HomeKarnatakaಇಂಡಕ್ಷನ್ ಸ್ಟವ್ ಬಳಕೆ ಹೆಚ್ಚಳ: ಗೃಹಜ್ಯೋತಿ ಬಿಡಿ, ಫುಲ್ ಬಿಲ್ ಕಟ್ಟಿ!

ಇಂಡಕ್ಷನ್ ಸ್ಟವ್ ಬಳಕೆ ಹೆಚ್ಚಳ: ಗೃಹಜ್ಯೋತಿ ಬಿಡಿ, ಫುಲ್ ಬಿಲ್ ಕಟ್ಟಿ!

ವಾಣಿಜ್ಯ ಮತ್ತು ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯ ಕಾರಣ ಬೇಸಿಗೆಯಲ್ಲಿ ಇಂಡಕ್ಷನ್ ಸ್ಟವ್‌ಗಳ ಬಳಕೆ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ ಗೃಹಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ ತಿಂಗಳಿಗೆ ಗರಿಷ್ಠ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಲಭ್ಯವಿದೆ. ಆದರೆ ಇಂಡಕ್ಷನ್ ಸ್ಟವ್ ಬಳಕೆಯ ಕಾರಣ ಈ ಬಾರಿ ವಿದ್ಯುತ್ ಬಿಲ್ ಹೆಚ್ಚು ಬರುತ್ತದೆಯೇ?

ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್‌ಗಿಂತ ಅಧಿಕ ಬಳಕೆಗೆ ವಿದ್ಯುತ್ ಬಿಲ್ಲಿನ ಸಂಪೂರ್ಣ ಮೊತ್ತವನ್ನು ಪಾವತಿಸಬೇಕಿದೆ. ಈಗ ಇಂಡಕ್ಷನ್ ಸ್ಟವ್ ಬಳಕೆಯ ಕಾರಣ ವಿದ್ಯುತ್‌ಗೆ ಬೇಡಿಕೆ ಹೆಚ್ಚಾಗುತ್ತಿದೆ, ವಿದ್ಯುತ್ ಬಿಲ್ ಸಹ ಹೆಚ್ಚಾಗುವ ಆತಂಕವಿದೆ.

ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಗೃಹಜ್ಯೋತಿ. ಈಗ ಸಿಲಿಂಡರ್ ಸಮಸ್ಯೆ ಈ ಯೋಜನೆಯ ಮೇಲೆ ಪರಿಣಾಮ ಬೀರಲಿದ್ದು, ವಿದ್ಯುತ್ ಪೂರೈಕೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆಯೇ ಎಂಬ ಆತಂಕವಿದೆ. ಆದರೆ ಇಂಡಕ್ಷನ್ ಸ್ಟವ್ ಬಳಕೆಗೆ ಹೆಚ್ಚು ವಿದ್ಯುತ್ ಅಗತ್ಯವಿಲ್ಲ, ವಿದ್ಯುತ್ ಬೇಡಿಕೆ ಹೆಚ್ಚಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೋಟೆಲ್‌, ಮನೆಗಳಲ್ಲಿ ಅಡುಗೆ ಮಾಡಲು ವಿದ್ಯುತ್‌ ಬಳಕೆ ಹೆಚ್ಚಾಗುತ್ತಿದೆ. ವಿದ್ಯುತ್ ಸ್ಟವ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಗೃಹಜ್ಯೋತಿ ಫಲಾನುಭವಿಗಳು ಇದೀಗ ವಿದ್ಯುತ್‌ ಸ್ಟವ್‌ಗಳ  ಬಳಕೆಗೆ ಒತ್ತು ನೀಡಿದ್ದಾರೆ.

ಇದರಿಂದ ಗೃಹಜ್ಯೋತಿ ಬಳಕೆ ಪ್ರಮಾಣ ಗರಿಷ್ಠ ಮಟ್ಟಕ್ಕೆ ಏರುವ ನಿರೀಕ್ಷೆ ಇದೆ. ಬೇಡಿಕೆಗೆ ತಕ್ಕಂತೆ ವಿದ್ಯುತ್‌ ಪೂರೈಕೆ ಮಾಡುವ ಬಹುದೊಡ್ಡ ಸವಾಲು ಎದುರಾಗಲಿದೆ. ಇದು ಪರೀಕ್ಷೆ ಸಮಯದಲ್ಲಿ ವಿದ್ಯುತ್ ಪೂರೈಕೆಗೆ ಹೊಡೆತ ನೀಡಲಿದೆ ಎಂದು ಅಂದಾಜಿಸಲಾಗಿತ್ತು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ಕೊರತೆ ಇಲ್ಲ ಎಂದು ಹೇಳಿದರೂ ಸಹ ಜನರು ಆತಂಕಗೊಂಡಿದ್ದಾರೆ. ಅಲ್ಲದೇ ಹಲವಾರು ಜನರು ಇಂಡಕ್ಷನ್ ಸ್ಟವ್ ಬಳಕೆ ಪ್ರಾರಂಭಿಸಿದ್ದಾರೆ. ಈ ಸ್ಟವ್ ಬಳಕೆಗೆ ಅಷ್ಟೊಂದು ವಿದ್ಯುತ್‌ ಖರ್ಚಾಗುವುದಿಲ್ಲ. 5 ಲಕ್ಷ ಜನರು ಬಳಸಿದರೂ ತೊಂದರೆಯಿಲ್ಲ. ರಾಜ್ಯದಲ್ಲಿ ವಿದ್ಯುತ್‌ ಕೊರತೆ ಇಲ್ಲ ಎಂದು ಬೆಸ್ಕಾಂ ಅಧಿಕಾರಿಗಳು ಹೇಳಿದ್ದಾರೆ.

ಅಡುಗೆ ಸಿಲಿಂಡರ್‌ಗಳ ಉಳಿತಾಯಕ್ಕಾಗಿ ಗೃಹ ಬಳಕೆಗೆ ಇಂಡಕ್ಷನ್ ಸ್ಟವ್ ಬಳಕೆ ಮಾಡಲಾಗುತ್ತಿದೆ. ಬೇಸಿಗೆ ಕಾಲದಲ್ಲಿ ತಾಪಮಾನ ಹೆಚ್ಚಿರುವುದರಿಂದಾಗಿ ಫ್ಯಾನ್, ಎಸಿ ಸೇರಿದಂತೆ ಇತರ ಮೂಲಗಳಿಗೆ ಹೆಚ್ಚು ವಿದ್ಯುತ್‌ ಬಳಕೆಯಾಗುತ್ತದೆ. ಅದರ ಜೊತೆಗೆ ಇಂಡಕ್ಷನ್ ಸ್ಟವ್ ಸೇರಿದ್ದು, ವಿದ್ಯುತ್ತಿನ ಬಳಕೆ ಮತ್ತಷ್ಟು ಹೆಚ್ಚಾಗುತ್ತಿದೆ.

ಗೃಹಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ ಈ ಹಿಂದೆ ಒಂದು ವರ್ಷ ಸರಾಸರಿ ಬಳಕೆಯ ವಿದ್ಯುತ್‌ ಅ೦ದಾಜು ಮಾಡಿ ಅದಕ್ಕೆ ಹೆಚ್ಚುವರಿ ಶೇ. 10ರಷ್ಟು ಸೇರ್ಪಡೆಗೊಳಿಸಿ ಗೃಹಜ್ಯೋತಿಯಡಿ ಅರ್ಹತಾ ಮೊತ್ತವನ್ನು ನಿರ್ಧರಿಸಲಾಗಿತ್ತು.

ಗ್ರಾಹಕರು ಒಂದು ವೇಳೆ ಅರ್ಹತೆಯ ಯೂನಿಟ್‌ಗಳನ್ನು ಮೀರಿದರೆ ಬಳಕೆ ಮಾಡಿದ ಹೆಚ್ಚುವರಿ ವಿದ್ಯುತ್‌ಗೆ ಶುಲ್ಕ ಪಾವತಿಸಬೇಕಾಗುತ್ತಿತ್ತು. ಗರಿಷ್ಠ 200 ಯೂನಿಟ್‌ಗಳ ಬಳಕೆಯನ್ನು ದಾಟಿದರೆ ಯೋಜನೆಯ ಸೌಲಭ್ಯ ಅನ್ವಯವಾಗುವುದಿಲ್ಲ. ಆಗ ಗ್ರಾಹಕರು ಸಂಪೂರ್ಣವಾದ ವಿದ್ಯುತ್ ಬಿಲ್ ಪಾವತಿಸಬೇಕಾಗುತ್ತದೆ.

ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಎರಡು ಸಲ ವಿದ್ಯುತ್‌ ದರವನ್ನು ಪರಿಷ್ಕರಣೆ ಮಾಡಿದೆ. ಗೃಹಜ್ಯೋತಿಯಡಿ ಉಚಿತ ವಿದ್ಯುತ್ ದೊರೆಯುತ್ತಿರುವುದರಿಂದಾಗಿ ಗೃಹ ಬಳಕೆಯ ಗ್ರಾಹಕರಿಗೆ ವಿದ್ಯುತ್‌ ದರ ಏರಿಕೆಯ ಬಿಸಿ ತಟ್ಟಿರಲಿಲ್ಲ.

ಆದರೆ ಈಗ ಸಿಲಿಂಡರ್‌ಗಳ ಕೊರತೆಯಿಂದಾಗಿ ಇಂಡಕ್ಷನ್ ಸ್ಟವ್ ಬಳಕೆ ಹೆಚ್ಚಿದ್ದು, ಗೃಹಜ್ಯೋತಿಯ ಮೂಲ ನಿಯಮದ ಗರಿಷ್ಠ ಮಿತಿ 200 ಯೂನಿಟ್‌ಗಳನ್ನು ದಾಟಿ ವಿದ್ಯುತ್‌ ಬಳಕೆಯಾಗುವ ಸಾಧ್ಯತೆ ಇದೆ. ಆಗ ಸಂಪೂರ್ಣ ವಿದ್ಯುತ್‌ ಬಿಲ್‌ ಪಾವತಿಸಬೇಕಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular