HomeKarnatakaಪ್ರಧಾನಿ ಮೋದಿ ಸಂಚರಿಸುವ ಮಾರ್ಗದಲ್ಲಿ ಕೆಟ್ಟು ನಿಂತ ಕಸದ ಲಾರಿ, ಖಾಸಗಿ ಬಸ್

ಪ್ರಧಾನಿ ಮೋದಿ ಸಂಚರಿಸುವ ಮಾರ್ಗದಲ್ಲಿ ಕೆಟ್ಟು ನಿಂತ ಕಸದ ಲಾರಿ, ಖಾಸಗಿ ಬಸ್

ಕೋಲಾರ: ಪ್ರಧಾನಿ ನರೇಂದ್ರ ಮೋದಿ ಇಂದು ಕೋಲಾರದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಅಬ್ಬರದ ಚುನಾವಣಾ ಪ್ರಚಾರ ನಡೆಸುತಿದ್ದು, ಮೋದಿಯವರು ಸಂಚರಿಸುವ ಮಾರ್ಗದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಈ ಮಧ್ಯೆ ಪ್ರಧಾನಿ ಮೋದಿ ಸಂಚರಿಸುವ ಮಾರ್ಗ ಮಧ್ಯೆಯಲ್ಲಿ ಬಿಬಿಎಂಪಿ ಕಸದ ಲಾರಿ ಹಾಗೂ ಖಾಸಗಿ ಬಸ್ ಕೆಟ್ಟು ನಿಂತಿದ್ದ ಘಟನೆ ನಡೆದಿದೆ. ರಾಜಭವನದಿಂದ ಪ್ರಧಾನಿ ಮೋದಿಯವರು ಸಾಗುವ ಮಾರ್ಗದಲ್ಲಿ ಐಟಿಸಿ ವಿಂಡ್ಸರ್ ಮ್ಯಾನರ್ ಬಳಿ ಕಸದ ಲಾರಿ ಕೆಟ್ಟು ನಿಂತಿದ್ದರೆ, ಕಾವೇರಿ ಜಂಕ್ಷನ್ ಬಳಿ ಖಾಸಗಿ ಬಸ್ ವೊಂದು ಕೆಟ್ಟು ನಿಂತಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೊಲೀಸರು ಕಸದ ಲಾರಿಯನ್ನು ತಳ್ಳಿ ರಸ್ತೆ ಬದಿಗೆ ಸಾಗಿಸಿದ್ದಾರೆ. ಇನ್ನೊಂದೆಡೆ ಕೆಟ್ಟು ನಿಂತಿದ್ದ ಖಾಸಗಿ ಬಸ್ ನ್ನು ಕ್ರೇನ್ ಬಳಸಿ ತೆರವು ಮಾಡಿದ ಘಟನೆ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular