ನಿನ್ನೆ ( ಜುಲೈ 7 ) ಟ್ರೆಂಟ್ ಬ್ರಿಡ್ಜ್‌ನ ನಾಟಿಂಗ್‌ಹ್ಯಾಮ್ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಮೂರನೇ ಟಿ ಟ್ವೆಂಟಿ ಪಂದ್ಯದಲ್ಲಿ ಇಂಗ್ಲೆಂಡ್ 125 ರನ್‌ಗಳ ಬೃಹತ್ ಗೆಲುವನ್ನು ದಾಖಲಿಸುವ ಮೂಲಕ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ 2-0 ಮುನ್ನಡೆಯನ್ನು ಸಾಧಿಸಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 201 ರನ್ ಕಲೆಹಾಕಿ ಭಾರತಕ್ಕೆ 202 ರನ್‌ಗಳ ಬೃಹತ್ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾಗಿ ನೆಲ ಕಚ್ಚಿದ ಭಾರತ ಕೇವಲ 11.4 ಓವರ್‌ಗಳಲ್ಲಿ 76 ರನ್‌ಗೆ ಆಲ್‌ಔಟ್ ಆಯಿತು.
ಇನ್ನು ಇಂಗ್ಲೆಂಡ್ ನೀಡಿದ ಗುರಿ ಬೆನ್ನಟ್ಟಿದ ಭಾರತ ತಂಡದ ಪರ ಎಲ್ಲ ಆಟಗಾರರೂ ವಿಫಲರಾದರು. ಯಾವೊಬ್ಬ ಆಟಗಾರ ಸಹ 20 ರನ್ ಗಡಿ ಮುಟ್ಟಲಿಲ್ಲ. ಹೀಗೆ ಇಂಗ್ಲೆಂಡ್ ಬೌಲರ್‌ಗಳ ದಾಳಿಗೆ ಮಂಕಾಗಿ ಮುಗ್ಗರಿಸಿದ ಭಾರತ ಸರಣಿ ಸೋಲಿನ ಭೀತಿಯೊಂದಿಗೆ ಬೇಡವಾದ ಅತಿ ಹೀನಾಯ ದಾಖಲೆಯೊಂದನ್ನೂ ಸಹ ಬರೆದಿದೆ.
ಹೌದು, ಈ ಸೋಲು ಭಾರತ ಟಿ ಟ್ವೆಂಟಿ ಇತಿಹಾಸದಲ್ಲಿ ಕಂಡ ಅತಿ ದೊಡ್ಡ ರನ್ ಅಂತರದ ಸೋಲು ಎಂಬ ಕೆಟ್ಟ ದಾಖಲೆಯಾಗಿದೆ. ಈ ಹಿಂದೆ 2019ರಲ್ಲಿ ನ್ಯೂಜಿಲೆಂಡ್ ವಿರುದ್ಧ ವೆಲ್ಲಿಂಗ್‌ಟನ್‌ಲ್ಲಿ ಭಾರತ 80 ರನ್‌ಗಳ ಸೋಲನ್ನು ಕಂಡಿದ್ದನ್ನು ಹಿಂದಿಕ್ಕಿದೆ.
ಟಿ20 ಇತಿಹಾಸದಲ್ಲಿ ಭಾರತ ಕಂಡ ಅತಿದೊಡ್ಡ ರನ್ ಅಂತರದ ಸೋಲುಗಳು
ಇಂಗ್ಲೆಂಡ್ ವಿರುದ್ಧ 125 ರನ್‌ಗಳಿಂದ, ಟ್ರೆಂಟ್ ಬ್ರಿಡ್ಜ್, 2026
ನ್ಯೂಜಿಲೆಂಡ್ ವಿರುದ್ಧ 80 ರನ್‌ಗಳಿಂದ, ವೆಲ್ಲಿಂಗ್ಟನ್, 2019
ದಕ್ಷಿಣ ಆಫ್ರಿಕಾ ವಿರುದ್ಧ 76 ರನ್‌ಗಳಿಂದ, ಅಹಮದಾಬಾದ್, 2026
ದಕ್ಷಿಣ ಆಫ್ರಿಕಾ ವಿರುದ್ಧ 51 ರನ್‌ಗಳಿಂದ, ಮುಲ್ಲಾನ್‌ಪುರ, 2025
ನ್ಯೂಜಿಲೆಂಡ್ ವಿರುದ್ಧ 50 ರನ್‌ಗಳಿಂದ, ವಿಶಾಖಪಟ್ಟಣ, 2026

