HomeLatest Newsಚಿನ್ನ ಕೊಟ್ಟರೆ 30 ನಿಮಿಷದಲ್ಲಿ ಹಣ ಫಟಾಫಟ್, ಹೈದರಾಬಾದ್‌ನಲ್ಲಿ ದೇಶದ ಮೊದಲ AI ಗೋಲ್ಡ್ ಎಟಿಎಂ...

ಚಿನ್ನ ಕೊಟ್ಟರೆ 30 ನಿಮಿಷದಲ್ಲಿ ಹಣ ಫಟಾಫಟ್, ಹೈದರಾಬಾದ್‌ನಲ್ಲಿ ದೇಶದ ಮೊದಲ AI ಗೋಲ್ಡ್ ಎಟಿಎಂ ಉದ್ಘಾಟನೆ

ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನವೂ ಸ್ಮಾರ್ಟ್ ಆಗುತ್ತಿದೆ. ಇಷ್ಟು ದಿನ ಎಟಿಎಂನಿಂದ ಹಣ ಡ್ರಾ ಮಾಡುತ್ತಿದ್ದ ನಾವು, ಇನ್ಮುಂದೆ ಅದೇ ಎಟಿಎಂಗೆ ಚಿನ್ನ ಹಾಕಿ ಹಣ ಪಡೆಯುವ ಕಾಲ ಬಂದಿದೆ ಹೌದು, ಭಾರತದ ಫಿನ್‌ಟೆಕ್ ಕಂಪನಿ ಗೋಲ್ಡ್‌ಸಿಕ್ಕಾ ದೇಶದ ಮೊದಲ AI ಚಾಲಿತ ಚಿನ್ನ ಕರಗಿಸುವ ಎಟಿಎಂ (Gold Melting ATM) ಅನ್ನು ಹೈದರಾಬಾದ್‌ನಲ್ಲಿ ಪರಿಚಯಿಸುವ ಮೂಲಕ ಹೊಸ ಕ್ರಾಂತಿ ಸೃಷ್ಟಿಸಿದೆ.

ಹಳೆಯ ಬಂಗಾರವನ್ನು ಮಾರಾಟ ಮಾಡಿ ಹಣ ಪಡೆಯಲು ಇನ್ನು ಮುಂದೆ ನೀವು ಜ್ಯುವೆಲ್ಲರಿ ಶಾಪ್‌ಗಳ ಮುಂದೆ ಗಂಟೆಗಟ್ಟಲೆ ಕಾಯಬೇಕಿಲ್ಲ. ಭಾರತದಲ್ಲೇ ಮೊದಲ ಬಾರಿಗೆ, ಹೈದರಾಬಾದ್‌ನಲ್ಲಿ AI ಚಾಲಿತ ಗೋಲ್ಡ್ ಎಟಿಎಂ (Gold ATM) ಲೋಕಾರ್ಪಣೆಯಾಗಿದೆ.

ಏನಿದು AI ಗೋಲ್ಡ್ ಎಟಿಎಂ?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾಮಾನ್ಯವಾಗಿ ಹಳೆಯ ಚಿನ್ನ ಮಾರಾಟ ಮಾಡಬೇಕೆಂದರೆ ಆಭರಣ ಅಂಗಡಿಗಳಿಗೆ ಅಲೆದಾಡಬೇಕು, ಶುದ್ಧತೆಯ ಪರೀಕ್ಷೆಗಾಗಿ ಗಂಟೆಗಟ್ಟಲೆ ಕಾಯಬೇಕು ಮತ್ತು ಬೆಲೆಗಾಗಿ ಚೌಕಾಶಿ ಮಾಡಬೇಕು. ಸಾಮಾನ್ಯ ಎಟಿಎಂನಿಂದ ನಾವು ಹಣವನ್ನು ಡ್ರಾ ಮಾಡುತ್ತೇವೆ, ಆದರೆ ಈ ಗೋಲ್ಡ್ ಎಟಿಎಂನಲ್ಲಿ ನೀವು ನಿಮ್ಮ ಹಳೆಯ ಚಿನ್ನವನ್ನು ಹಾಕಿ, ಅದರ ಮೌಲ್ಯದ ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಪಡೆಯಬಹುದು. ಇದು ಕೇವಲ 30 ನಿಮಿಷಗಳಲ್ಲಿ ಸಂಪೂರ್ಣ ಪ್ರಕ್ರಿಯೆಯನ್ನು ಮುಗಿಸುತ್ತದೆ

ಈ ಮ್ಯಾಜಿಕ್ ಯಂತ್ರ ಹೇಗೆ ಕೆಲಸ ಮಾಡುತ್ತದೆ?

ನಿಮ್ಮ ಹಳೆಯ ಆಭರಣ ಅಥವಾ ಚಿನ್ನದ ತುಣುಕನ್ನು ಯಂತ್ರದ ಒಳಗೆ ಇರಿಸಬೇಕು.

ಯಂತ್ರವು ತಕ್ಷಣವೇ ಚಿನ್ನವನ್ನು ಕರಗಿಸಲು ಆರಂಭಿಸುತ್ತದೆ.

ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ, AI ತಂತ್ರಜ್ಞಾನವು ಚಿನ್ನದ ನಿಖರ ತೂಕ ಮತ್ತು ಶುದ್ಧತೆಯನ್ನು ಸೆಕೆಂಡುಗಳಲ್ಲಿ ಪತ್ತೆ ಮಾಡುತ್ತದೆ.

ಅಂದಿನ ಮಾರುಕಟ್ಟೆ ದರದ ಆಧಾರದ ಮೇಲೆ ಕಂಪ್ಯೂಟರ್ ಬೆಲೆಯನ್ನು ಲೆಕ್ಕ ಹಾಕುತ್ತದೆ.

ಡೈರೆಕ್ಟ್ ಬ್ಯಾಂಕ್ ಟ್ರಾನ್ಸ್‌ಫರ್: ಪ್ರಕ್ರಿಯೆ ಮುಗಿದ ಅರ್ಧ ಗಂಟೆಯೊಳಗೆ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.

ಮಾರಾಟ ಮಾತ್ರವಲ್ಲ, ಇನ್ನೂ ಇವೆ ಡಿಜಿಟಲ್ ಫೀಚರ್ಸ್

ವರ್ಚುವಲ್ ಟ್ರೈ-ಆನ್ (AR): ನೀವು ಆಭರಣ ಧರಿಸಿದರೆ ಹೇಗೆ ಕಾಣುತ್ತೀರಿ ಎಂಬುದನ್ನು ಈ ಯಂತ್ರದ ಮುಂದೆ ನಿಂತು ಆಗ್ಮೆಂಟೆಡ್ ರಿಯಾಲಿಟಿ (AR) ಮೂಲಕ ಸ್ಕ್ರೀನ್ ಮೇಲೆ ನೋಡಬಹುದು.

ಚಿನ್ನದ ನಾಣ್ಯ ಖರೀದಿ: ಇದೇ ಯಂತ್ರದ ಮೂಲಕ 0.5 ಗ್ರಾಂನಿಂದ 100 ಗ್ರಾಂವರೆಗಿನ ಶುದ್ಧ ಚಿನ್ನದ ನಾಣ್ಯಗಳನ್ನು ನೀವು 24/7 ಖರೀದಿಸಬಹುದು.

ದುರುಪಯೋಗ ತಡೆಯಲು ಕಂಪನಿಯು ಅತ್ಯಾಧುನಿಕ ಭದ್ರತೆ ಒದಗಿಸಿದೆ. ವಹಿವಾಟು ಆರಂಭಿಸುವ ಮೊದಲು KYC (ಆಧಾರ್ ಆಧಾರಿತ) ಕಡ್ಡಾಯ. ಯಂತ್ರವು ಗ್ರಾಹಕರ ಕ್ರಿಮಿನಲ್ ರೆಕಾರ್ಡ್ ಕೂಡ ಪರಿಶೀಲಿಸುತ್ತದೆ. ಒಂದು ವೇಳೆ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ಟ್ರಾನ್ಸಾಕ್ಷನ್ ತಕ್ಷಣವೇ ಬ್ಲಾಕ್ ಆಗುತ್ತದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular