HomeKarnatakaಮೇ 1ರಿಂದ ಶಿವಮೊಗ್ಗ-ಬೆಂಗಳೂರು ವಿಮಾನ ರದ್ದು

ಮೇ 1ರಿಂದ ಶಿವಮೊಗ್ಗ-ಬೆಂಗಳೂರು ವಿಮಾನ ರದ್ದು

ಶಿವಮೊಗ್ಗ-ಬೆಂಗಳೂರು ಸೇರಿದಂತೆ ಹಲವು ವಿಮಾನ ಸೇವೆಗಳು ಮೇ 1ರಿಂದ ರದ್ದಾಗುವ ಸಾಧ್ಯತೆ ಇದೆ. ಕರ್ನಾಟಕದ ವಿವಿಧ ನಗರಕ್ಕೆ ಸಂಪರ್ಕ ಕಲ್ಪಿಸುತ್ತಿರುವ ಇಂಡಿಗೋ ವಿಮಾನಯಾನ ಸಂಸ್ಥೆ ಏಪ್ರಿಲ್ 30ರ ನಂತರ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದು, ಈಗ ಭಾರೀ ಚರ್ಚೆಗೆ ಕಾರಣವಾಗಿದೆ.

131 ನಗರಗಳ ವಿಮಾನ ಸೇವೆಯನ್ನು ಏಪ್ರಿಲ್ 30, 2026ಕ್ಕೆ ಅಂತ್ಯಗೊಳಿಸುವ ಸೂಚನೆಯನ್ನು ಇಂಡಿಗೋ ನೀಡಿದೆ. ಸದ್ಯ ವೆಬ್‌ಸೈಟ್‌ನಲ್ಲಿ ಏಪ್ರಿಲ್ 30ರ ತನಕ ಮಾತ್ರ ಸೀಟು ಕಾಯ್ದಿರಿಸಲು ಅನುಮತಿ ನೀಡಲಾಗಿದೆ.

ಆದರೆ ವಿಮಾನಯಾನ ರದ್ದಾಗುವ ಕುರಿತು ಇಂಡಿಗೋ ಯಾವುದೇ ಮಾಹಿತಿ ನೀಡಿಲ್ಲ. ಸದ್ಯಕ್ಕೆ ಮೇ 1ಕ್ಕೆ ಯಾವುದೇ ಬುಕ್ಕಿಂಗ್ ಸ್ವೀಕಾರ ಮಾಡುತ್ತಿಲ್ಲ. ಈ ಕುರಿತು ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತದ ಬಳಿಕ ಡಿಜಿಸಿಎ ವಿಮಾನಯಾನ ನಿಯಮಗಳಲ್ಲಿ ಭಾರೀ ಬದಲಾವಣೆ ಮಾಡಿದೆ. ಇದರ ನೇರ ಪರಿಣಾಮ ಇಂಡಿಗೋಗೆ ತಟ್ಟಿದೆ. ದೇಶೀಯ ವಿಮಾನ ಸೇವೆ ನೀಡುವಲ್ಲಿ ಇಂಡಿಗೋ ಮೊದಲ ಸ್ಥಾನದಲ್ಲಿದೆ.

ಪೈಲೆಟ್‌ಗಳ ಕೆಲಸದ ಅವಧಿ ಮತ್ತು ವಿಮಾನ ಹಾರಾಟದ ಹೊಸ ನಿಯಮಗಳ ಕಾರಣ ಇಂಡಿಗೋ ಸಂಸ್ಥೆಗೆ ಹಲವು ನಗರದ ವಿಮಾನ ಸೇವೆ ನಿಲ್ಲಿಸಬೇಕಾಗಿದೆ. ಪ್ರಮುಖವಾಗಿ ಪೈಲೆಟ್‌ಗಳ ಕೊರತೆ ಸಂಸ್ಥೆಯನ್ನು ಕಾಡಲಿದೆ.

ಆದ್ದರಿಂದ ಇಂಡಿಗೋ ಚಿಕ್ಕ ನಗರಗಳಿಗೆ ಹಾರಾಟ ನಡೆಸುವ ಎಟಿಆರ್ ಮಾದರಿ ವಿಮಾನ ಸೇವೆಯನ್ನು ನಿಲ್ಲಿಸಲು ಮುಂದಾಗಿದೆ. ಆದ್ದರಿಂದ ಬೆಂಗಳೂರು-ಶಿವಮೊಗ್ಗ ನಡುವಿನ ಪ್ರತಿದಿನದ ವಿಮಾನ ಸೇವೆ ರದ್ದಾಗಲಿದೆ.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬೆಂಗಳೂರು ನಗರದಿಂದ ಪ್ರತಿದಿನ ವಿಮಾನ ಸೇವೆ ಇದೆ. ಬೆಂಗಳೂರು-ಶಿವಮೊಗ್ಗ ಮಾರ್ಗಕ್ಕೆ ಬೇಡಿಕೆಯೂ ಹೆಚ್ಚಿದೆ. ಆದರೆ ಈಗ ವಿಮಾನ ಸೇವೆ ರದ್ದುಗೊಂಡರೆ ಮಲೆನಾಡು ಮತ್ತು ರಾಜಧಾನಿ ನಡುವಿನ ವಿಮಾನ ಸಂಪರ್ಕ ಕಡಿತಗೊಳ್ಳಲಿದೆ.

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮುಂಬರುವ ದಿನಗಳಲ್ಲಿ ನೈಟ್ ಲ್ಯಾಂಡಿಂಗ್ ಸೌಲಭ್ಯವೂ ಪೂರ್ಣಗೊಳ್ಳಲಿದ್ದು, ಮುಂಬೈ ಮತ್ತು ದೆಹಲಿಯಂತಹ ಮಹಾನಗರಗಳಿಗೆ ನೇರ ಸಂಪರ್ಕ ಸಾಧ್ಯವಾಗಲಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular