BREAKING : ಹಾಸನದಲ್ಲಿ ತಂದೆಯನ್ನು ಕೊಂದಿದ್ದ ಆರೋಪಿಯ ಕೊಚ್ಚಿ ಕೊಲೆ ; 13 ವರ್ಷಗಳ ಬಳಿಕ ಆರಿತು ಸೇಡಿನ ಜ್ವಾಲೆ.!

ಹಾಸನ : ತನ್ನ ತಂದೆಯನ್ನು ಕೊಂದಿದ್ದ ಆರೋಪಿಯನ್ನು ಮಗ ಕೊಚ್ಚಿ ಕೊಲೆ ಮಾಡಿ ಸೇಡು ತೀರಿಸಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ದಡದಹಳ್ಳಿ ಗ್ರಾಮದಲ್ಲಿ ನಡೆದಿದೆ.

2011 ರಲ್ಲಿ ಲಕ್ಕಪ್ಪ ಎಂಬುವವರ ಕೊಲೆ ಪ್ರಕರಣದಲ್ಲಿ ನಿರ್ವಾಣಪ್ಪ ಎಂಬಾತ ಜೈಲು ಸೇರಿದ್ದನು. ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಜೈಲಿನಿಂದ ಇತ್ತೀಚೆಗೆ ರಿಲೀಸ್ ಆಗಿ ಬಂದಿದ್ದನು.

ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ ಲಕ್ಕಪ್ಪನ ಮಗ ಮೂರ್ತಿ ನಿರ್ವಾಣಪ್ಪ ಜೈಲಿನಿಂದ ಬರುತ್ತಿದ್ದಂತೆ ಕೊಚ್ಚಿ ಕೊಲೆ ಮಾಡಿದ್ದಾನೆ. ಈ ಮೂಲಕ 13 ವರ್ಷಗಳ ಬಳಿಕ ಸೇಡು ತೀರಿಸಿಕೊಂಡಿದ್ದಾನೆ. ಈ ಸಂಬಂಧ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read