ಜನ್ಮದಿನದಂದು 18 ವರ್ಷದ ಮಗನಿಗೆ 5 ಕೋಟಿ ರೂ. ಲ್ಯಾಂಬೋರ್ಗಿನಿ ಗಿಫ್ಟ್ ನೀಡಿದ ಉದ್ಯಮಿ

ನವದೆಹಲಿ: ಜನ್ಮದಿನದಂದು ಉಡುಗೊರೆ ನೀಡುವ ಮೂಲಕ ಪೋಷಕರು ತಮ್ಮ ಮಕ್ಕಳನ್ನು ಅಚ್ಚರಿಗೊಳಿಸುವುದು ಹೊಸದೇನಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಉಡುಗೊರೆಯ ವ್ಯಾಖ್ಯಾನದಲ್ಲಿ ಬದಲಾವಣೆಯಾಗಿದೆ. ಪೋಷಕರು ತಮ್ಮ ಮಕ್ಕಳು ಬಯಸಿದ ಬೆಲೆಬಾಳುವ ವಸ್ತುಗಳನ್ನು ಆಯ್ಕೆ ಮಾಡುವುದನ್ನು ಕೂಡ ನಾವು ನೋಡಬಹುದಾಗಿದೆ.

ಮಗನ 18 ನೇ ಹುಟ್ಟುಹಬ್ಬದಂದು ಭಾರತೀಯ ಉದ್ಯಮಿಯೊಬ್ಬರು ಹೊಚ್ಚಹೊಸ ಲ್ಯಾಂಬೋರ್ಗಿನಿ ಹುರಾಕನ್ STO(ಸೂಪರ್ ಟ್ರೋಫಿಯೊ ಓಮೊಲೊಗಾಟೊ) ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ತರುಣ್ ರುಂಗ್ಟಾ ಅವರು ಮಾರ್ಚ್ 2024 ರಲ್ಲಿ ಉಡುಗೊರೆಯನ್ನು ಸ್ವೀಕರಿಸಿದರು, ಆದರೆ, ಕಾರಿನ ವೀಡಿಯೊವನ್ನು ಅವರು Instagram ನಲ್ಲಿ ಪೋಸ್ಟ್ ಮಾಡಿದ ನಂತರ ವಿಷಯ ಬೆಳಕಿಗೆ ಬಂದಿದೆ. ಉತ್ಸುಕನಾದ ಹುಡುಗ ತನ್ನ ಸಂತೋಷವನ್ನು ತೋರಿಸಲು ವಿವಿಧ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿದ್ದು, ಉಡುಗೊರೆ ನೀಡಿದ ತನ್ನ ತಂದೆಗೆ ಧನ್ಯವಾದ ಹೇಳಿದ್ದಾನೆ.

ಯುಎಇಯ ಉದ್ಯಮಿ,ವಿವೇಕ್ ಕುಮಾರ್ ರುಂಗ್ಟಾ ಅವರು ಲ್ಯಾಂಬೋರ್ಗಿನಿ ಹ್ಯುರಾಕನ್ STO ಗಾಗಿ 5 ಕೋಟಿ ರೂ.ಗಿಂತ ಹೆಚ್ಚು ಖರ್ಚು ಮಾಡಿದ್ದಾರೆ. ಅವರು ಮಧ್ಯಪ್ರಾಚ್ಯದಲ್ಲಿ ಹೂಡಿಕೆ ಸಂಸ್ಥೆಯಾದ ವಿಕೆಆರ್ ಗ್ರೂಪ್‌ನ ಮಾಲೀಕರಾಗಿದ್ದಾರೆ.

ನನ್ನ ಕನಸಿನ ಕಾರಿನ ಉಡುಗೊರೆಯೊಂದಿಗೆ ನನ್ನ 18 ನೇ ಹುಟ್ಟುಹಬ್ಬವನ್ನು ಸ್ಮರಣೀಯವಾಗಿಸಿದ ನನ್ನ ಅದ್ಭುತ ತಂದೆ ವಿವೇಕ್ ಕುಮಾರ್ ರುಂಗ್ತಾ ಅವರಿಗೆ ಪ್ರೀತಿ ಪೂರ್ವಕ ಕೃತಜ್ಞತೆಗಳು! ನಿಮ್ಮ ಪ್ರೀತಿ ಮತ್ತು ಬೆಂಬಲ ನನಗೆ ಎಲ್ಲವನ್ನೂ ಅರ್ಥೈಸುತ್ತದೆ ಎಂದು ತರುಣ್ ರುಂಗ್ಟಾ ತಮ್ಮ ವೀಡಿಯೊದ ಶೀರ್ಷಿಕೆಯಲ್ಲಿ ಹೇಳಿದ್ದಾರೆ.

ತರುಣ್ ತನ್ನ ಉಡುಗೊರೆಯ ಅನಾವರಣವನ್ನು ಬಟ್ಟೆಯನ್ನು ತೆಗೆಯುತ್ತಿದ್ದಂತೆ ಸಂತೋಷ ವ್ಯಕ್ತಪಡಿಸುತ್ತಾರೆ.

https://www.instagram.com/reel/C4EAk-iB42p/

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read