10ನೇ ತರಗತಿ ಪಾಸಾದ ನಿರುದ್ಯೋಗಿಗಳಿಗೆ ಅಂಚೆ ಇಲಾಖೆ ಗುಡ್‌ನ್ಯೂಸ್ ನೀಡಿದೆ. ಗ್ರಾಮೀಣ ಡಾಕ್ ಸೇವಕ್ (GDS) ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ದೇಶಾದ್ಯಂತ ವಿವಿಧ ಅಂಚೆ ವೃತ್ತಗಳಲ್ಲಿ ಒಟ್ಟು 23,757 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
10ನೇ ತರಗತಿ ವಿದ್ಯಾರ್ಹತೆಯೊಂದಿಗೆ ಅಂಚೆ ಇಲಾಖೆಯಲ್ಲಿ 23,757 ಗ್ರಾಮೀಣ ಡಾಕ್ ಸೇವಕ್ (GDS) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆಯಾಗಿದೆ. ಅರ್ಹತೆ, ವೇತನ, ಶುಲ್ಕ ಮತ್ತು ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಈ ನೇಮಕಾತಿಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳು ಬ್ರಾಂಚ್ ಪೋಸ್ಟ್‌ಮಾಸ್ಟರ್ (BPM), ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್‌ಮಾಸ್ಟರ್ (ABPM) ಹಾಗೂ ಡಾಕ್ ಸೇವಕ್ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ.
ಈ ಹುದ್ದೆಗಳಿಗೆ 10ನೇ ತರಗತಿ ಉತ್ತೀರ್ಣತೆ ಪ್ರಮುಖ ವಿದ್ಯಾರ್ಹತೆಯಾಗಿದೆ. ಹುದ್ದೆಗೆ ಅನುಗುಣವಾಗಿ ಆರಂಭಿಕವಾಗಿ ₹10,000ರಿಂದ ₹12,000ವರೆಗೆ ವೇತನ ದೊರೆಯುವ ಅವಕಾಶವಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 21, 2026ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಒಟ್ಟು ಖಾಲಿ ಹುದ್ದೆಗಳು ಎಷ್ಟು?
ಇಂಡಿಯಾ ಪೋಸ್ಟ್ GDS ನೇಮಕಾತಿ ಮೂಲಕ ದೇಶಾದ್ಯಂತ ಒಟ್ಟು 23,757 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಈ ನೇಮಕಾತಿಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳನ್ನು ಮುಖ್ಯವಾಗಿ ಕೆಳಗಿನ ಹುದ್ದೆಗಳಿಗೆ ನೇಮಕ ಮಾಡಲಾಗುತ್ತದೆ:
-
ಬ್ರಾಂಚ್ ಪೋಸ್ಟ್‌ಮಾಸ್ಟರ್ (BPM)
-
ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್‌ಮಾಸ್ಟರ್ (ABPM)
-
ಡಾಕ್ ಸೇವಕ್
ವಿದ್ಯಾರ್ಹತೆ
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು. 10ನೇ ತರಗತಿಯಲ್ಲಿ ಸ್ಥಳೀಯ ಭಾಷೆಯನ್ನು ಒಂದು ವಿಷಯವಾಗಿ ಅಧ್ಯಯನ ಮಾಡಿರಬೇಕು ಸೇರಿದಂತೆ ಅಧಿಸೂಚನೆಯಲ್ಲಿ ತಿಳಿಸಿರುವ ಇತರ ನಿಯಮಗಳು ಅನ್ವಯಿಸುತ್ತವೆ.
ಅರ್ಜಿ ಶುಲ್ಕ
ಅರ್ಹ ಅಭ್ಯರ್ಥಿಗಳು ₹100 ಅರ್ಜಿ ಶುಲ್ಕ ಪಾವತಿಸಬೇಕು. ಆದರೆ ಮಹಿಳೆಯರು, SC, ST, PwBD ಸೇರಿದಂತೆ ನಿರ್ದಿಷ್ಟ ವರ್ಗಗಳ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಮೊದಲು ಇಂಡಿಯಾ ಪೋಸ್ಟ್ GDS ಅಧಿಕೃತ ವೆಬ್‌ಸೈಟ್‌ಗೆ ತೆರಳಿ ನೋಂದಣಿ ಪೂರ್ಣಗೊಳಿಸಬೇಕು.
ಹಂತ 1: ನೋಂದಣಿ
-
ಅಧಿಕೃತ GDS ವೆಬ್‌ಸೈಟ್ ತೆರೆಯಿರಿ.
-
ಸಂಬಂಧಿತ ಅಧಿಸೂಚನೆಯನ್ನು ತೆರೆಯಿರಿ ಮತ್ತು Click Here to Register ಮೇಲೆ ಕ್ಲಿಕ್ ಮಾಡಿ.
-
New Candidate Registration ಆಯ್ಕೆಮಾಡಿ.
-
ಮೊಬೈಲ್ ಸಂಖ್ಯೆ ನಮೂದಿಸಿ Send OTP ಮೇಲೆ ಕ್ಲಿಕ್ ಮಾಡಿ.
-
ಮೊಬೈಲ್‌ಗೆ ಬಂದ OTP ನಮೂದಿಸಿ Verify OTP ಮಾಡಿ.
-
ಬಳಿಕ ಇ-ಮೇಲ್ ಐಡಿ ನಮೂದಿಸಿ, ಬಂದ OTPಯನ್ನು ಪರಿಶೀಲಿಸಿ.
-
ಹೆಸರು, ಜನ್ಮ ದಿನಾಂಕ, ಲಿಂಗ, ಪೋಷಕರ ಹೆಸರು, ಸಮುದಾಯ ಸೇರಿದಂತೆ ವೈಯಕ್ತಿಕ ವಿವರಗಳನ್ನು ನಮೂದಿಸಿ.
-
Complete Registration ಮೇಲೆ ಕ್ಲಿಕ್ ಮಾಡಿ.
-
ನೋಂದಣಿ ಪೂರ್ಣಗೊಂಡ ಬಳಿಕ ಮೊಬೈಲ್ ಸಂಖ್ಯೆಗೆ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ಬರುತ್ತದೆ.
ಹಂತ 2: ಲಾಗಿನ್
ನೋಂದಣಿ ಪೂರ್ಣಗೊಂಡ ನಂತರ ವೆಬ್‌ಸೈಟ್‌ನಲ್ಲಿರುವ Login ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಬೇಕು.
ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದ OTP ನಮೂದಿಸಿ Verify OTP ಮೇಲೆ ಕ್ಲಿಕ್ ಮಾಡಬೇಕು.
ಹಂತ 3: ಶುಲ್ಕ ಪಾವತಿ
ಲಾಗಿನ್ ಆದ ನಂತರ Fee Payment ಆಯ್ಕೆಮಾಡಿ. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ UPI ಮೂಲಕ ಶುಲ್ಕ ಪಾವತಿಸಬಹುದು.
ಹಂತ 4: ಅರ್ಜಿ ನಮೂನೆ ಪೂರ್ಣಗೊಳಿಸಿ
ಶುಲ್ಕ ಪಾವತಿಸಿದ ಬಳಿಕ Apply Online ಮೇಲೆ ಕ್ಲಿಕ್ ಮಾಡಿ. ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಮಾಹಿತಿಯನ್ನು ನಮೂದಿಸಬೇಕು.
ಅರ್ಜಿಯಲ್ಲಿ ಈ ಕೆಳಗಿನ ವಿವರಗಳನ್ನು ನೀಡಬೇಕು:
-
ವೈಯಕ್ತಿಕ ವಿವರಗಳು
-
ವಿಳಾಸ
-
ವಿದ್ಯಾರ್ಹತೆ
-
10ನೇ ತರಗತಿ ಓದಿದ ರಾಜ್ಯ
-
ಉತ್ತೀರ್ಣರಾದ ವರ್ಷ
-
ಮಂಡಳಿಯ ವಿವರಗಳು
-
ಹಾಲ್ ಟಿಕೆಟ್ ಸಂಖ್ಯೆ
-
ವಿಷಯವಾರು ಅಂಕಗಳು/ಪಾಯಿಂಟ್‌ಗಳು
ವಿವರಗಳನ್ನು ನಮೂದಿಸಿದ ನಂತರ Save and Next ಮೇಲೆ ಕ್ಲಿಕ್ ಮಾಡಿ.
ಹಂತ 5: ಹುದ್ದೆಗಳ ಆಯ್ಕೆ
ಅಭ್ಯರ್ಥಿಗಳು ತಮಗೆ ಬೇಕಾದ ಅಂಚೆ ಕಚೇರಿಗಳನ್ನು ಆದ್ಯತೆಯ ಕ್ರಮದಲ್ಲಿ ಆಯ್ಕೆ ಮಾಡಬೇಕು.
ವೃತ್ತ ಮತ್ತು ವಿಭಾಗದ ಆಧಾರದ ಮೇಲೆ BPM/ABPM/ಡಾಕ್ ಸೇವಕ್ ಹುದ್ದೆಗಳಿಗೆ ಗರಿಷ್ಠ 20 ಅಂಚೆ ಕಚೇರಿಗಳನ್ನು ಆಯ್ಕೆ ಮಾಡಬಹುದು.
ಹಂತ 6: ಫೋಟೋ ಮತ್ತು ಸಹಿ ಅಪ್‌ಲೋಡ್
ನಿಗದಿತ ನಮೂನೆ ಮತ್ತು ಗಾತ್ರದಲ್ಲಿ ಫೋಟೋ ಹಾಗೂ ಸಹಿಯನ್ನು ಅಪ್‌ಲೋಡ್ ಮಾಡಬೇಕು. ಬಳಿಕ ಡಿಕ್ಲರೇಷನ್ ಓದಿ ಟಿಕ್ ಮಾಡಬೇಕು.
ನಂತರ Preview ಮೇಲೆ ಕ್ಲಿಕ್ ಮಾಡಿ ಅರ್ಜಿಯ ವಿವರಗಳನ್ನು ಪರಿಶೀಲಿಸಬೇಕು.
ಹಂತ 7: ಅರ್ಜಿ ಸಲ್ಲಿಕೆ
ಪರದೆಯ ಮೇಲೆ ಕಾಣಿಸುವ ಎಲ್ಲಾ ವಿವರಗಳನ್ನು ಮತ್ತೊಮ್ಮೆ ಎಚ್ಚರಿಕೆಯಿಂದ ಪರಿಶೀಲಿಸಿ. ಯಾವುದೇ ತಪ್ಪುಗಳಿದ್ದರೆ ಸರಿಪಡಿಸಿ ಕೊನೆಯಲ್ಲಿ Submit Application ಮೇಲೆ ಕ್ಲಿಕ್ ಮಾಡಬೇಕು.
ಇದರೊಂದಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
ಅರ್ಜಿ ಪ್ರಿಂಟ್ ತೆಗೆದುಕೊಳ್ಳುವುದು ಹೇಗೆ?
ಅರ್ಜಿ ಸಲ್ಲಿಕೆ ಪೂರ್ಣಗೊಂಡ ನಂತರ ಭವಿಷ್ಯದ ಅಗತ್ಯಗಳಿಗಾಗಿ ಅರ್ಜಿಯ ಪ್ರತಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಉತ್ತಮ.
ಇದಕ್ಕಾಗಿ ಡ್ಯಾಶ್‌ಬೋರ್ಡ್‌ನಲ್ಲಿರುವ My Application ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ತೆರೆಯಬೇಕು. ಬಳಿಕ Download PDF ಮೇಲೆ ಕ್ಲಿಕ್ ಮಾಡಿ ಅರ್ಜಿಯ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಬಹುದು.
ಪ್ರಮುಖ ದಿನಾಂಕಗಳು
-
ಅರ್ಜಿ ಆರಂಭ: ಆಗಸ್ಟ್ 31, 2026
-
ಅರ್ಜಿ ಸಲ್ಲಿಸಲು ಕೊನೆಯ ದಿನ: ಸೆಪ್ಟೆಂಬರ್ 21, 2026
-
ಒಟ್ಟು ಖಾಲಿ ಹುದ್ದೆಗಳು: 23,757
-
ವಿದ್ಯಾರ್ಹತೆ: 10ನೇ ತರಗತಿ ಪಾಸ್
-
ಅರ್ಜಿ ವಿಧಾನ: ಆನ್‌ಲೈನ್
10ನೇ ತರಗತಿ ವಿದ್ಯಾರ್ಹತೆಯೊಂದಿಗೆ ಕೇಂದ್ರ ಸರ್ಕಾರದ ಅಂಚೆ ಇಲಾಖೆಯಲ್ಲಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಈ ನೇಮಕಾತಿ ಉತ್ತಮ ಅವಕಾಶವಾಗಿದೆ. ಆದರೆ ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯಲ್ಲಿ ವಯೋಮಿತಿ, ಸ್ಥಳೀಯ ಭಾಷೆ, ಅಗತ್ಯ ದಾಖಲೆಗಳು ಹಾಗೂ ಇತರ ಅರ್ಹತಾ ನಿಯಮಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು.

