HomeKarnatakaಪಾಕಿಸ್ತಾನ ಗ್ಯಾಂಗ್ ಸ್ಟರ್ ಗಳ ಜೊತೆ ನಿರಂತರ ಸಂಪರ್ಕ: ಓರ್ವ ವ್ಯಕ್ತಿ ಅರೆಸ್ಟ್

ಪಾಕಿಸ್ತಾನ ಗ್ಯಾಂಗ್ ಸ್ಟರ್ ಗಳ ಜೊತೆ ನಿರಂತರ ಸಂಪರ್ಕ: ಓರ್ವ ವ್ಯಕ್ತಿ ಅರೆಸ್ಟ್

ಬೆಂಗಳೂರು: ಪಾಕಿಸ್ತಾನದ ಗ್ಯಾಂಗ್‌ಸ್ಟರ್‌ಗಳ ಜೊತೆ ನಿರಂತರ ಸಂಪರ್ಕ ಹೊಂದಿದ್ದ ವ್ಯಕ್ತಿಯೋರ್ವನನ್ನು ದೊಡ್ಡಬಳ್ಳಾಪುರ ನಗರ ಪೊಲೀಸರು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.

ಇಸ್ಲಾಂಪುರ ನಿವಾಸಿ ಸೈಯದ್ ಅಬೂಬಕರ್ ( 28 ) ಬಂಧಿತ ಆರೋಪಿ. ಕೌಂಟರ್ ಇಂಟಲಿಜೆನ್ಸ್ ಸೆಲ್ ಮತ್ತು ಸೆಂಟ್ರಲ್ ಐಬಿ ಅಧಿಕಾರಿಗಳ ಮಾಹಿತಿ ಮೇರೆಗೆ ಈತನನ್ನು ಬಂಧಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಾಕಿಸ್ತಾನಿ ಗ್ಯಾಂಗ್‌ಸ್ಟರ್‌ಗಳ ಜೊತೆ ಇನ್ಸ್ಟಾಗ್ರಾಂ ಅಕೌಂಟ್ ಮೂಲಕ ಆರೋಪಿ ಸಂರ್ಪಕದಲ್ಲಿದ್ದ. ಪಾಕಿಸ್ತಾನದ ಶಾಜದ್ ಬುಟ್ಟಿ ನೆಟವರ್ಕ್ ಗ್ಯಾಂಗ್‌ನ ಇನ್ಸ್ಟಾಗ್ರಾಂ ಅಕೌಂಟ್ ಗಣ್ಯ ವ್ಯಕ್ತಿಗಳು ದೊಡ್ಡ ದೊಡ್ಡ ಉದ್ಯಮಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುವ ಪಾಕಿಸ್ತಾನಿ ಗ್ಯಾಂಗ್ ಇದಾಗಿದೆ. ಇನ್ಸ್ಟಾಗ್ರಾಂನ Hammadmemon333 ಅನ್ನೋ ಪಾಕಿಸ್ತಾನ್ ಗ್ಯಾಂಗ್‌ನ ಅಕೌಂಟ್‌ನಲ್ಲಿ ಆರೋಪಿ ಸಂಪರ್ಕದಲ್ಲಿದ್ದ.

ತನ್ನ ಆಧಾರ್ ಕಾರ್ಡ್ ಕೊಟ್ಟು ಅಕೌಂಟ್‌ಗೆ ಲಾಗಿನ್ ಆಗಿದ್ದ. ಕಳೆದ 2 ವರ್ಷಗಳಿಂದ ಪಾಕಿಸ್ತಾನಿ ಗ್ಯಾಂಗ್‌ನ ಜೊತೆ ಇನ್ಸ್ಟಾಗ್ರಾಂನಲ್ಲಿ ಸಂಪರ್ಕದಲ್ಲಿದ್ದ ಎಂಬುದು ತಿಳಿದುಬಂದಿದೆ.

ಆರೋಪಿಯು ಎಸಿ ರಿಪೇರಿ ಕೆಲಸ ಮಾಡುತ್ತಾ ಬೆಂಗಳೂರಿನ ಮಸೀದಿಯಲ್ಲಿ ಪಾಠ ಮಾಡುತ್ತಿದ್ದ. ಗ್ಯಾಂಗ್ ಹೇಳಿದಂತೆ ಕೇರಳ ಮತ್ತು ದೆಹಲಿಗೆ ಹೋಗಿ ಟ್ರೈನಿಂಗ್ ಸಹ ಪಡೆದುಕೊಂಡು ಬಂದಿದ್ದ ಎನ್ನಲಾಗಿದೆ. ಆರೋಪಿಯ‌ ವಿರುದ್ಧ ಬಿಎನ್‌ಎಸ್‌ 113 (3) ( 197( 2 ) ಅಡಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular