ಕೆಲವರು ಮೊಸಳೆ ಹತ್ತಿರ ಹೋಗಲೂ ಹೆದರುತ್ತಾರೆ. ಆದರೆ ಉತ್ತರಪ್ರದೇಶದ ಲಲಿತ್ ಪುರದಲ್ಲಿ ವ್ಯಕ್ತಿಯೊಬ್ಬ ಜೀವಂತ ಮೊಸಳೆಯನ್ನು ಹೆಗಲ ಮೇಲೆ ಹೊತ್ತು ಸಾಗಿದ್ದಾನೆ. ಬೆಚ್ಚಿಬೀಳಿಸುವ ಈ ವಿಡಿಯೋ ಇಂಟರ್ನೆಟ್ ನಲ್ಲಿ ಹರಿದಾಡ್ತಿದೆ. ಆತ ಮೊಸಳೆಯನ್ನು ಚರಂಡಿಯಲ್ಲಿ ರಕ್ಷಿಸಿ ಬಳಿಕ ಅದನ್ನು ನದಿಗೆ ಬಿಡಲು ಹೆಗಲ ಮೇಲೆ ಹೊತ್ತಿಕೊಂಡು ಹೋಗುತ್ತಿದ್ದ ಎನ್ನಲಾಗಿದೆ.
ಮೊಸಳೆಯನ್ನು ಹೆಗಲ ಮೇಲೆ ಹೊತ್ತು ಸಾಗುತ್ತಿರುವ ವ್ಯಕ್ತಿಯ ಧೈರ್ಯದ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಆತನನ್ನು ಬೇರ್ ಗ್ರಿಲ್ಸ್ ಗೆ ಹೋಲಿಸಲಾಗುತ್ತಿದೆ ಮತ್ತು ಅಪಾಯಕಾರಿ ಮೊಸಳೆಯನ್ನು ತನ್ನ ಭುಜದ ಮೇಲೆ ಹೊತ್ತುಕೊಂಡು ಧೈರ್ಯವನ್ನು ಪ್ರದರ್ಶಿಸಿದ್ದಕ್ಕಾಗಿ ರಿಯಲ್ ಬಾಹುಬಲಿ ಎಂದು ಹೇಳಲಾಗುತ್ತಿದೆ. ವ್ಯಕ್ತಿ ಮೊಸಳೆಯನ್ನು ಹಗ್ಗದಿಂದ ಕಟ್ಟಿ ಅದನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿದ್ದರೆ, ಕೆಲವು ಗ್ರಾಮಸ್ಥರು ಆತನನ್ನು ಹಿಂಬಾಲಿಸಿರೋದನ್ನ ವಿಡಿಯೋದಲ್ಲಿ ಕಾಣಬಹುದು.
ಆದಾಗ್ಯೂ ವ್ಯಕ್ತಿ ಮಾಡಿದ ಕೃತ್ಯವು ತುಂಬಾ ಅಪಾಯಕಾರಿ. ಯಾವುದೇ ನಾಗರಿಕರು ಇದನ್ನು ಪ್ರಯತ್ನಿಸಬಾರದು. ಯಾವುದೇ ತಜ್ಞರ ತರಬೇತಿಯಿಲ್ಲದೆ ಮೊಸಳೆಯನ್ನು ಹಿಡಿಯುವುದು ಅಪಾಯಕಾರಿ. ಚರಂಡಿಯಲ್ಲಿ ಮೊಸಳೆ ಕಂಡ ಆತ ಅರಣ್ಯ ಇಲಾಖೆ ಅಧಿಕಾರಿಗಳು ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕಿತ್ತು. ಮನುಷ್ಯ ತಾನೇ ಮೊಸಳೆ ಹಿಡಿಯಲು ಹೋಗಬಾರದಿತ್ತು ಎಂದು ಕೆಲವರು ಸಲಹೆ ನೀಡಿದ್ದಾರೆ. ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ವ್ಯಕ್ತಿ ಇಂಟರ್ನೆಟ್ ಬಳಕೆದಾರರಿಂದ ಪ್ರಶಂಸೆಗೆ ಪಾತ್ರನಾಗಿದ್ದಾನೆ.
https://twitter.com/tyagivinit7/status/1715618318609166584?ref_src=twsrc%5Etfw%7Ctwcamp%5Etweetembed%7Ctwterm%5E1715618318609166584%7Ctwgr%5Ef6c4af474782bc38c1e53378b5226b64deddf6ca%7Ctwcon%5Es1_&ref_url=https%3A%2F%2Fwww.freepressjournal.in%2Findia%2Fup-in-a-daring-stunt-man-carries-dangerous-crocodile-on-his-shoulders-in-lalitpur-visuals-surface
https://twitter.com/Dineshtripthi/status/1715621537481703449?ref_src=twsrc%5Etfw%7Ctwcamp%5Etweetembed%7Ctwterm%5E17156
https://twitter.com/sanjayjourno/status/1715599325474988131?ref_src=twsrc%5Etfw%7Ctwcamp%5Etweetembed%7Ctwterm%5E17155993254749