HomeEntertainmentಕ್ಯಾಮೆರಾ ಮುಂದೆ ರೊಮ್ಯಾನ್ಸ್, ನಿಜ ಜೀವನದಲ್ಲಿ ಅಣ್ಣ-ತಂಗಿ: ಇಮ್ರಾನ್ ಹಾಶ್ಮಿ ಬಗ್ಗೆ ತನುಶ್ರೀ ಅಚ್ಚರಿಯ ಮಾತು

ಕ್ಯಾಮೆರಾ ಮುಂದೆ ರೊಮ್ಯಾನ್ಸ್, ನಿಜ ಜೀವನದಲ್ಲಿ ಅಣ್ಣ-ತಂಗಿ: ಇಮ್ರಾನ್ ಹಾಶ್ಮಿ ಬಗ್ಗೆ ತನುಶ್ರೀ ಅಚ್ಚರಿಯ ಮಾತು

ಬಾಲಿವುಡ್ ಚಿತ್ರರಂಗದಲ್ಲಿ ನಟ ಇಮ್ರಾನ್ ಹಾಶ್ಮಿ ಅವರಿಗೆ ಸೀರಿಯಲ್ ಕಿಸ್ಸರ್ ಎಂಬ ಹೆಸರು ಬಂದಿದ್ದು ಪ್ರೇಕ್ಷಕರಿಗೆ ಗೊತ್ತೇ ಇದೆ. ೨೦೦೦ರ ದಶಕದಲ್ಲಿ ತೆರೆಕಂಡ ಹಲವಾರು ಸಿನಿಮಾಗಳಲ್ಲಿ ಅವರು ನೀಡಿದ ಹಾಟ್ ಮತ್ತು ಬೋಲ್ಡ್ ದೃಶ್ಯಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದವು. ಅದರಲ್ಲೂ ನಟಿ ತನುಶ್ರೀ ದತ್ತಾ ಜೊತೆಗಿನ ಅವರ ಕೆಮಿಸ್ಟ್ರಿ ಪ್ರೇಕ್ಷಕರ ಗಮನ ಸೆಳೆದಿತ್ತು.

೨೦೦೫ರಲ್ಲಿ ಬಿಡುಗಡೆಯಾದ ಆಶಿಕ್ ಬನಾಯಾ ಆಪ್ನೇ ಸಿನಿಮಾದಲ್ಲಿ ಇಮ್ರಾನ್ ಹಾಶ್ಮಿ ಮತ್ತು ತನುಶ್ರೀ ದತ್ತಾ ಜೊತೆಯಾಗಿ ಅಭಿನಯಿಸಿದ್ದರು. ಈ ಸಿನಿಮಾದ ಹಾಡೊಂದರಲ್ಲಿ ಇವರಿಬ್ಬರ ನಡುವಿನ ಬೋಲ್ಡ್ ದೃಶ್ಯಗಳು ಅಪಾರ ಪ್ರಸಿದ್ಧಿ ಪಡೆದಿದ್ದವು. ನಂತರದ ದಿನಗಳಲ್ಲಿ ಈ ಜೋಡಿ ಗುಡ್ ಬಾಯ್ ಬ್ಯಾಡ್ ಬಾಯ್ ಸೇರಿದಂತೆ ಕೆಲವು ಚಿತ್ರಗಳಲ್ಲಿ ಒಂದಾಗಿ ಕಾಣಿಸಿಕೊಂಡಿತ್ತು.

ಆದರೆ ಈ ಬೋಲ್ಡ್ ದೃಶ್ಯಗಳ ಕುರಿತು ನಟಿ ತನುಶ್ರೀ ದತ್ತಾ ನೀಡಿದ್ದ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಸದ್ದು ಮಾಡುತ್ತಿದೆ. ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡರೂ ನೈಜ ಜೀವನದಲ್ಲಿ ತಮ್ಮಿಬ್ಬರ ನಡುವಿನ ಬಾಂಧವ್ಯ ಸಹೋದರ ಸಹೋದರಿಯಂತಿತ್ತು ಎಂದು ಅವರು ಹೇಳಿದ್ದಾರೆ. ಕ್ಯಾಮೆರಾ ಮುಂದೆ ಮಾಡುವ ದೃಶ್ಯಗಳು ಸಂಪೂರ್ಣವಾಗಿ ತಾಂತ್ರಿಕ ಅಂಶಗಳ ಮೇಲೆ ಆಧಾರಿತವಾಗಿರುತ್ತವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತೆರೆಮೇಲೆ ಅಂತಹ ದೃಶ್ಯಗಳಲ್ಲಿ ನಟಿಸುವಾಗ ಯಾವುದೇ ನಟ ನಟಿಯರು ಅದನ್ನು ಆನಂದಿಸುವುದಿಲ್ಲ. ನೂರಾರು ಜನರ ಸಮ್ಮುಖದಲ್ಲಿ ದೃಶ್ಯ ಸರಿಯಾಗಿ ಬರಬೇಕು ಎಂಬ ಒತ್ತಡದಲ್ಲೇ ಕೆಲಸ ಮಾಡಬೇಕಿರುತ್ತದೆ. ಆಕ್ಷನ್ ಅಥವಾ ಭಾವುಕ ದೃಶ್ಯಗಳಲ್ಲಿ ಅಭಿನಯಿಸುವಷ್ಟೇ ಸಾಮಾನ್ಯ ರೀತಿಯಲ್ಲಿ ಇಂತಹ ದೃಶ್ಯಗಳಲ್ಲೂ ಪಾತ್ರ ನಿರ್ವಹಿಸಲಾಗುತ್ತದೆ ಹೊರತು ಅಲ್ಲಿ ಯಾವುದೇ ವೈಯಕ್ತಿಕ ಭಾವನೆ ಇರುವುದಿಲ್ಲ ಎಂದು ತನುಶ್ರೀ ಸ್ಪಷ್ಟಪಡಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular