2025-26ರ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸುವ ಸಮಯ ಹತ್ತಿರವಾಗುತ್ತಿದ್ದು, ತೆರಿಗೆದಾರರು ಈಗಿನಿಂದಲೇ ಸಿದ್ಧತೆ ನಡೆಸುವುದು ಒಳಿತು. ವೇತನದಾರರು ಮತ್ತು ಆಡಿಟ್ ಅನ್ವಯಿಸದ ವೈಯಕ್ತಿಕ ತೆರಿಗೆದಾರರಿಗೆ ಜುಲೈ 31 ಅಂತಿಮ ದಿನಾಂಕವಾಗಿದ್ದು, ಈ ಗಡುವು ತಪ್ಪಿದರೆ ದಂಡ ಮತ್ತು ಬಡ್ಡಿಯ ಹೊರೆ ಬೀಳುವ ಸಾಧ್ಯತೆಯಿದೆ. ಒಂದು ವೇಳೆ ನಿಗದಿತ ಸಮಯದಲ್ಲಿ ಸಲ್ಲಿಸಲು ಸಾಧ್ಯವಾಗದಿದ್ದರೆ ಡಿಸೆಂಬರ್ 31ರವರೆಗೆ ಕಾಲಾವಕಾಶವಿದ್ದರೂ, ಆದಾಯದ ಆಧಾರದ ಮೇಲೆ 1,000 ರೂ.ನಿಂದ 5,000 ರೂ.ವರೆಗೆ ದಂಡ ಪಾವತಿಸಬೇಕಾಗುತ್ತದೆ. ಆದ್ದರಿಂದ ಕೊನೆಯ ಕ್ಷಣದ ಗಡಿಬಿಡಿ ಮತ್ತು ಐಟಿ ನೋಟಿಸ್ಗಳನ್ನು ತಪ್ಪಿಸಲು ವಿವಿಧ ವರ್ಗದ ತೆರಿಗೆದಾರರಿಗೆ ನಿಗದಿಪಡಿಸಿರುವ ಅಂತಿಮ ದಿನಾಂಕಗಳ ಸಂಪೂರ್ಣ ವಿವರ ಇಲ್ಲಿದೆ.
025-26ರ ಹಣಕಾಸು ವರ್ಷದ ಆದಾಯಕ್ಕೆ ಸಂಬಂಧಿಸಿದಂತೆ, ಪ್ರಸಕ್ತ ಅಸೆಸ್ಮೆಂಟ್ ವರ್ಷದಲ್ಲಿ (2026-27) ಐಟಿಆರ್ ಸಲ್ಲಿಸಲು ಸಮಯ ಹತ್ತಿರವಾಗುತ್ತಿದೆ. ನಿಗದಿತ ಸಮಯದೊಳಗೆ ತೆರಿಗೆ ಪಾವತಿಸದಿದ್ದರೆ ದಂಡ, ಬಡ್ಡಿ ಮತ್ತು ಐಟಿ ನೋಟಿಸ್ ಎದುರಿಸಬೇಕಾಗಬಹುದು. ವಿವಿಧ ವರ್ಗದವರಿಗೆ ಇರುವ ಅಂತಿಮ ದಿನಾಂಕಗಳು ಇಲ್ಲಿವೆ:
1. ಐಟಿಆರ್ ಸಲ್ಲಿಕೆಗೆ ಕೊನೆಯ ದಿನಾಂಕಗಳು
- ವೈಯಕ್ತಿಕ ತೆರಿಗೆದಾರರು (Audit ಅನ್ವಯಿಸದವರು): ವೇತನದಾರರು, ಪೆನ್ಷನರ್ಗಳು ಮತ್ತು ಹೂಡಿಕೆದಾರರಿಗೆ (ITR-1 ಮತ್ತು ITR-2 ಸಲ್ಲಿಸುವವರು) ಜುಲೈ 31, 2026 ಕೊನೆಯ ದಿನ.
- ಸಣ್ಣ ಉದ್ಯಮಿಗಳು/ವೃತ್ತಿಪರರು (Audit ಅನ್ವಯಿಸದವರು): ಫ್ರೀಲ್ಯಾನ್ಸರ್ಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ (ITR-3 ಮತ್ತು ITR-4 ಸಲ್ಲಿಸುವವರು) ಆಗಸ್ಟ್ 31, 2026 ರವರೆಗೆ ಅವಕಾಶವಿದೆ.
- ಆಡಿಟ್ ಅಗತ್ಯವಿರುವ ಉದ್ಯಮಿಗಳು: ಲೆಕ್ಕಪರಿಶೋಧನೆ ಅಗತ್ಯವಿರುವ ವ್ಯವಹಾರಗಳಿಗೆ ಅಕ್ಟೋಬರ್ 31, 2026 ಅಂತಿಮ ಗಡುವು.
2. ಬಿಲೇಟೆಡ್ ರಿಟರ್ನ್ಸ್ (Belated Returns):
ಜುಲೈ 31ರ ಗಡುವು ತಪ್ಪಿದವರು ಸೆಕ್ಷನ್ 139(4) ಅಡಿಯಲ್ಲಿ ತಡವಾಗಿ ರಿಟರ್ನ್ಸ್ ಸಲ್ಲಿಸಲು ಡಿಸೆಂಬರ್ 31, 2026 ರವರೆಗೆ ಕಾಲಾವಕಾಶವಿದೆ. ಆದರೆ ಇಲ್ಲಿ ದಂಡ ಪಾವತಿಸಬೇಕಾಗುತ್ತದೆ:
- ಆದಾಯ 5 ಲಕ್ಷ ರೂ.ಗಿಂತ ಕಡಿಮೆ ಇದ್ದರೆ: 1,000 ರೂ. ದಂಡ.
- ಆದಾಯ 5 ಲಕ್ಷ ರೂ.ಗಿಂತ ಹೆಚ್ಚು ಇದ್ದರೆ: 5,000 ರೂ. ದಂಡ.
3. ಪರಿಷ್ಕೃತ ರಿಟರ್ನ್ಸ್ (Revised Returns):
ಈಗಾಗಲೇ ಸಲ್ಲಿಸಿದ ಐಟಿಆರ್ನಲ್ಲಿ ತಪ್ಪುಗಳಿದ್ದರೆ ಅದನ್ನು ಸರಿಪಡಿಸಲು ಡಿಸೆಂಬರ್ 31, 2026 ರವರೆಗೆ ಅವಕಾಶವಿದೆ. ಒಂದು ವೇಳೆ 2027ರ ಮಾರ್ಚ್ 31ರೊಳಗೆ ಸಲ್ಲಿಸಬೇಕೆಂದರೆ 5,000 ರೂ. ದಂಡ ತೆರಬೇಕಾಗುತ್ತದೆ.
4. ಅಪ್ಡೇಟೆಡ್ ರಿಟರ್ನ್ಸ್ (ITR-U):
ಹಳೆಯ ತಪ್ಪುಗಳನ್ನು ಸರಿಪಡಿಸಲು ಅಥವಾ ಬಿಟ್ಟುಹೋದ ಆದಾಯವನ್ನು ಘೋಷಿಸಲು ಇದು ಉತ್ತಮ ಅವಕಾಶ. ಅಸೆಸ್ಮೆಂಟ್ ವರ್ಷ ಮುಗಿದ 24 ತಿಂಗಳೊಳಗೆ ಇದನ್ನು ಸಲ್ಲಿಸಬಹುದು.
- 12 ತಿಂಗಳೊಳಗೆ ಸಲ್ಲಿಸಿದರೆ: ಹೆಚ್ಚುವರಿ ತೆರಿಗೆ ಮತ್ತು ಬಡ್ಡಿಯ ಮೇಲೆ 25% ದಂಡ.
- 12-24 ತಿಂಗಳ ಅವಧಿಯಲ್ಲಿ: 50% ದಂಡ.
- 24 ತಿಂಗಳು ಕಳೆದರೆ: 60-70% ವರೆಗೆ ಹೆಚ್ಚುವರಿ ತೆರಿಗೆ ಬೀಳುವ ಸಾಧ್ಯತೆ ಇರುತ್ತದೆ.

