HomeKarnataka66 ಆರ್‌.ಟಿ.ಒ. ಕಚೇರಿಗಳಲ್ಲಿ Geo-fencing ಆಧಾರಿತ mVahan ಫಿಟ್ನೆಸ್ ಮೊಬೈಲ್ ಅಪ್ಲಿಕೇಷನ್ ಅನುಷ್ಠಾನ

66 ಆರ್‌.ಟಿ.ಒ. ಕಚೇರಿಗಳಲ್ಲಿ Geo-fencing ಆಧಾರಿತ mVahan ಫಿಟ್ನೆಸ್ ಮೊಬೈಲ್ ಅಪ್ಲಿಕೇಷನ್ ಅನುಷ್ಠಾನ

ರಾಜ್ಯದಲ್ಲಿ ನೋಂದಣಿಯಾಗಿ ಚಾಲ್ತಿಯಲ್ಲಿರುವ ವಾಣಿಜ್ಯ(ಸಾರಿಗೆ) ವಾಹನಗಳ ಅರ್ಹತಾ(ಫಿಟೈಸ್) ಪ್ರಮಾಣ ಪತ್ರ ವಿತರಣೆಯಲ್ಲಿ ನಡೆಯುತ್ತಿದ್ದ ದೋಷಪೂರಿತ ಕ್ರಮಗಳನ್ನು ತಡೆಯುವ ಸಲುವಾಗಿ ಸಾರಿಗೆ ಇಲಾಖೆಯು Geo-fencing ಆಧಾರಿತ mVahan ಫಿಟ್ನೆಸ್ ಮೊಬೈಲ್ ಅಪ್ಲಿಕೇಷನ್ನ್‌ನ್ನು ರಾಜ್ಯಾದ್ಯಾಂತ ಎಲ್ಲಾ 66 ಆ‌ರ್.ಟಿ.ಒ. ಕಚೇರಿಗಳಲ್ಲಿ ಆರಂಭಿಸಲಾಗಿದೆ.

ಸಾರಿಗೆ ಇಲಾಖೆಯ ರಾಜ್ಯದ ಎಲ್ಲಾ ಆರ್‌ಟಿಒ ಕಚೇರಿಗಳಲ್ಲಿ mVahan ಫಿಟ್ನೆಸ್ ಮೊಬೈಲ್ ಅಪ್ಲಿಕೇಷನ್ ಎಂದು ಕರೆಯಲ್ಪಡುವ ಈ ವ್ಯವಸ್ಥೆಯು ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿರುತ್ತದೆ ಹಾಗೂ ಈ ಮೂಲಕ ವಾಹನ ಮಾಲೀಕರು ಮತ್ತು ಸಾರ್ವಜನಿಕರ ವಿಶ್ವಾಸಾರ್ಹತೆ ಹೆಚ್ಚಾಗಲಿದೆ.

ವಾಹನಗಳ ಸಮರ್ಪಕ ಪರಿಶೀಲನೆಯ ನಂತರ ಮಾತ್ರ ಅರ್ಹತಾ (ಫಿಟ್ನೆಸ್) ಪ್ರಮಾಣಪತ್ರಗಳನ್ನು ನೀಡಲಾಗುವಂತೆ ಖಚಿತಪಡಿಸಿಕೊಳ್ಳಲು ಹಾಗೂ ಸಂಭವನೀಯ ಎಲ್ಲಾ ದೋಷಗಳನ್ನು ನಿವಾರಿಸುವ ಉದ್ದೇಶದಿಂದ ಈ ಹೊಸ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕರ್ನಾಟಕ ರಾಜ್ಯದಲ್ಲಿ ಸುಮಾರು 30 ಲಕ್ಷಕ್ಕೂ ಹೆಚ್ಚು ವಾಣಿಜ್ಯ(ಸಾರಿಗೆ) ವಾಹನಗಳು ನೋಂದಣಿಯಾಗಿ ಚಾಲ್ತಿಯಲ್ಲಿದ್ದು, ವಾಹನಗಳ ಅರ್ಹತಾ(ಫಿಟ್ನೆಸ್) ಪ್ರಮಾಣ ಪತ್ರ ನೀಡುವಿಕೆಯಲ್ಲಿ ಏಕರೂಪತೆ ಇಲ್ಲ, ಪಾರದರ್ಶಕ ವ್ಯವಸ್ಥೆಯಿಲ್ಲ ಎಂಬ ಆರೋಪಗಳು ಆಗಾಗ್ಗೆ ಕೇಳಿ ಬರುತ್ತಿದ್ದವು.

ಈ ಹಿನ್ನೆಲೆಯಲ್ಲಿ NIC ಅಭಿವೃದ್ಧಿಪಡಿಸಿರುವ ಹೊಸ mVahan ಫಿಟ್ನೆಸ್ ಮೊಬೈಲ್ ಅಪ್ಲಿಕೇಷನ್ ಅನ್ನು ಜಾರಿಗೆ ತರಲಾಗಿದೆ.

 ಈ ಅಪ್ಲಿಕೇಷನ್ ಮೂಲಕ ಪ್ರತಿಯೊಂದು ಆರ್‌ಟಿಒ ಕಚೇರಿಗಳಿಗೆ ವಾಹನಗಳನ್ನು ಭೌತಿಕವಾಗಿ ಪರಿಶೀಲಿಸಲಾಗುವ ಪ್ರದೇಶಗಳನ್ನು ನಿಗದಿಪಡಿಸಿ Geo-fencing ಮಾಡಲಾಗಿದೆ.

ನಿಗದಿತ ಪ್ರದೇಶಗಳಿಗೆ ವಾಹನಗಳು ಭೌತಿಕವಾಗಿ ಹಾಜರಾದ ನಂತರವೇ ಮೋಟಾರು ವಾಹನ ಕಾಯ್ದೆ ಮತ್ತು ನಿಯಮಾನುಸಾರ ಪರಿಶೀಲನೆ ನಡೆಸಲಾಗುತ್ತದೆ.

ಪರಿಶೀಲನೆಯ ವೇಳೆ ವಾಹನದ ವಿವಿಧ ಆರು (6) ಛಾಯಾಚಿತ್ರಗಳನ್ನು ಕಡ್ಡಾಯವಾಗಿ ತೆಗೆದು ಅಪ್ಲಿಕೇಷನ್ನಲ್ಲಿ ಅನುಮೋದನೆಗೊಂಡ ನಂತರವೇ ವಾಹನದ ಅರ್ಹತಾ ಪ್ರಮಾಣ ಪತ್ರ ನೀಡಲಾಗುತ್ತದೆ.

ಈಗಾಗಲೇ ನಿಗದಿಪಡಿಸಿರುವ ನಿಗದಿತ ಪ್ರದೇಶಗಳನ್ನು ಹೊರತುಪಡಿಸಿ ಇನ್ನಿತರ ಪ್ರದೇಶಗಳಲ್ಲಿ ವಾಹನದ ಅರ್ಹತಾ ಪ್ರಮಾಣ ಪತ್ರವನ್ನು ನೀಡಲು ಸಾಧ್ಯವಿರುವುದಿಲ್ಲ.

ವಾಹನದ ಅರ್ಹತಾ ಪ್ರಮಾಣ ಪತ್ರ ಕೋರಿ ಬರುವ ವಾಹನಗಳ ಪೈಕಿ ಕನಿಷ್ಠ 20 % ವಾಹನಗಳನ್ನು ಮರುತಪಾಸಣೆ ಮಾಡಲು ನೋಂದಣಿ ಪ್ರಾಧಿಕಾರಗಳಿಗೆ ಸೂಚನೆಯನ್ನು ನೀಡಲಾಗಿದೆ.

mVahan ಫಿಟ್ನೆಸ್ ಮೊಬೈಲ್ ಅಪ್ಲಿಕೇಷನ್ಅನ್ನು ದೇಶದ ಕೆಲವು ರಾಜ್ಯಗಳಲ್ಲಿ ಅಳವಡಿಸಿಕೊಳ್ಳಲಾಗಿದ್ದು, ಕರ್ನಾಟಕ ರಾಜ್ಯದಲ್ಲಿಯೂ ಪ್ರಸ್ತುತ ಅಳವಡಿಸಿಕೊಳ್ಳಲಾಗುತ್ತಿದೆ.

ರಸ್ತೆ ಅಪಘಾತಗಳನ್ನು ಕಡಿಮೆಗೊಳಿಸಲು ಹಾಗೂ ಸಮಗ್ರ ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಈ ವ್ಯವಸ್ಥೆ ಸಹಾಯಕವಾಗಲಿದೆ.

ಈ ಉಪಕ್ರಮದ ಮೂಲಕ ದೀರ್ಘಕಾಲದಿಂದ ಅರ್ಹತಾ 13 ಪ್ರಮಾಣ ಪತ್ರ ನೀಡಿಕೆಯಲ್ಲಿ ಕೇಳಿ ಬರುತ್ತಿದ್ದ ಅಪಸ್ವರಕ್ಕೆ ತೆರೆ ಬೀಳಲಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular