ನವದೆಹಲಿ: ಭಾರತ-ರಷ್ಯಾ ಉಭಯ ದೇಶಗಳ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ ಹಲವಾರು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
ನವದೆಹಲಿಯ ಹೈದರಾಬಾದ್ ಹೌಸ್ ನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆದಿದ್ದು, ಈ ವೇಳೆ ಹಲವು ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ದ್ವಿಪಕ್ಷೀಯ ಮಾತುಕತೆ ಬಳಿಕ ವ್ಲಾಡಿಮಿರ್ ಪುಟಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ರಷ್ಯಾ ಅಧ್ಯಕ್ಷ ಪುಟಿನ್, ಭಾರತ ನೀಡಿದ ಆತಿಥ್ಯಕ್ಕೆ ಸಂತಸವಾಗಿದೆ. ಉಭಯ ದೇಶಗಳ ನಡುವೆ ಆರ್ಥಿಕ ಅಭಿವೃದ್ಧಿ ಮತ್ತಷ್ಟು ಸಮೃದ್ಧಿಯಾಗಲಿದೆ. ಆರ್ಥಿಕತೆ, ವಾಣಿಜ್ಯ, ರಕ್ಷಣೆ ವಿಚಾರವಾಗಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದೇವೆ. 2030ರವರೆಗೆ ಹಲವು ಯೋಜನೆಗಳಿಗೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದರು.
ಭಾರತ-ರಷ್ಯಾ ನಡುವಿನ ನೀತಿ ಸಮೃದ್ಧಪಡಿಸಲು ಈ ಭೇಟಿ ಪೂರಕವಾಗಿದೆ. ರಷ್ಯಾ ನಗರಿಕರಿಗೆ 30 ದಿನಗಳವರೆಗೆ ಉಚಿತ ಇ-ವೀಸಾ ಸೌಲಭ್ಯ ನೀಡುವುದಾಗಿ ಭಾರತ ಒಪ್ಪಿದೆ. ರಷ್ಯಾ ನಗರಿಕರಿಗೆ ಗ್ರೂಪ್ ಟೂರಿಸ್ಟ್ ಇ-ವೀಸಾ ನೀಡಲು ನಿರ್ಧರಿಸಲಾಗಿದೆ. ಹೊಸದಾಗಿ ಎರಡು ರಾಯಭಾರ ಕಚೇರಿಗಳನ್ನು ತೆರೆಯಲಾಗುವುದು. ಯಾವುದೇ ಅಡೆತಡೆ ಲ್ಲದೇ ಭಾರತಕ್ಕೆ ಇಂಧನ ಪೂರೈಕೆ ಮುಂದುವರೆಸುತ್ತೇವೆ. ಭಾರತೀಯ ಔಷಧ ನಿರ್ಮಾಣ ಸಂಸ್ಥೆಗಳಿಗೆ ಸಹಕಾರ ಮುಂದುವರೆಯಲಿವೆ. ರಷ್ಯಾದಲ್ಲಿಯೂ ಭಾರತೀಯ ಸಿನಿಮಾಗಳು ಜನಪ್ರಿಯವಾಗಿವೆ. ಈ ನಿಟ್ಟಿನಲ್ಲಿಯೂ ಪ್ರೋತ್ಸಾಹ ನೀಡಲಾಗುವುದು. ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೆ ಉತ್ತೇಜನ ನೀಡುತ್ತೇವೆ. ರಷ್ಯಾ ಹಾಗೂ ಭಾರತ ಸ್ವತಂತ್ರವಾಗಿ ವಿದೇಶಾಂಗ ನೀತಿಗಳನ್ನು ಹೊಂದಿರಲಿವೆ ಎಂದು ಹೇಳಿದರು.
