HomeLatest News'ರೈಲ್ವೇ' ಪ್ರಯಾಣಿಕರಿಗೆ ಮುಖ್ಯ ಮಾಹಿತಿ :  ಈ  ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ

‘ರೈಲ್ವೇ’ ಪ್ರಯಾಣಿಕರಿಗೆ ಮುಖ್ಯ ಮಾಹಿತಿ :  ಈ  ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ

ಬೆಂಗಳೂರು : ಹಾವೇರಿ ಮತ್ತು ಬ್ಯಾಡಗಿ ನಿಲ್ದಾಣಗಳ ನಡುವಿನ ರೈಲ್ವೆ ಹಳಿಯಲ್ಲಿ ಅಗತ್ಯ ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳು ನಡೆಯುತ್ತಿರುವುದರಿಂದ, ಈ ಕೆಳಗಿನ ರೈಲುಗಳ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

  1. ರೈಲು ಸಂಖ್ಯೆ 17325 ಬೆಳಗಾವಿ-ಮೈಸೂರು ವಿಶ್ವಮಾನವ ದೈನಂದಿನ ಎಕ್ಸ್ಪ್ರೆಸ್ ರೈಲು ಈ ಮೊದಲು ಮೇ 5, 6, 8, 9, 11, 12, 13, 15 ಮತ್ತು 16, 2025 ರಂದು ಬೆಳಗಾವಿಯಿಂದ 60 ನಿಮಿಷಗಳ ಕಾಲ ತಡವಾಗಿ ಹೊರಡಲಿದೆ ಮತ್ತು ಮಾರ್ಗ ಮಧ್ಯೆ 45 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು ಎಂದು ತಿಳಿಸಲಾಗಿತ್ತು. ಆದರೆ, ಈಗ ಈ ರೈಲು ಮೇ 5, 2025 ರಿಂದ ತನ್ನ ಮೊದಲಿನ ವೇಳಾಪಟ್ಟಿಯ ಪ್ರಕಾರ ಎಂದಿನಂತೆ ಸಂಚಾರ ಆರಂಭಿಸಲಿದೆ.
  2. ಮೇ 6, 8, 13, 15 ಮತ್ತು 20, 2025 ರಂದು ಬಿಕಾನೇರ್ನಿಂದ ಹೊರಡುವ ರೈಲು ಸಂಖ್ಯೆ 16588 ಬಿಕಾನೇರ್ ಯಶವಂತಪುರ ದಿ-ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು ಮಾರ್ಗ ಮಧ್ಯೆ 75 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.
  3. ಮೇ 5, 6, 8, 9, 11, 12, 13, 15, 16, 18, 19, 20, 22 2 23, 2025 ರಂದು ಹೊರಡುವ ರೈಲುಗಳ ಸಂಖ್ಯೆ 17347 ಹುಬ್ಬಳ್ಳಿ-ಚಿತ್ರದುರ್ಗ ಡೈಲಿ ಎಕ್ಸ್ಪ್ರೆಸ್ ಹುಬ್ಬಳ್ಳಿಯಿಂದ 75 ನಿಮಿಷಗಳ ಕಾಲ ತಡವಾಗಿ ಹೊರಡಲಿದೆ ಮತ್ತು ಮಾರ್ಗ ಮಧ್ಯೆ 25 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.
For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular