ರೋಗನಿರೋಧಕ ಶಕ್ತಿ ಹೆಚ್ಚಾಗಬೇಕೆ…? ಈ ಚಹಾ ಸೇವಿಸಿ

ಎಲ್ಲವನ್ನೂ ಹಾಳುಗೆಡುವುತ್ತಿರುವ ಕೊರೊನಾ ಸಂಕಟದ ಮಧ್ಯೆ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಮದ್ದು. ಈ ಒಂದು ಚಹಾ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲುದು. ಯಾವುದದು?

ಎರಡು ಇಂಚು ಶುಂಠಿಯನ್ನು ತೊಳೆದು ಸಿಪ್ಪೆ ತೆಗೆದು ತುರಿದುಕೊಳ್ಳಿ. ಒಂದು ಗ್ಲಾಸ್ ನೀರಿಗೆ ತುರಿದ ಶುಂಠಿ ಮಿಶ್ರಣ ಮಾಡಿ 6 ನಿಮಿಷ ಕುದಿಸಿ. ಇದನ್ನು ಲೋಟಕ್ಕೆ ಸೋಸಿ, ಉಗುರು ಬೆಚ್ಚಗಿರುವಂತೆ ಕುಡಿಯಿರಿ. ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಿದ್ದರೆ ವೈದ್ಯರನ್ನು ಸಂಪರ್ಕಿಸಿದ ಬಳಿಕ ಕುಡಿಯುವುದು ಒಳ್ಳೆಯದು.

ದಾಲ್ಚಿನಿ ಚಕ್ಕೆ ಬೆರೆಸಿದ ನೀರನ್ನು ಕುದಿಸಿ ಸೋಸಿ ಕುಡಿಯುವುದರಿಂದ ಕೊಲೆಸ್ಟ್ರಾಲ್ ಅಂಶ ಕಡಿಮೆಯಾಗಿ ದೇಹದ ತೂಕ ಕಡಿಮೆಯಾಗುತ್ತದೆ. ಹೃದಯದ ಆರೋಗ್ಯ ಉತ್ತಮಗೊಂಡು, ಬ್ಯಾಕ್ಟೀರಿಯಾ ಮತ್ತು ಫಂಗಲ್ ಸೋಂಕಿನಿಂದ ಮುಕ್ತಿ ಸಿಗುತ್ತದೆ.

ನೀರನ್ನು ಕುದಿಸಿ 6 ತುಳಸಿ ದಳಗಳನ್ನು ಹಾಕಿ ಮುಚ್ಚಿಡಿ. ಇಪ್ಪತ್ತು ನಿಮಿಷದ ಬಳಿಕ ನೀರನ್ನು ಕುಡಿಯಿರಿ. ಬೆಳಗ್ಗೆ ತುಳಸಿ ಚಹಾ ಕುಡಿಯುವುದರಿಂದ ಅರೋಗ್ಯದ ಹಲವು ಲಾಭಗಳನ್ನು ಪಡೆಯಬಹುದು. ಜೀರಿಗೆ ಚಹಾವನ್ನೂ ತಯಾರಿಸಿ ಕುಡಿಯಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read