ಜೈಪುರ : ಭಾರತೀಯ ಸೇನೆಯ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದ್ದು, ವಿಡಿಯೋ ವೈರಲ್ ಆಗಿದೆ.
ರಾಜಸ್ಥಾನದ ಜೈಪುರಕ್ಕೆ ತೆರಳುತ್ತಿದ್ದ ಚೇತಕ್ ಹೆಲಿಕಾಪ್ಟರ್ ನ ಎಂಜಿನ್ ಚಿಪ್ ವಾರ್ನಿಂಗ್ ಲೈಟ್ ಶುಕ್ರವಾರ ಆನ್ ಆದ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಹೊಲಗಳಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ.
ರಾಜಧಾನಿ ಜೈಪುರದಿಂದ 100 ಕಿ.ಮೀ ದೂರದಲ್ಲಿರುವ ದಿದ್ವಾನಾದಲ್ಲಿ ಬೆಳಿಗ್ಗೆ 10: 35 ರ ಸುಮಾರಿಗೆ ಸೇನೆಯ ಹೆಲಿಕಾಪ್ಟರ್ ಹೊಲಗಳಲ್ಲಿ ಇಳಿಯಿತು ಎಂದು ಸೇನಾ ಅಧಿಕಾರಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಗಳು ವರದಿ ಮಾಡಿದೆ. ಘಟನೆಯ ಸಮಯದಲ್ಲಿ ಹೆಲಿಕಾಪ್ಟರ್ ನಲ್ಲಿ ಯಾವುದೇ ವಿಐಪಿಗಳು ಇರಲಿಲ್ಲ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
#WATCH | Rajasthan | One Chetak helicopter en route to Jaipur made a precautionary landing in fields at 10:35 AM in Didwana today due to Engine Chip Warning light. No VIP was present on board. The issue has been rectified and the chopper has moved towards its destination https://t.co/GdrOHOCdGb pic.twitter.com/o6cWemqCqz
— ANI (@ANI) March 1, 2024

