ಬೆಂಗಳೂರು: ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ ಪತ್ರ ಪತ್ತೆಯಾಗಿರುವ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಲಖನೌ ದಿಂದ ಬೆಂಗಳೂರಿನ ಕೆಐಎಬಿಗೆ ಆಗಮಿಸಿದ್ದ ಇಂಡೊಗೋ ವಿಮಾನದಲ್ಲಿ ಈ ಘಟನೆ ಅನ್ಡೆದಿದೆ. ಟರ್ಮಿನಲ್ 1ರಲ್ಲಿ ಬಂದಿಳಿದಿದ್ದ ವಿಮಾನದಲ್ಲಿ ಬೆದರಿಕೆ ಪತ್ರ ಪತ್ತೆಯಾಗಿದೆ. ವಿಮನ ಹಾರಾಟ ಮಾಡುತ್ತಿದ್ದಾಗಲೇ ಸಿಬ್ಬಂದಿಗೆ ಬೆದರಿಕೆ ಪತ್ರ ಕಂಡುಬಂದಿದೆ. ಈ ಬಗ್ಗೆ ಎಟಿಸಿಗೆ ಪೈಲಟ್ ಮಾಹಿತಿ ನೀಡಿದ್ದಾರೆ.
ಬೆದರಿಕೆ ಪತ್ರ ಪತ್ತೆ ಹಿನ್ನೆಲೆಯಲ್ಲಿ ವಿಮಾನವನ್ನು ರನ್ ವೇಪಕ್ಕದಲ್ಲಿ ನಿಲ್ಲಿಸಿ, ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಕ್ರೆಳಗಿಳಿಸಿ ತೀವ್ರ ತಪಾಸಣೆ ನಡೆಸಲಾಗಿದೆ. ಶ್ವಾನ ದಳ, ಸಿಐಎಸ್ ಎಫ್, ಪೊಲೀಸರಿಂದ ಪರಿಶೀಲನೆ ನಡೆಸಲಾಗಿದೆ. ಫ್ಲೈಟ್ ನಲ್ಲಿದ್ದ ಪ್ರಯಾಣಿಕರೇ ಬೆದರಿಕೆ ಪತ್ರ ಇಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

