ವಾಯುವ್ಯ ಚೀನಾದಾದ್ಯಂತ ಬೀಸಿದ ಭಾರೀ ಮರಳು ಬಿರುಗಾಳಿಯ ಹಳೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ದಟ್ಟವಾದ ಕಂದು ಬಣ್ಣದ ಧೂಳನ್ನು ನೋಡಬಹುದು. ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ (SCMP) ಪ್ರಕಾರ ಜುಲೈ 2022 ರಲ್ಲಿ ಕಿಂಗ್ಹೈ ಪ್ರಾಂತ್ಯದ ಹೈಕ್ಸಿ ಮಂಗೋಲ್ ಮತ್ತು ಟಿಬೆಟಿಯನ್ ಸ್ವಾಯತ್ತ ಪ್ರಿಫೆಕ್ಚರ್ನಲ್ಲಿ ಬೀಸಿದ ಮರಳು ಬಿರುಗಾಳಿ ಇದಾಗಿದೆ.
ವೇಗವಾಗಿ ಚಲಿಸುವ ಚಂಡಮಾರುತವನ್ನು ತಪ್ಪಿಸಿಕೊಳ್ಳಲು ಜನರು ಓಡಿ ಬರುವುದನ್ನು ನೋಡಬಹುದು. 12-ಸೆಕೆಂಡ್‌ಗಳ ಈ ವಿಡಿಯೋವನ್ನು ಮೂರು ದಶಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.
ಎನ್‌ಬಿಸಿ ನ್ಯೂಸ್‌ನ ಪ್ರಕಾರ, ವೀಡಿಯೊವನ್ನು ತೆಗೆದ ವ್ಯಕ್ತಿ 62 ಮೈಲುಗಳಷ್ಟು (ಸುಮಾರು 100 ಕಿಲೋಮೀಟರ್‌ಗಳು) ದೂರದಲ್ಲಿ ನಿಂತು ಇದನ್ನು ಸೆರೆ ಹಿಡಿದು ನಂತರ ಬಿರುಗಾಳಿಯಿಂದ ಕಂಗೆಟ್ಟು ಓಡಿ ಬಂದಿದ್ದಾನೆ.
https://twitter.com/WowTerrifying/status/1632686604497178625?ref_src=twsrc%5Etfw%7Ctwcamp%5Etweetembed%7Ctwterm%5E1632686604497178625%7Ctwgr%5E01b133ff6762c9e93a7a32549854651d4dd84458%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fincoming-old-video-of-massive-sandstorm-in-china-shocks-internet-3840810