HomeKarnatakaರಾಜ್ಯದ ರೈತರ ಮಕ್ಕಳಿಗೆ ಮುಖ್ಯ ಮಾಹಿತಿ : 'ಕೃಷಿ ಡಿಪ್ಲೊಮಾ' ಕೋರ್ಸ್’ಗೆ ಅರ್ಜಿ ಆಹ್ವಾನ

ರಾಜ್ಯದ ರೈತರ ಮಕ್ಕಳಿಗೆ ಮುಖ್ಯ ಮಾಹಿತಿ : ‘ಕೃಷಿ ಡಿಪ್ಲೊಮಾ’ ಕೋರ್ಸ್’ಗೆ ಅರ್ಜಿ ಆಹ್ವಾನ

ಮಡಿಕೇರಿ : ಪ್ರಸಕ್ತ (2024-25) ಶೈಕ್ಷಣಿಕ ವರ್ಷದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರದ ಕೃಷಿ ಡಿಪ್ಲೊಮಾ ಕೋರ್ಸ್ಗೆ ಪ್ರವೇಶಾತಿ ಅರ್ಜಿ ಆಹ್ವಾನಿಸಲಾಗಿದ್ದು, ಡಿಪ್ಲೊಮಾ ಕೃಷಿ ದಾಖಲಾತಿಗೆ ಈ ಹಿಂದೆ ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಅಂತಿಮ ದಿನಾಂಕವನ್ನು 14.09.2024 ಎಂದು ಅಧಿಸೂಚನೆ ಹೊರಡಿಸಲಾಗಿತ್ತು. ಅರ್ಜಿ ಸಲ್ಲಿಸಲು ಅಂತಿಮ ದಿನಾಂಕವನ್ನು ಸೆಪ್ಟೆಂಬರ್, 30 ರವರೆಗೆ ವಿಸ್ತರಿಸಲಾಗಿದೆ.

ಅರ್ಜಿಯನ್ನು www.uahs.edu.in ವೈಬ್ಸೈಟ್ ಇಲ್ಲಿ ಎಲ್ಲಾ ಅಧಿಸೂಚನೆಗಳು ಶೀರ್ಷಿಕೆ ಅಡಿಯಲ್ಲಿ ಡೌನ್ಲೋಡ್ ಮಾಡಿ ಭರ್ತಿ ಮಾಡಿದ ಅರ್ಜಿಗಳನ್ನು ಸೆಪ್ಟೆಂಬರ್ 30 ರೊಳಗೆ ಸಲ್ಲಿಸಬಹುದಾಗಿದೆ.

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ, ಕನಿಷ್ಠ ಶೇ.45 (ಕನಿಷ್ಠ ಶೇ. 40 ಪ.ಜಾ. ಮತ್ತು ಪ.ಪಂ./ ಪ್ರವರ್ಗ-1) ಅಂಕಗಳೊಂದಿಗೆ ಉತ್ತೀರ್ಣರಾದ, 19 ವರ್ಷ ವಯಸ್ಸು ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ರೈತರ ಹಾಗೂ ಕೃಷಿ ಕಾರ್ಮಿಕರ ಮಕ್ಕಳಿಗೆ ಶೇ. 50 ರಷ್ಟು ಮೀಸಲಾತಿ ಇರುತ್ತದೆ. ಈ ಎರಡು ವರ್ಷದ ಕೃಷಿ ಡಿಪ್ಲೊಮಾ ಕೋರ್ಸ್ನಲ್ಲಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ಹೈನುವಿಜ್ಞಾನ, ರೇಷ್ಮೆ ಕೃಷಿ, ಜೇನು ಕೃಷಿ ಹೀಗೆ ಕೃಷಿಗೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ನುರಿತ ವಿಜ್ಞಾನಿಗಳಿಂದ ಭೋದನೆ ಇರುತ್ತದೆ. ಹಾಗೂ ಕೃಷಿ ರಂಗದ ಪ್ರಾಯೋಗಿಕ ಪರಿಚಯ/ ಅನುಭವ ಆಧಾರಿತ ಕಲಿಕೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ ಕುಲಸಚಿವರು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ, ಕರ್ನಾಟಕ, ಕಾಲೇಜು ಮತ್ತು ವಿಳಾಸ: ಪ್ರಾಂಶುಪಾಲರು, ಡಿಪ್ಲೊಮಾ ಕೃಷಿ ಮಹಾವಿದ್ಯಾಲಯ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರ – 576213, ಉಡುಪಿ ಜಿಲ್ಲೆ ಪ್ರಾಂಶುಪಾಲರು: 9480838208, ಕಚೇರಿ ದೂ.ಸಂ. 9108241342, 9686405090 E-mail: [email protected] Website: www.uahs.edu.in ಸಂಪರ್ಕಿಸಬಹುದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular