HomeKarnatakaGood News: ಬೆಳಗಾವಿಯಿಂದ ವಿವಿಧ ನಗರಕ್ಕೆ ವಿಮಾನ ಸೇವೆ

Good News: ಬೆಳಗಾವಿಯಿಂದ ವಿವಿಧ ನಗರಕ್ಕೆ ವಿಮಾನ ಸೇವೆ

ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿ ವಿಮಾನಯಾನದ ವಿಚಾರದಲ್ಲಿ ಸದಾ ಸುದ್ದಿಯಲ್ಲಿರುತ್ತದೆ. ಇಲ್ಲಿಂದ ಹಲವು ವಿಮಾನಗಳು ಹಾರಾಟವನ್ನು ಸ್ಥಗಿತಗೊಳಿಸಿವೆ. ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾ ರಾಜ್ಯಕ್ಕೆ ಅನುಕೂಲವಾಗುವಂತೆ ಇದ್ದರೂ ಸಹ ಬೆಳಗಾವಿ ವಿಮಾನ ನಿಲ್ದಾಣ ವಿಮಾನಯಾನ ಸಂಸ್ಥೆಗಳನ್ನು ಆಕರ್ಷಿಸಲು ಸಾಧ್ಯವಾಗುತ್ತಿಲ್ಲ.

ಈಗ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಬೆಳಗಾವಿಯಿಂದ ವಿವಿಧ ನಗರಕ್ಕೆ ವಿಮಾನ ಸಂಪರ್ಕ ಕಲ್ಪಿಸಲು ಪ್ರಯತ್ನ ನಡೆಸಿದ್ದಾರೆ. ಈ ಕುರಿತು ಅವರು ಇಂಡಿಗೋ ಸಂಸ್ಥೆ ಜೊತೆ ಮಾತುಕತೆ ನಡೆಸಿದ್ದು, ಪತ್ರವನ್ನು ಬರೆದಿದ್ದಾರೆ.

ಈ ಬಗ್ಗೆ ಜಗದೀಶ್ ಶೆಟ್ಟರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ‘ಮುಂಬೈ, ಚೆನ್ನೈ, ಪುಣೆ, ಸೂರತ್ ನಗರಗಳಿಗೆ ಇಂಡಿಗೋ ವಿಮಾನಯಾನ ಸೇವೆಯನ್ನು ಒದಗಿಸುವಂತೆ ಇಂಡಿಗೋ ಸಂಸ್ಥೆಯ ಮುಖ್ಯಸ್ಥರಾದ (ಮಾರಾಟ ವಿಭಾಗ) ಶ್ರೀ ಅನಶೂಲ ಸೇಟಿ ಇವರೊಡನೆ ದೂರವಾಣಿಯಲ್ಲಿ ಚರ್ಚಿಸಲಾಯಿತು’ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

‘ಮುಂಬೈ ನಗರಕ್ಕೆ ಬೆಳಗಾವಿಯಿಂದ ದಿನನಿತ್ಯ ನೂರಾರು ವ್ಯಾಪಾರಸ್ಥರು ಪ್ರಯಾಣಿಸುತ್ತಿರುತ್ತಾರೆ. ಆದರೆ ಮುಂಬೈ ನಗರಕ್ಕೆ ಸದ್ಯ ಯಾವುದೇ ವಿಮಾನಯಾನ ಸೇವೆ ಲಭ್ಯವಿಲ್ಲ, ಆದಕಾರಣ ಬೆಳಗಾವಿಯಿಂದ ಮುಂಬೈ ನಗರಕ್ಕೆ ಇಂಡಿಗೋ ಸಂಸ್ಥೆಯು ವಿಮಾನಯಾನ ಸೇವೆ ಒದಗಿಸಿದ್ದಲ್ಲಿ ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಲಿದೆ ಎಂದು ಚರ್ಚೆಯಲ್ಲಿ ತಿಳಿಸಲಾಯಿತು’ ಎಂದು ತಿಳಿಸಿದ್ದಾರೆ.

‘ಅದರಂತೆ ಪೂಣೆ, ಸೂರತ್, ಚೆನ್ನೈದಂತಹ ಪ್ರಮುಖ ನಗರಗಳಿಗೂ ಸಹ ವಿಮಾನ ಸೇವೆ ಒದಗಿಸುವ ಬಗ್ಗೆ ಸಾರ್ವಜನಿಕರಿಂದ ಬೇಡಿಕೆಯಿದ್ದು, ಇದನ್ನು ಸಹ ಪರಗಣಿಸುವಂತೆ ಇಂಡಿಗೋ ಸಂಸ್ಥೆಯ ಮುಖ್ಯಸ್ಥರಲ್ಲಿ ಪ್ರಸ್ತಾಪಿಸಲಾಯಿತು’ ಎಂದು ಪೋಸ್ಟ್ ಹಾಕಿದ್ದಾರೆ.

‘ಮುಂಬರುವ ದಿನಗಳಲ್ಲಿ ಬೆಳಗಾವಿಯಿಂದ ಮುಂಬೈ ನಗರಕ್ಕೆ ಇಂಡಿಗೋ ಸಂಸ್ಥೆಯು ವಿಮಾನಯಾನ ಸೇವೆ ಒದಗಿಸುವ ಬಗ್ಗೆ ಸ್ಪಷ್ಟ ಭರವಸೆಯನ್ನು ಇಂಡಿಗೋ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಸೇಟಿ ಅವರು ನೀಡಿದ್ದು ಮತ್ತು ಅದೇ ರೀತಿಯಾಗಿ ಚೆನ್ನೈ, ಪುಣೆ, ಸುರತ್ ಗಳಂತಹ ಪ್ರಮುಖ ನಗರಗಳಿಗೂ ಈ ಸೇವೆಯನ್ನು ವಿಸ್ತರಿಸುವ ಬಗ್ಗೆ ವಿಷಯ ಅವಲೋಕಿಸುವುದಾಗಿ ತಿಳಿಸಿದರು’ ಎಂದು ಶೆಟ್ಟರ್ ಹೇಳಿದ್ದಾರೆ.

ಶೆಟ್ಟರ್ ಬರೆದಿರುವ ಪತ್ರದ ವಿವರ: ಈ ಕುರಿತು ಜಗದೀಶ್ ಶೆಟ್ಟರ್ ಇಂಡಿಗೋ ಸಂಸ್ಥೆಗೆ ಪತ್ರವನ್ನು ಬರೆದಿದ್ದಾರೆ. ಈ ಪತ್ರವು ಬೆಳಗಾವಿ (ಕರ್ನಾಟಕ) ಇಂದ ಇಂಡಿಗೋ ವಿಮಾನ (INDIGO FLIGHT) ಸೇವೆಗಳ ಪ್ರಾರಂಭದ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ.

ಕರ್ನಾಟಕ ರಾಜ್ಯದ ಬೆಳಗಾವಿ ವಿಮಾನ ನಿಲ್ದಾಣವು ಸ್ವಾತಂತ್ರ್ಯ ಪೂರ್ವದಿಂದಲೂ ಸ್ಥಾಪಿತವಾಗಿ ಕಾರ್ಯಾಚರಣೆಯಲ್ಲಿದ್ದು, ರಾಜ್ಯದ ಅತ್ಯಂತ ಹಳೆಯ ವಿಮಾನ ನಿಲ್ದಾಣಗಳಲ್ಲಿ ಒಂದೆಂಬ ಹೆಗ್ಗಳಿಕೆಯನ್ನು ಹೊಂದಿದೆ. ಈ ನಗರವು ಉತ್ತರ ಕರ್ನಾಟಕ ಭಾಗದ ಕೇಂದ್ರ ಬಿಂದುವಾಗಿದ್ದು, ಪ್ರಸ್ತುತ ಹಲವಾರು ನಗರಗಳಿಗೆ ವಿಮಾನ ಸಂಪರ್ಕವನ್ನು ಹೊಂದಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಎಲ್ಲಾ ಮಾರ್ಗಗಳು ವಾಣಿಜ್ಯಿಕವಾಗಿ ಯಶಸ್ವಿಯಾಗಿವೆ ಎಂದು ಸಾಬೀತಾಗಿದೆ.

ಬೆಳಗಾವಿ ನಗರವು ಶೈಕ್ಷಣಿಕವಾಗಿ ಅತ್ಯಂತ ಮುಂದುವರಿದಿದ್ದು, ಇಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ಮತ್ತು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ (RCU) ಸ್ಥಾಪನೆಯಾಗಿವೆ. ಇದರೊಂದಿಗೆ ಹಲವಾರು ಇಂಜಿನಿಯರಿಂಗ್ ಕಾಲೇಜುಗಳು, ಎರಡು ವೈದ್ಯಕೀಯ ಮತ್ತು ದಂತವೈದ್ಯಕೀಯ ಕಾಲೇಜುಗಳು ಇಲ್ಲಿವೆ.

ಅಲ್ಲದೆ, ಏಷ್ಯಾದ ಅತಿದೊಡ್ಡ ಮತ್ತು ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ ಕೆ.ಎಲ್.ಇ (KLE) ಆಸ್ಪತ್ರೆಯೂ ಇಲ್ಲಿದೆ. ಕೈಗಾರಿಕಾ ಕ್ಷೇತ್ರದಲ್ಲೂ ಸಹ ಈ ನಗರವು ಅತ್ಯಂತ ಪ್ರಗತಿಪರವಾಗಿದೆ. ಮುಂಬರುವ ದಿನಗಳಲ್ಲಿ, ಭಾರತವು ಉತ್ಪಾದನಾ ಮತ್ತು ರಫ್ತು ವಲಯಗಳಲ್ಲಿ ಜಾಗತಿಕ ಪೂರೈಕೆದಾರರ ಕೇಂದ್ರವಾಗಿ (Global Suppliers HUB) ಹೊರಹೊಮ್ಮಲಿದೆ.

ಪ್ರಸ್ತುತ ಇಂಡಿಗೋ ವಿಮಾನಗಳು ನವದೆಹಲಿ, ಹೈದರಾಬಾದ್, ಅಹಮದಾಬಾದ್ ಮತ್ತು ಬೆಂಗಳೂರು ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಲ್ಲಿನ ಉದ್ಯಮಿಗಳು ಆಗಾಗ್ಗೆ ಈ ನಗರಗಳಿಗೆ ಭೇಟಿ ನೀಡುತ್ತಿರುತ್ತಾರೆ.

ಕೈಗಾರಿಕೋದ್ಯಮಿಗಳು, ವೈದ್ಯರು, ವಕೀಲರು, ಇಂಜಿನಿಯರ್‌ಗಳು, ವಾಸ್ತುಶಿಲ್ಪಿಗಳು ಮತ್ತು ಬಿಲ್ಡರ್‌ಗಳನ್ನು ಒಳಗೊಂಡಂತೆ ಇಲ್ಲಿನ ಸ್ಥಳೀಯ ನಿವಾಸಿಗಳು ನನ್ನಲ್ಲಿ ಒಂದು ಮನವಿಯನ್ನು ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಬೆಳಗಾವಿ ವಿಮಾನ ನಿಲ್ದಾಣದಿಂದ ಮುಂಬೈ, ಚೆನ್ನೈ, ಪುಣೆ ಮತ್ತು ಸೂರತ್‌ನಂತಹ ಪ್ರಮುಖ ನಗರಗಳಿಗೆ ಇಂಡಿಗೋ ವಿಮಾನಯಾನ ಸಂಸ್ಥೆಯು ತನ್ನ ಸೇವೆಗಳನ್ನು ಪ್ರಾರಂಭಿಸಬೇಕೆಂದು ಅವರು ಬಯಸುತ್ತಿದ್ದಾರೆ.

ಆದ್ದರಿಂದ ಬೆಳಗಾವಿ ನಗರದಿಂದ ವಿವಿಧ ನಗರಕ್ಕೆ ಇಂಡಿಗೋ ವಿಮಾನ ಸೇವೆ ಆರಂಭಿಸಬೇಕು ಎಂದು ಮನವಿ ಮಾಡುತ್ತೇನೆ ಎಂದು ಜಗದೀಶ್ ಶೆಟ್ಟರ್ ಪತ್ರದಲ್ಲಿ ಒತ್ತಾಯಿಸಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular