HomeKarnatakaBIG NEWS: ಇಂಜಕ್ಷನ್ ರಿಯಾಕ್ಷನ್ ಆಗಿ 7 ವರ್ಷದ ಬಾಲಕ ಸಾವು

BIG NEWS: ಇಂಜಕ್ಷನ್ ರಿಯಾಕ್ಷನ್ ಆಗಿ 7 ವರ್ಷದ ಬಾಲಕ ಸಾವು

ಚಿತ್ರದುರ್ಗ: ಇಂಜಕ್ಷನ್ ರಿಯಾಕ್ಷನ್ ಆಗಿ 7 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಗ್ರಾಮದಲ್ಲಿ ನಡೆದಿದೆ.

7 ವರ್ಷದ ಚಿರಾಯಿ ಮೃತ ಬಾಲಕ. ಇಂಜಕ್ಷನ್ ರಿಯಾಕ್ಷನ್ ಆಗಿ ಬಾಲಕ ಸಾವನ್ನಪ್ಪಿದ್ದಾನೆ ಎಂದು ಕುಟುಬದವರು ಆರೋಪಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೊಲಿಗೆ ಯಂತ್ರದಲ್ಲಿ ಕೈ ಸಿಲುಕಿ ಬಾಲಕನಿಗೆ ಪೆಟ್ಟಾಗಿತ್ತು. ಈ ಹಿನ್ನೆಲೆಯಲ್ಲಿ ಬಾಲಕನನ್ನು ಚಿಕ್ಕಜಾಜೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಇಂಜಕ್ಷನ್ ಕೊಟ್ಟ ಬಳಿಕ ಬಾಲಕನಿಗೆ ವಾಂತಿಯಾಗಿದೆ. ಬಳಿಕ ಹೊಳೆಲ್ಕೆರೆ ಸರ್ಕಾರಿ ಆಸ್ಪತ್ರೆಗೆ ಬಾಲಕನನ್ನು ತಂದಾಗಲೂ ವೈದ್ಯರು ನಿರ್ಲಕ್ಷ ತೋರಿದ್ದಾರೆ. ಇದರಿಂದ ಬಾಲಕ ಸಾವನ್ನಪ್ಪಿದ್ದಾನೆ.

ಇಂಜಕ್ಷನ್ ರಿಯಾಕ್ಷನ್ ಆಗಿ ಬಾಲಕ ಸಾವನ್ನಪ್ಪಿದ್ದು, ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಕುಟುಂಬದವರು, ಸಂಬಂಧಿಕರು ಆಗ್ರಹಿಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular