HomeEntertainmentBREAKING : ನಟ ದರ್ಶನ್ ಗೆ ಮತ್ತೊಂದು ರಿಲೀಫ್ : ಫೆ.10 ರವರೆಗೆ ಮೈಸೂರಿನಲ್ಲಿರಲು ಕೋರ್ಟ್...

BREAKING : ನಟ ದರ್ಶನ್ ಗೆ ಮತ್ತೊಂದು ರಿಲೀಫ್ : ಫೆ.10 ರವರೆಗೆ ಮೈಸೂರಿನಲ್ಲಿರಲು ಕೋರ್ಟ್ ಅನುಮತಿ.!

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ಮೇಲೆ ಬಿಡುಗಡೆಯಾಗಿರುವ ನಟ ದರ್ಶನ್ ಗೆ ಮೈಸೂರಿನಲ್ಲಿರಲು ಕೋರ್ಟ್ ಅನುಮತಿ ನೀಡಿದೆ.

ಮೈಸೂರಿನಲ್ಲಿ ವಾಸವಾಗಲು ಅನುಮತಿ ಕೋರಿ ನಟ ದರ್ಶನ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ 57ನೇ ಸಿಸಿಹೆಚ್ ಕೋರ್ಟ್, ಮೂರು ಕಾರಣಗಳಿಗಾಗಿ ಫೆ.10ರವರೆಗೆ ಮೈಸೂರಿನಲ್ಲಿರಲು ಅನುಮತಿ ನೀಡಿದೆ.

ವೈದ್ಯರ ಸಮಾಲೋಚನೆ, ಫಾರ್ಮ್ ಹೌಸ್ ಹಾಗೂ ತಾಯಿ ಭೇಟಿ ಕಾರಣಗಳಿಗಾಗಿ ನಟ ದರ್ಶನ್ ಗೆ ಫೆ.10ರವರೆಗೆ ಮೈಸೂರಿನಲ್ಲಿರಲು ಅನುಮತಿ ನೀಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಮೂಲಕ ಜಾಮೀನು ಪಡೆದು ಬಿಡುಗಡೆಯಾದ ಬಳಿಕ ನಟ ದರ್ಶನ್ ಮೂರನೇ ಬಾರಿಗೆ ಮೈಸೂರು ತೆರಳಲು ಕೋರ್ಟ್ ಅನುಮತಿ ಪಡೆದುಕೊಂಡಂತಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular