ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮತ್ತು ಲಭ್ಯತೆಯ ಕೊರತೆಯಿಂದಾಗಿ ಹೆಚ್ಚಿನ ಜನರು ಇಂಡಕ್ಷನ್ ಕುಕ್‌ಟಾಪ್‌ಗಳ (Induction Cooktop) ಮೊರೆ ಹೋಗುತ್ತಿದ್ದಾರೆ. ಆದರೆ, ಇಂಡಕ್ಷನ್ ಬಳಸುವುದರಿಂದ ಮಾಸಿಕ ವಿದ್ಯುತ್ ಬಿಲ್ ವಿಪರೀತವಾಗಿ ಏರುತ್ತಿದೆ ಎಂಬುದು ಬಹುತೇಕರ ದೂರು. ನೀವು ಕೂಡ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಈ ಕೆಳಗಿನ ಸರಳ ಟ್ರಿಕ್ಸ್ ಅಳವಡಿಸಿಕೊಳ್ಳುವ ಮೂಲಕ ವಿದ್ಯುತ್ ಬಳಕೆಯನ್ನು ಗಮನಾರ್ಹವಾಗಿ ತಗ್ಗಿಸಬಹುದು.
ಇಂಡಕ್ಷನ್ ಎಷ್ಟು ವಿದ್ಯುತ್ ಬಳಸುತ್ತದೆ?
ಹೆಚ್ಚಿನ ಇಂಡಕ್ಷನ್ ಕುಕ್‌ಟಾಪ್‌ಗಳು 1200W ನಿಂದ 2000W ವರೆಗಿನ ಸಾಮರ್ಥ್ಯದಲ್ಲಿ ಕೆಲಸ ಮಾಡುತ್ತವೆ.
ಲೆಕ್ಕಾಚಾರ: 2000W ಸಾಮರ್ಥ್ಯದ ಕುಕ್ಕರ್ ಒಂದು ಗಂಟೆಗೆ ಸುಮಾರು 2 ಯೂನಿಟ್ ವಿದ್ಯುತ್ ಬಳಸುತ್ತದೆ.
ಮಾಸಿಕ ಬಳಕೆ: ದಿನಕ್ಕೆ 1 ರಿಂದ 2 ಗಂಟೆ ಬಳಸಿದರೆ ತಿಂಗಳಿಗೆ ಸುಮಾರು 60 ರಿಂದ 120 ಯೂನಿಟ್ ವಿದ್ಯುತ್ ಬಳಕೆಯಾಗುತ್ತದೆ.
ದಿನನಿತ್ಯದ ಬಳಕೆಯಿಂದ ಇದು ನಿಮ್ಮ ಮಾಸಿಕ ಬಿಲ್‌ಗೆ 60 ರಿಂದ 120 ಯೂನಿಟ್‌ಗಳನ್ನು ಸೇರಿಸಬಹುದು. ಇದನ್ನು ಕಡಿಮೆ ಮಾಡಲು ಇಲ್ಲಿವೆ ಕೆಲವು ಸ್ಮಾರ್ಟ್ ಟಿಪ್ಸ್:
ಸರಿಯಾದ ಪಾತ್ರೆ ಬಳಸಿ: ಇಂಡಕ್ಷನ್ ಸ್ನೇಹಿ (Magnetic bottom) ಪಾತ್ರೆಗಳನ್ನೇ ಬಳಸಿ. ಪಾತ್ರೆಯ ಗಾತ್ರವು ಕುಕ್‌ಟಾಪ್‌ನ ಬರ್ನರ್ ಗಾತ್ರಕ್ಕೆ ಸರಿಹೊಂದಲಿ.
ಪವರ್ ಸೆಟ್ಟಿಂಗ್ ಗಮನಿಸಿ: ಎಲ್ಲದಕ್ಕೂ ಹೈ-ವೋಲ್ಟೇಜ್ ಬೇಡ. ನೀರು ಕುದಿಸಲು ಮಾತ್ರ ಹೈ-ಪವರ್ ಬಳಸಿ, ಉಳಿದಂತೆ 800W-1000W ಸೆಟ್ಟಿಂಗ್‌ನಲ್ಲಿ ಅಡುಗೆ ಮಾಡಿ.
ಮುಚ್ಚಳ ಹಾಕಿ ಅಡುಗೆ ಮಾಡಿ: ಪಾತ್ರೆಗೆ ಮುಚ್ಚಳ ಹಾಕುವುದರಿಂದ ಅಡುಗೆ ಶೇ. 25-30 ರಷ್ಟು ವೇಗವಾಗಿ ಆಗುತ್ತದೆ ಮತ್ತು ವಿದ್ಯುತ್ ಉಳಿತಾಯವಾಗುತ್ತದೆ.
ಪ್ರೀ-ಸೋಕಿಂಗ್ (ನೆನೆಸುವುದು): ಬೇಳೆ ಕಾಳುಗಳನ್ನು ಅಡುಗೆ ಮಾಡುವ ಮುನ್ನ ಅರ್ಧ ಗಂಟೆ ನೆನೆಸಿಟ್ಟರೆ ಬೇಗನೆ ಬೇಯುತ್ತವೆ.
ಬ್ಯಾಚ್ ಕುಕ್ಕಿಂಗ್: ಒಂದರ ಹಿಂದೆ ಒಂದರಂತೆ ಅಡುಗೆ ಮಾಡಿ. ಇದರಿಂದ ಕುಕ್‌ಟಾಪ್ ಈಗಾಗಲೇ ಬಿಸಿಯಾಗಿರುವುದರಿಂದ ಪದೇ ಪದೇ ಬಿಸಿ ಮಾಡಲು ವ್ಯಯವಾಗುವ ವಿದ್ಯುತ್ ಉಳಿಯುತ್ತದೆ.
ಶುಚಿಯಾಗಿಡಿ: ಕುಕ್‌ಟಾಪ್‌ನ ಗಾಜಿನ ಮೇಲ್ಮೈ ಸ್ವಚ್ಛವಾಗಿದ್ದರೆ ಶಾಖವು ನೇರವಾಗಿ ಪಾತ್ರೆಗೆ ತಲುಪುತ್ತದೆ.
ಬೇಗನೆ ಆಫ್ ಮಾಡಿ: ಅಡುಗೆ ಮುಗಿಯುವ 2 ನಿಮಿಷ ಮೊದಲು ಸ್ವಿಚ್ ಆಫ್ ಮಾಡಿ, ಅದರ ಮೇಲಿರುವ ಶಾಖದಲ್ಲೇ ಅಡುಗೆ ಪೂರ್ಣಗೊಳ್ಳಲು ಬಿಡಿ.
ಇಂಡಕ್ಷನ್ vs ಗ್ಯಾಸ್: ಯಾವುದು ಲಾಭದಾಯಕ?
ಅನೇಕರು ಗ್ಯಾಸ್ ಮತ್ತು ಇಂಡಕ್ಷನ್ ನಡುವಿನ ವ್ಯತ್ಯಾಸ ತಿಳಿಯಲು ಬಯಸುತ್ತಾರೆ. ಸಂಶೋಧನೆಗಳ ಪ್ರಕಾರ, ಇಂಡಕ್ಷನ್ ಅಡುಗೆಯು ಗ್ಯಾಸ್‌ಗಿಂತ ಹೆಚ್ಚು ಪರಿಣಾಮಕಾರಿ:
ದಕ್ಷತೆ: ಇಂಡಕ್ಷನ್ ಶೇ. 85-90 ರಷ್ಟು ಶಕ್ತಿಯನ್ನು ನೇರವಾಗಿ ಶಾಖವಾಗಿ ಪರಿವರ್ತಿಸುತ್ತದೆ. ಆದರೆ ಗ್ಯಾಸ್ ಸ್ಟೌವ್‌ಗಳು ಕೇವಲ ಶೇ. 40-50 ರಷ್ಟು ಮಾತ್ರ ದಕ್ಷತೆ ಹೊಂದಿರುತ್ತವೆ (ಹೆಚ್ಚಿನ ಶಾಖ ವ್ಯರ್ಥವಾಗುತ್ತದೆ).
ಸಮಯ ಉಳಿತಾಯ: ಇಂಡಕ್ಷನ್‌ನಲ್ಲಿ ಅಡುಗೆ ಬೇಗನೆ ಆಗುವುದರಿಂದ ಒಟ್ಟಾರೆ ಇಂಧನ ಬಳಕೆ ಕಡಿಮೆಯಾಗುತ್ತದೆ. ಗ್ಯಾಸ್ ಬೆಲೆ ಏರಿಕೆ ಸಮಯದಲ್ಲಿ ಇದು ಅತ್ಯಂತ ಅಗ್ಗದ ಆಯ್ಕೆಯಾಗಿದೆ.

