HomeLatest Newsರಕ್ಷಾಬಂಧನಕ್ಕೆ ಪ್ರೀಮಿಯಂ ರಾಖಿ ಕ್ರೇಜ್‌: ಬೆಳ್ಳಿ ರಾಖಿಗಳ ಬೇಡಿಕೆ 20 ಪಟ್ಟು ಹೆಚ್ಚಳ

ರಕ್ಷಾಬಂಧನಕ್ಕೆ ಪ್ರೀಮಿಯಂ ರಾಖಿ ಕ್ರೇಜ್‌: ಬೆಳ್ಳಿ ರಾಖಿಗಳ ಬೇಡಿಕೆ 20 ಪಟ್ಟು ಹೆಚ್ಚಳ

ಬೆಂಗಳೂರು: ರಕ್ಷಾಬಂಧನ ಹಬ್ಬ ಹತ್ತಿರವಾಗುತ್ತಿದ್ದಂತೆ ರಾಖಿ ಮಾರುಕಟ್ಟೆಯಲ್ಲೂ ಹೊಸ ಟ್ರೆಂಡ್‌ ಕಾಣಿಸಿಕೊಳ್ಳುತ್ತಿದೆ. ಸಾಮಾನ್ಯ ದಾರದ ರಾಖಿಗಳಿಗಿಂತ ಆಭರಣದ ವಿನ್ಯಾಸ, ಬೆಳ್ಳಿ ಹಾಗೂ ಪ್ರೀಮಿಯಂ ಲುಕ್‌ ಹೊಂದಿರುವ ರಾಖಿಗಳಿಗೆ ಗ್ರಾಹಕರು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.

ಕ್ವಿಕ್‌ ಕಾಮರ್ಸ್‌ ಪ್ಲಾಟ್‌ಫಾರ್ಮ್‌ ಇನ್‌ಸ್ಟಾಮಾರ್ಟ್‌ ಮಾಹಿತಿ ಪ್ರಕಾರ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪ್ರೀಮಿಯಂ ರಾಖಿಗಳ ಬೇಡಿಕೆ ಬರೋಬ್ಬರಿ 20 ಪಟ್ಟು ಹೆಚ್ಚಾಗಿದೆ. ಒಟ್ಟಾರೆ ರಾಖಿ ಮತ್ತು ಗಿಫ್ಟಿಂಗ್‌ ವಿಭಾಗವೂ ಈ ವರ್ಷ ಸುಮಾರು ಮೂರು ಪಟ್ಟು ಬೆಳೆಯುವ ನಿರೀಕ್ಷೆಯಿದೆ.

ಯಾವ ಬ್ರ್ಯಾಂಡ್‌ಗಳ ರಾಖಿಗಳಿಗೆ ಬೇಡಿಕೆ?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗ್ರಾಹಕರ ಬದಲಾಗುತ್ತಿರುವ ಆಯ್ಕೆಗೆ ಅನುಗುಣವಾಗಿ ಇನ್‌ಸ್ಟಾಮಾರ್ಟ್‌ನಲ್ಲಿ ಇದೀಗ ಸ್ವರೋವ್ಸ್ಕಿ, ಗಿವಾ, ನೆಸ್ಟಾಸಿಯಾ, ಕಲ್ಯಾಣ್‌ ಜ್ಯುವೆಲ್ಲರ್ಸ್‌ ಮತ್ತು ಪಾಲ್ಮೋನಾಸ್‌ನಂತಹ ಬ್ರ್ಯಾಂಡ್‌ಗಳ ಪ್ರೀಮಿಯಂ ರಾಖಿಗಳು ಲಭ್ಯವಿವೆ.

ಕಲ್ಯಾಣ್‌ ಜ್ಯುವೆಲ್ಲರ್ಸ್‌ನ 1 ಗ್ರಾಂ ಬೆಳ್ಳಿಯ 925 ತ್ರಿಪುಂಡ್ರ ತ್ರಿಶೂಲ್‌ ಮತ್ತು 925 ಗಣೇಶ್‌ ರಾಖಿಗಳು ಹೆಚ್ಚು ಬೇಡಿಕೆಯಲ್ಲಿವೆ ಎಂದು ಕಂಪನಿ ತಿಳಿಸಿದೆ.

ಪಾಲ್ಮೋನಾಸ್‌ನ ಡಿವೈನ್‌ ಲೋಟಸ್‌, ಡಿವೈನ್‌ ಓಂ ಮತ್ತು ಸರ್ಕಲ್‌ ಆಫ್‌ ಲವ್‌ ರಾಖಿಗಳಿಗೂ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇವು ನೀರು ತಾಗಿದರೂ ಹಾಳಾಗದ ಮತ್ತು ಕಪ್ಪಾಗದ ವಿನ್ಯಾಸ ಹೊಂದಿವೆ ಎಂದು ತಿಳಿಸಲಾಗಿದೆ.

ರಾಖಿ ಖರೀದಿಗೆ ಬಂಪರ್‌ ಆಫರ್‌ಗಳು

ಹಬ್ಬದ ಹಿನ್ನೆಲೆ ಇನ್‌ಸ್ಟಾಮಾರ್ಟ್‌ ಕೆಲವು ವಿಶೇಷ ಕೊಡುಗೆಗಳನ್ನೂ ನೀಡುತ್ತಿದೆ. ನಟಿ ಶ್ರದ್ಧಾ ಕಪೂರ್‌ ರಾಯಭಾರಿಯಾಗಿರುವ ಪಾಲ್ಮೋನಾಸ್‌ ರಾಖಿ ಖರೀದಿಸುವವರಿಗೆ ದೇಶಾದ್ಯಂತದ ಪಾಲ್ಮೋನಾಸ್‌ ಶೋರೂಮ್‌ಗಳಲ್ಲಿ ₹3,499 ಮೌಲ್ಯದ ಡೈಮಂಡ್‌ ಅಫೇರ್ಸ್‌ ಬ್ರೇಸ್‌ಲೆಟ್‌ ಉಚಿತವಾಗಿ ಪಡೆಯುವ ಅವಕಾಶವಿದೆ ಎಂದು ಕಂಪನಿ ಹೇಳಿದೆ.

ಅದೇ ರೀತಿ, ಇನ್‌ಸ್ಟಾಮಾರ್ಟ್‌ ಮೂಲಕ ಕಲ್ಯಾಣ್‌ ಜ್ಯುವೆಲ್ಲರ್ಸ್‌ ರಾಖಿ ಖರೀದಿಸುವ ಗ್ರಾಹಕರಿಗೆ 10 ಗ್ರಾಂ ಬೆಳ್ಳಿಯ ವೋಚರ್‌ ನೀಡಲಾಗುತ್ತಿದೆ.

ಪ್ರೀಮಿಯಂ ರಾಖಿಗಳ ಟ್ರೆಂಡ್‌ ಕೇವಲ ಬೆಂಗಳೂರು, ಮುಂಬೈ ಅಥವಾ ದೆಹಲಿಯಂತಹ ದೊಡ್ಡ ನಗರಗಳಿಗೆ ಸೀಮಿತವಾಗಿಲ್ಲ. ಲಕ್ನೋ, ಅಹಮದಾಬಾದ್‌, ಭುವನೇಶ್ವರ ಮತ್ತು ಚಂಡೀಗಢದಂತಹ ಟಿಯರ್‌-2 ನಗರಗಳಲ್ಲೂ ದುಬಾರಿ ಹಾಗೂ ವೈಯಕ್ತೀಕರಿಸಿದ ರಾಖಿಗಳ ಬೇಡಿಕೆ ಹೆಚ್ಚುತ್ತಿದೆ.

ರಾಖಿಯ ಜತೆಗೆ ಸಹೋದರ-ಸಹೋದರಿಯರು ಪರಸ್ಪರ ಉಡುಗೊರೆ ನೀಡುವುದಕ್ಕೂ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಸಹೋದರಿಯರಿಗೆ ಪೆಂಡೆಂಟ್‌, ಹ್ಯಾಂಡ್‌ಬ್ಯಾಗ್‌, ಸಾಫ್ಟ್‌ ಟಾಯ್ಸ್‌ ಮತ್ತು ಚಾಕೊಲೇಟ್‌ಗಳು ಬೇಡಿಕೆಯಲ್ಲಿದ್ದರೆ, ಸಹೋದರರಿಗೆ ಪರ್ಫ್ಯೂಮ್‌ ಸೆಟ್‌, ವಾಲೆಟ್‌ ಮತ್ತು ಬ್ರೇಸ್‌ಲೆಟ್‌ಗಳ ಖರೀದಿ ಹೆಚ್ಚಾಗಿದೆ.

ಗ್ರಾಹಕರ ವಿಭಿನ್ನ ಬಜೆಟ್‌ಗೆ ಅನುಗುಣವಾಗಿ ಇನ್‌ಸ್ಟಾಮಾರ್ಟ್‌ನಲ್ಲಿ ₹9ರಿಂದ ₹999ರವರೆಗೆ ವಿವಿಧ ಬೆಲೆಯ ರಾಖಿಗಳು ಲಭ್ಯವಿವೆ.

ಇನ್‌ಸ್ಟಾಮಾರ್ಟ್‌ನ ಚೀಫ್‌ ಬಿಸಿನೆಸ್‌ ಆಫೀಸರ್‌ ಗೌತಮ್‌ ಸ್ವರೂಪ್‌ ಮಾತನಾಡಿ, ಗ್ರಾಹಕರ ಅಗತ್ಯಗಳು ಬದಲಾಗುತ್ತಿದ್ದು, ದೈನಂದಿನ ಬಳಕೆಯ ವಸ್ತುಗಳ ಜತೆಗೆ ಪ್ರೀಮಿಯಂ ಉತ್ಪನ್ನಗಳಿಗೂ ಬೇಡಿಕೆ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ. ‘ಸ್ವಿಚ್‌ ಟು ಬೆಟರ್‌’ ಎಂಬ ಉದ್ದೇಶದೊಂದಿಗೆ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡಲಾಗುತ್ತಿದೆ ಎಂದಿದ್ದಾರೆ.

ಹಬ್ಬಕ್ಕೂ ಮುನ್ನವೇ ಆನ್‌ಲೈನ್‌ ಶಾಪಿಂಗ್‌ ಜೋರು

2025ರ ರಕ್ಷಾಬಂಧನದ ಅಂಕಿ-ಅಂಶಗಳನ್ನು ಗಮನಿಸಿದರೆ, ಸಾಮಾನ್ಯ ದಿನಗಳಿಗೆ ಹೋಲಿಸಿದರೆ ರಾಖಿ ಆರ್ಡರ್‌ಗಳು 3.5 ಪಟ್ಟು ಹೆಚ್ಚಾಗಿದ್ದವು. ಗಿಫ್ಟ್‌ ಹ್ಯಾಂಪರ್‌ಗಳ ಆರ್ಡರ್‌ಗಳಲ್ಲೂ 8 ಪಟ್ಟು ಏರಿಕೆ ಕಂಡುಬಂದಿತ್ತು. ಸಿಹಿತಿಂಡಿ ಮತ್ತು ಚಾಕೊಲೇಟ್‌ಗಳ ಮಾರಾಟವೂ ಹೆಚ್ಚಾಗಿತ್ತು.

ಹಬ್ಬದ ದಿನಕ್ಕಾಗಿ ಕೊನೆಯ ಕ್ಷಣದಲ್ಲಿ ಶಾಪಿಂಗ್‌ ಮಾಡುವ ಬದಲು ಹಲವು ದಿನಗಳ ಮುಂಚೆಯೇ ಆನ್‌ಲೈನ್‌ನಲ್ಲಿ ರಾಖಿ ಹಾಗೂ ಉಡುಗೊರೆಗಳನ್ನು ಖರೀದಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಈ ಬಾರಿ ಕೂಡ ಇದೇ ಟ್ರೆಂಡ್‌ ಮುಂದುವರಿದಿದ್ದು, ಪ್ರೀಮಿಯಂ ರಾಖಿಗಳತ್ತ ಗ್ರಾಹಕರ ಒಲವು ಹೆಚ್ಚಿರುವುದು ಗಮನಾರ್ಹವಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular