ರಾಯಚೂರು : ರಾಷ್ಟ್ರೀಯ ತೋಟಗಾರಿಕೆ ಮಿಷನ್, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ತಾಳೆಬೆಳೆ, ಸಮಗ್ರ ತೋಟಗಾರಿಕೆ ಅಭಿವೃದ್ಧಿ ಹಾಗೂ ಹನಿ ನೀರಾವರಿ ಯೋಜನೆಗಳಿಗೆ ಸಹಾಯಧನ ನೀಡಲಾಗುತ್ತಿದೆ.
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಅಡಿಯಲ್ಲಿ ಜಿಲ್ಲೆಗೆ ಹಣ್ಣಿನ ಬೆಳೆಗಳಾದ ಬಾಳೆ, ಮಾವು, ಹಾಗೂ ಪಪಾಯ, ಕೃಷಿಹೊಂಡಾ, ಮಿನಿ ಟ್ರ್ಯಾಕ್ಟರ್ ಖರೀದಿಗೆ, ತೋಟಗಾರಿಕೆಯಲ್ಲಿ ಬಳಸುವ ಔಷದಗಳಿಗೆ ಮತ್ತು ಈರಳ್ಳಿ ಶೇಖರಣ ಘಟಕ. ಫಾರ್ಮಗೇಟ್ ಪ್ಯಾಕಹೌಸ್ ನಿರ್ಮಾಣ ಮಾಡಿದ ಸಾಮಾನ್ಯ, ಪರಿಶಿಷ್ಟ ಜಾತಿ ಹಾಗೂ ಪರಿಷಿಷ್ಟ ಪಂಗಡದ ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಸಹಾಯಧನ ನೀಡಲಾಗುತ್ತಿದೆ. ರೈತರು ಅರ್ಜಿಗಳು ಸಂಬಂಧಿಸಿದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ತಾಲೂಕು ಕಛೇರಿಗಳಲ್ಲಿ ಸಲ್ಲಿಸಬೇಕಾಗಿ ತಿಳಿಸಿದೆ.


