆಕ್ಕ ಹಾಕಿ.

          ಸಹಿ ಹಾಕುವ ಮುನ್ನ: ಯಾವುದೇ ಆಪ್ಷನ್ ಆರಿಸಿದ್ರೂ, ‘ರೂಲ್ಸ್ ಅಂಡ್ ಕಂಡೀಷನ್ಸ್’ ಅನ್ನು ಪೂರ್ತಿಯಾಗಿ ಓದಿ ಅರ್ಥ ಮಾಡ್ಕೊಳ್ಳಿ.

          ಲಿಮಿಟ್ ಇರಲಿ: ನಿಮ್ಮ ಕೈಯಲ್ಲಿ ತಿಂಗಳಿಗೆ ಎಷ್ಟು ಕಟ್ಟೋಕೆ ಸಾಧ್ಯವೋ ಅಷ್ಟೇ ಅವಧಿಯ ಇಎಂಐ ಸೆಲೆಕ್ಟ್ ಮಾಡಿ.

          For Latest News Updates, Join Our Whatsapp Community🚩
          Abinandan
          Abinandan
          ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
          RELATED ARTICLES

          LEAVE A REPLY

          Please enter your comment!
          Please enter your name here

          Most Popular