HomeIndiaತೈಲ ಮಾರುಕಟ್ಟೆ ಸ್ಥಿರತೆಗೆ ಭಾರತವೇ ಜವಾಬ್ದಾರಿ ಎಂದ ಅಮೆರಿಕ ರಾಯಭಾರಿ!

ತೈಲ ಮಾರುಕಟ್ಟೆ ಸ್ಥಿರತೆಗೆ ಭಾರತವೇ ಜವಾಬ್ದಾರಿ ಎಂದ ಅಮೆರಿಕ ರಾಯಭಾರಿ!

ತೈಲ ಬಿಕ್ಕಟ್ಟಿನ ಕುರಿತು ಭಾರತದಲ್ಲಿ ಕಾವೇರಿದ ಚರ್ಚೆಗಳು ನಡೆಯುತ್ತಿರುವಾಗ ಮಾರುಕಟ್ಟೆಯ ಸ್ಥಿರತೆಗೆ ಭಾರತವೇ ಜವಾಬ್ದಾರಿ ಎಂದು ಭಾರತದ ಅಮೆರಿಕ ರಾಯಭಾರಿ ಸೆರ್ಗಿಯೋ ಗೋರ್ ಹೇಳಿದ್ದಾರೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳುವಲ್ಲಿ ಭಾರತದ ಪಾತ್ರ ನಿರ್ಣಾಯಕವಾಗಿದೆ ಎಂದು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಭಾರತದ ಅಮೆರಿಕ ರಾಯಭಾರಿ ಸೆರ್ಗಿಯೋ ಗೋರ್, ವಿಶ್ವದಾದ್ಯಂತ ತೈಲ ಬೆಲೆಗಳನ್ನು ಸ್ಥಿರವಾಗಿಡುವಲ್ಲಿ ಭಾರತ ವಹಿಸುತ್ತಿರುವ ಪಾತ್ರವನ್ನು ಶ್ಲಾಘಿಸಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ ಅವರು, “ವಿಶ್ವದಾದ್ಯಂತ ತೈಲ ಬೆಲೆಗಳನ್ನು ಸ್ಥಿರವಾಗಿ ಕಾಯ್ದುಕೊಳ್ಳುವಲ್ಲಿ ಭಾರತವು ಅತ್ಯುತ್ತಮ ಪಾಲುದಾರ ದೇಶವಾಗಿದೆ. ಭಾರತವು ರಷ್ಯಾದಿಂದ ತೈಲವನ್ನು ಖರೀದಿಸುತ್ತಿರುವುದು ಸಹ ಈ ಪ್ರಯತ್ನದ ಒಂದು ಭಾಗ ಎಂಬುದನ್ನು ಅಮೆರಿಕ ಗುರುತಿಸುತ್ತದೆ” ಎಂದು ಹೇಳಿದ್ದಾರೆ.

“ಭಾರತವು ವಿಶ್ವದ ಅತಿದೊಡ್ಡ ತೈಲ ಬಳಕೆದಾರ ಮತ್ತು ಸಂಸ್ಕರಣಾ ದೇಶಗಳಲ್ಲಿ ಒಂದಾಗಿದ್ದು, ಅಮೆರಿಕನ್ನರು ಮತ್ತು ಭಾರತೀಯರ ಹಿತದೃಷ್ಟಿಯಿಂದ ಮಾರುಕಟ್ಟೆ ಸ್ಥಿರತೆಯನ್ನು ಕಾಪಾಡಲು ಎರಡೂ ದೇಶಗಳು ಕೈಜೋಡಿಸಿ ಕೆಲಸ ಮಾಡುವುದು ಅತ್ಯಗತ್ಯ” ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಶ್ಚಿಮ ಏಷ್ಯಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭಾರತಕ್ಕೆ ತೈಲ ನಿರ್ಬಂಧಗಳಿಂದ ವಿನಾಯಿತಿ ನೀಡುವ ಕುರಿತು ಅಮೆರಿಕ ಅಧ್ಯಕ್ಷರೊಂದಿಗೆ ಚರ್ಚಿಸಿದ್ದೀರಾ? ಎಂಬ ಪ್ರಶ್ನೆಗೆ ಉತ್ತರವನ್ನು ನೀಡಿದ್ದಾರೆ.

“ಭಾರತವು ಒಂದು ಜವಾಬ್ದಾರಿಯುತ ದೇಶವಾಗಿ ನಡೆದುಕೊಂಡಿದೆ. ಆದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಮತ್ತು ಈ ಕ್ರಮವು ಅಲ್ಪಾವಧಿಯದ್ದಾಗಿದ್ದು, ಇದರಿಂದ ರಷ್ಯಾಕ್ಕೆ ಯಾವುದೇ ದೊಡ್ಡ ಮಟ್ಟದ ಆರ್ಥಿಕ ಲಾಭವಾಗುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

“ನಾನು ಈ ಬಗ್ಗೆ ಅಧ್ಯಕ್ಷರೊಂದಿಗೆ ಮಾತನಾಡಿದ್ದೇನೆ. ಖಜಾನೆ ಕಾರ್ಯದರ್ಶಿ ಮತ್ತು ಸಂಪೂರ್ಣ ರಾಷ್ಟ್ರೀಯ ಭದ್ರತಾ ತಂಡವು ಚರ್ಚಿಸಿ ಈ ನಿರ್ಧಾರಕ್ಕೆ ಬಂದಿದೆ. ಏಕೆಂದರೆ ಭಾರತದಂತಹ ನಮ್ಮ ಮಿತ್ರರಾಷ್ಟ್ರಗಳು ಜವಾಬ್ದಾರಿಯುತವಾಗಿ ನಡೆದುಕೊಂಡಿವೆ” ಎಂದು ವಿವರಿಸಿದ್ದಾರೆ.

“ಈ ಹಿಂದಿನ ನಿರ್ಬಂದದಂತೆ ರಷ್ಯಾದ ತೈಲವನ್ನು ಖರೀದಿಸುವುದನ್ನು ನಿಲ್ಲಿಸಿದ್ದವು. ಹಾಗಾಗಿ, ಇರಾನ್‌ನಿಂದಾಗಿ ಜಾಗತಿಕವಾಗಿ ಉಂಟಾಗಿರುವ ತೈಲ ಪೂರೈಕೆಯ ತಾತ್ಕಾಲಿಕ ಕೊರತೆಯನ್ನು ಸರಿಪಡಿಸಲು ನಾವು ಕೆಲಸ ಮಾಡುತ್ತಿರುವಾಗ, ಭಾರತವು ತಾತ್ಕಾಲಿಕವಾಗಿ ರಷ್ಯಾದ ತೈಲವನ್ನು ಸ್ವೀಕರಿಸಲು ಅನುಮತಿ ನೀಡಿದ್ದೇವೆ” ಎಂದು ಹೇಳಿದ್ದಾರೆ.

ಈಗಾಗಲೇ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು ವಿಶ್ವದ ಅನೇಕ ರಾಷ್ಟ್ರಗಳಿಗೆ ಸಂಕಷ್ಟ ತರುವ ಸಾಧ್ಯತೆ ಇದೆ. ಅಲ್ಲದೇ ಇರಾನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಜಲಸಂಧಿಯಲ್ಲಿ ಇಂಧನ ಪೂರೈಕೆಯನ್ನು ತಡೆಯಲು ಇರಾನ್ ಯಾವುದೇ ಪ್ರಯತ್ನ ಮಾಡಬಾರದು ಎಂದು ತಿಳಿಸಿದ್ದಾರೆ.

ಇರಾನ್ ಇಂತಹ ಕ್ರಮಕ್ಕೆ ಮುಂದಾದರೆ ಗಂಭೀರ ಮಿಲಿಟರಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಈಗ ಸಂಘರ್ಷದ ಕಾರಣ ಜಾಗತಿಕ ತೈಲ ಪೂರೈಕೆಯ ಕೇಂದ್ರಬಿಂದುಗಳಾಗಿರುವ ದೇಶಗಳು ಉತ್ಪಾದನೆ ಸ್ಥಗಿತಗೊಳಿಸಿವೆ. ಇರಾನ್ ಮೂಲಕ ಸಾಗಣೆಯೂ ಸ್ಥಗಿತವಾಗಿದ್ದು, ಇಡೀ ವಿಶ್ವದ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುತ್ತಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular