HomeLatest Newsರೋಹಿತ್ - ಕೊಹ್ಲಿ ಚೆನ್ನಾಗಿ ಆಡಿಕೊಟ್ಟರೂ ಕೈಕೊಟ್ಟ ಉಳಿದ ಆಟಗಾರರು; ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯನ್ನೂ...

ರೋಹಿತ್ – ಕೊಹ್ಲಿ ಚೆನ್ನಾಗಿ ಆಡಿಕೊಟ್ಟರೂ ಕೈಕೊಟ್ಟ ಉಳಿದ ಆಟಗಾರರು; ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯನ್ನೂ ಸೋತ ಭಾರತ

ನಿನ್ನೆ ( ಜುಲೈ 19 ) ಇಂಗ್ಲೆಂಡ್‌ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 27 ರನ್‌ಗಳ ಅಂತರದ ಗೆಲುವು ಸಾಧಿಸುವ ಮೂಲಕ 3 ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿದೆ.

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಬೆನ್ ಡಕೆಟ್ ಶತಕ, ಜೇಕಬ್ ಬೆಥೆಲ್, ಜೋ ರೂಟ್ ಅರ್ಧಶತಕ ಹಾಗೂ ಜೋಶ್ ಬಟ್ಲರ್ ಅಬ್ಬರದ ಆಟದ ನೆರವಿನಿಂದ 50 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 387 ರನ್ ಕಲೆಹಾಕಿ ಭಾರತಕ್ಕೆ 388 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ಎಡವಿದ ಭಾರತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 360 ರನ್ ಕಲೆಹಾಕಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂಗ್ಲೆಂಡ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಬೆನ್ ಡಕೆಟ್ ಹಾಗೂ ಜೇಕಬ್ ಬೆಥೆಲ್ 192 ರನ್‌ಗಳ ಜತೆಯಾಟವನ್ನಾಡಿ ತಂಡಕ್ಕೆ ಉತ್ತಮ ಒಳ್ಳೆಯ ಆರಂಭ ಕಟ್ಟಿಕೊಟ್ಟರು. ಬೆನ್ ಡಕೆಟ್ 141 ರನ್ ಗಳಿಸಿದರೆ, ಜೇಕಬ್ ಬೆಥೆಲ್ 91 ರನ್ ಬಾರಿಸಿದರು. ಇನ್ನುಳಿದಂತೆ ಹ್ಯಾರಿ ಬ್ರೂಕ್ 14 ರನ್ ಗಳಿಸಿದರೆ, ಜೋ ರೂಟ್ 48 ಎಸೆತಗಳಲ್ಲಿ ಅಜೇಯ 74 ರನ್ ಹಾಗೂ ಜೋಶ್ ಬಟ್ಲರ್ 13 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 41 ರನ್ ಚಚ್ಚಿದರು.

ಭಾರತದ ಪರ ಪ್ರಸಿದ್ಧ್ ಕೃಷ್ಣ ಎರಡು ವಿಕೆಟ್ ಪಡೆದರೆ, ಪ್ರಿನ್ಸ್ ಯಾದವ್ ಒಂದು ವಿಕೆಟ್ ಪಡೆದರು.

ಭಾರತದ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ಶುಬ್‌ಮನ್ ಗಿಲ್ 147 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭವನ್ನು ಕಟ್ಟಿಕೊಟ್ಟರು. ನಾಯಕ ಗಿಲ್ 77 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಒಂದಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಜೋಡಿ 113 ರನ್‌ಗಳ ಜತೆಯಾಟವನ್ನಾಡಿದರು. ರೋಹಿತ್ ಶರ್ಮಾ 110 ಎಸೆತಗಳಲ್ಲಿ 138 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 60 ಎಸೆತಗಳಲ್ಲಿ 74 ರನ್ ಬಾರಿಸಿದರು. ಹೀಗೆ ತಂಡದ ಮೊದಲ ಮೂವರು ಆಟಗಾರರು ಉತ್ತಮ ಆಟವನ್ನಾಡಿದರೂ ಸಹ ಉಳಿದ ಆಟಗಾರರು ಕೈಕೊಟ್ಟ ಕಾರಣ ಭಾರತ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿತು. ಉಳಿದಂತೆ ಇಶಾನ್ ಕಿಶನ್ 14, ಶ್ರೇಯಸ್ ಐಯ್ಯರ್ ಡಕ್‌ಔಟ್, ಕೆಎಲ್ ರಾಹುಲ್ 12, ಅಕ್ಷರ್ ಪಟೇಲ್ 2, ಗುರ್ನೂರ್ ಬ್ರಾರ್ ಅಜೇಯ 18 ಹಾಗೂ ಅರ್ಷ್‌ದೀಪ್ ಸಿಂಗ್ ಅಜೇಯ 15 ರನ್ ಗಳಿಸಿದರು.

ಇಂಗ್ಲೆಂಡ್ ಪರ ಸ್ಯಾಮ್ ಕರನ್ ನಾಲ್ಕು ವಿಕೆಟ್, ಜೋಫ್ರಾ ಆರ್ಚರ್, ಆದಿಲ್ ರಶೀದ್ ಹಾಗೂ ಜೇಕಬ್ ಬೆಥೆಲ್ ತಲಾ ಒಂದೊಂದು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular