HomeKarnatakaBIG NEWS : ಖಜಾನೆಗೆ ಬಿಲ್ಲುಗಳನ್ನು ಸಲ್ಲಿಸುವ ಬಗ್ಗೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.!

BIG NEWS : ಖಜಾನೆಗೆ ಬಿಲ್ಲುಗಳನ್ನು ಸಲ್ಲಿಸುವ ಬಗ್ಗೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.!

ಬೆಂಗಳೂರು : ಖಜಾನೆಗಳಿಗೆ ಬಿಲ್ಲುಗಳನ್ನು ಸಲ್ಲಿಸುವ ಬಗ್ಗೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. , ಆರ್ಥಿಕ ಇಲಾಖೆಯ ಎಲ್ಲಾ ಶಾಖೆಗಳು ದಿನಾಂಕ:15.03.2025 ರೊಳಗಾಗಿ ಹೊರಡಿಸುವ ಹೆಚ್ಚುವರಿ / ಪುನರ್ವಿನಿಯೋಗ ಆದೇಶಗಳನ್ನು ಒಳಗೊಂಡಂತೆ ಯಾವುದೇ ಹಣ ಬಿಡುಗಡೆಗೆ ಅನುಮತಿಸುವ ಸಂಧರ್ಭಗಳಲ್ಲಿ ತತ್ಸಂಬಂಧ ಬಿಲ್ಲುಗಳನ್ನು, ಆರ್ಥಿಕ ಇಲಾಖೆಯಿಂದ ಹೊರಡಿಸಲಾಗುವ ಹಿಂಬರಹದ ದಿನಾಂಕದಿಂದ 10 ದಿನಗಳೊಳಗಾಗಿ ಖಜಾನೆಗೆ ಸಲ್ಲಿಸುವಂತೆ ಹಿಂಬರಹದಲ್ಲಿ ನಮೂದಿಸುವುದು.

ಅದೇ ರೀತಿ, ದಿನಾಂಕ:15.03.2025 ರ ನಂತರ ಹೊರಡಿಸಲಾಗುವ ಇಂತಹ ಹಿಂಬರಹಗಳಲ್ಲಿ, ಹಿಂಬರಹದ ದಿನಾಂಕದಿಂದ 07 ದಿನಗಳೊಳಗಾಗಿ ಖಜಾನೆಗೆ ಬಿಲ್ಲುಗಳನ್ನು ಸಲ್ಲಿಸಲು ಸೂಚಿಸುವಂತೆ ತಿಳಿಸಿದೆ. (ಉದಾ: ಹಿಂಬರಹ ದಿನಾಂಕ:16.03.2025 ಬಿಲ್ಲು ಸಲ್ಲಿಕೆ ದಿ.23.03.2025 ರೊಳಗೆ) ಇದರಿಂದ ಖಜಾನೆಯಲ್ಲಿ ಬಿಲ್ಲನ್ನು ಸ್ವೀಕರಿಸಲು ಯಾವುದೇ ಗೊಂದಲವಾಗುವುದಿಲ್ಲವಾದ್ದರಿಂದ ಈ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೋರಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular