HomeCrimeಆನ್‌ಲೈನ್ ಮೂಲಕ ವಂಚನೆಯಾದಾಗ ಏನು ಮಾಡಬೇಕು?

ಆನ್‌ಲೈನ್ ಮೂಲಕ ವಂಚನೆಯಾದಾಗ ಏನು ಮಾಡಬೇಕು?

ಆಧುನಿಕ ಯುಗದಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೂ, ಪ್ರತಿಯೊಬ್ಬರೂ ಅಂತರ್ಜಾಲದ ಬಳಕೆ ಮಾಡುತ್ತಿದ್ದಾರೆ. ತಂತ್ರಜ್ಞಾನ ಬೆಳೆದಂತೆ ಆನ್‌ಲೈನ್ ವಂಚನೆಯೂ ಅಧಿಕವಾಗುತ್ತಿದೆ. ಈಗ ಮಕ್ಕಳು ಹೆಚ್ಚಿನ ವಂಚನೆಗೆ ಒಳಗಾಗುತ್ತಿದ್ದು, ಮೊಬೈಲ್‌ನಿಂದ ಮಕ್ಕಳನ್ನು ದೂರವಿಡಬೇಕು.

ತಂತ್ರಜ್ಞಾನ ಬೆಳೆದಂತೆ ಅದನ್ನು ಬಳಸುವ ಜನರ ಸಂಖ್ಯೆಯೂ ಹೆಚ್ಚಾಗಿದೆ. ಮಕ್ಕಳು ಮೊಬೈಲ್ ಬಳಸುವಾಗ ವಂಚಕರು ಆಸೆ, ಅಮಿಷಗಳನ್ನು ಒಡ್ಡಿ ಕಳುಹಿಸುವ ಸಂದೇಶಗಳನ್ನು ಅರಿಯದೆ ಲಿಂಕ್‌ಗಳಿಗೆ ಪ್ರವೇಶ ಮಾಡುವುದರಿಂದ ಹೆಚ್ಚಾಗಿ ವಂಚನೆಗೆ ಒಳಗಾಗುತ್ತಿದ್ದಾರೆ.

ಸಿ.ಇ.ಎನ್ ಅಪರಾಧ ಪೊಲೀಸ್ ವಿಭಾಗದ ಡಿವೈಎಸ್ಪಿ ಬಿ. ಅಶ್ವಿನಿ ಮಾತನಾಡಿ, “ಅಂಗೈಯಲ್ಲೇ ಜಗತ್ತು ತೋರಿಸುವ ಅಂತರ್ಜಾಲ ಇಂದು ಪ್ರತಿಯೊಬ್ಬರ ಬದುಕನ್ನು ಆವರಿಸಿಕೊಂಡಿದೆ. ಮಕ್ಕಳಿಂದ ಹಿಡಿದು ಹಿರಿಯರವರೆಗೂ, ಜನ ಸಾಮಾನ್ಯನಿಂದ ಹಿಡಿದು ತಜ್ಞರವರೆಗೂ ಅಂತರ್ಜಾಲದ ಬಳಕೆ ವ್ಯಾಪಿಸಿದೆ” ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಅಂತರ್ಜಾಲ ಬಳಕೆದಾರರನ್ನು ವಂಚಿಸುವುದಕ್ಕಾಗಿಯೇ ಸಂಘಟಿತ ಅಪರಾಧ ಮಾಡುವ ಜಾಲ ಇಂದು ಜಗತ್ತನ್ನೇ ಆಳುತ್ತಿದೆ. ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿ ಈ ಸೈಬರ್ ವಂಚನೆಯ ಜಾಲಕ್ಕೆ ಒಳಗಾಗುತ್ತಿದ್ದು, ಸರಿಯಾದ ತಿಳುವಳಿಕೆ ಇಲ್ಲದೇ ನಾವಾಗಿಯೇ ಅಂತರ್ಜಾಲ ಬಳಕೆ ವೇಳೆ ತಪ್ಪುಗಳನ್ನು ಮಾಡಿ ತೊಂದರೆಗೀಡಾಗುತ್ತೇವೆ” ಎಂದು ತಿಳಿಸಿದರು.

“ಆನ್‌ಲೈನ್ ಹೂಡಿಕೆ, ಉದ್ಯೋಗ, ವಿವಾಹ ಸೇರಿದಂತೆ ಅನೇಕ ವಂಚನೆಗಳಿಗೆ ಒಳಗಾಗುವ ಯುವ ಜನತೆಗೆ ಬೇಸಿಕ್ ಮಾಹಿತಿ ಇಲ್ಲದೇ ಇರುವದೇ ಇದಕ್ಕೆ ಕಾರಣವಾಗಿದೆ. ಇ-ಮೇಲ್, ಹಾಗೂ ವಾಟ್ಸ್ ಆಪ್, ಮೊಬೈಲ್ ನಂಬರ್‌ಗೆ ಬರುವ ಅನವಶ್ಯಕ ಲಿಂಕ್ ಒತ್ತುವ ಮೂಲಕ ತಮ್ಮ ವೈಯಕ್ತಿಕ ಮಾಹಿತಿ ನೀಡುವುದರಿಂದ ವಂಚನೆಗಳು ಹೆಚ್ಚಾಗುತ್ತಿವೆ” ಎಂದು ಹೇಳಿದರು.

ಮೊದಲು ಏನು ಮಾಡಬೇಕು?; ಅನ್ಯ ನಂಬರ್‌ಗಳಿಂದ ವಂಚಕರು ಆಶ್ಲೀಲ ವಿಡಿಯೋ ಕರೆಗಳ ಮೂಲಕ ಮಾತನಾಡಿ, ರೆಕಾರ್ಡ್ ಮಾಡಿ ಮಾನಸಿಕವಾಗಿ ಕುಗ್ಗಿಸಿ, ವಂಚನೆ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೆರಗಳನ್ನು ಕಟ್ ಮಾಡಬೇಕು. ವಂಚನೆಗೆ ಒಳಗಾದ ತಕ್ಷಣ ಉಚಿತ ದೂರವಾಣಿ ಸಂಖ್ಯೆ. 1930 ಸಂಪರ್ಕಿಸಬೇಕು ಹಾಗೂ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಬೇಕು.

ವೈಯಕ್ತಿಕ ಮಾಹಿತಿ, ಒಟಿಪಿ, ಬ್ಯಾಂಕ್ ವಿವರ ಮತ್ತಿತರ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಜಾಲತಾಣ ಅಥವಾ ಇ-ಮೇಲ್ ಪಾಸ್‌ವರ್ಡ್‌ಗಳನ್ನು ಆಟೋ ಸೇವ್ ಮಾಡಬೇಡಿ, ಆಗಾಗ ಫರ್ಗೆಟ್ ಪಾಸ್‌ವರ್ಡ್ ಮೂಲಕ ಪಾಸ್‌ವರ್ಡ್‌ಗಳನ್ನು ರಿಸೆಟ್ ಮಾಡುವುದರ ಮೂಲಕ ಮತ್ತು ವಿಶಿಷ್ಟ ಚಿಹ್ನೆ ಮತ್ತು ಅಂಕಿಗಳನ್ನು ಒಳಗೊಂಡ ಸ್ಟ್ರಾಂಗ್ ಪಾಸ್‌ವರ್ಡ್ ನೀಡುವುದರಿಂದ ಜಾಲತಾಣಗಳ ವಂಚನೆಯಿಂದ ಸುರಕ್ಷಿತವಾಗಿರಬಹುದು.

ಎಐ ಬಗ್ಗೆಯೂ ಜಾಗೃತರಾಗಬೇಕು. ಎಐ ಸಂಬಂಧಿತ ಅಪಾಯಗಳನ್ನು ಪ್ರತಿಯೊಬ್ಬರಿಗೂ ಸಂಪೂರ್ಣವಾಗಿ ಅರಿತುಕೊಳ್ಳಬೇಕು. ಯುಪಿಐ ಪೇಮೆಂಟ್ ಪಾವತಿಸುವಾಗ ಹಣ ವರ್ಗಾಯಿಸುವ ಸಂಖ್ಯೆ ಮತ್ತು ಲಿಂಕ್ ಅಧಿಕೃತವಾಗಿ ಖಚಿತ ಪಡಿಸಿಕೊಳ್ಳಿ.

ತಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳಿವೆ ಪರಿಶೀಲಿಸಿ ತಾವುಗಳು ಬಳಸದೇ ಇರುವ ಸಿಮ್ ಕಾರ್ಡ್‌ಗಳ ಸಂಪರ್ಕ ಕಡಿತಗೊಳಿಸಬೇಕು ಹಾಗೂ ಬ್ಲೂಟೂತ್, ಫೋನ್, ಕಂಪ್ಯೂಟರ್ ಉಪಕರಣಗಳನ್ನು ಹಾಳಾದ ನಂತರ ಎಲ್ಲೆಂದರಲ್ಲಿ ಎಸೆಯಬೇಡಿ ಇವುಗಳಲ್ಲಿ ಡೇಟಾ ಸಂಗ್ರಹಣೆಯಾಗಿರುತ್ತದೆ. ಅವುಗಳು E -waste ನಲ್ಲಿ ನೀಡಿ ಡೇಟಾ ನಾಶಪಡಿಸಬೇಕು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular