HomeKarnatakaಹಣ ಸಹಾಯ ಮಾಡಿಲ್ಲ ಎಂದು ಐಎಂಎ ಅಧ್ಯಕ್ಷರಿಗೆ ಕಪಾಳಮೋಕ್ಷ, ಹಲ್ಲೆ

ಹಣ ಸಹಾಯ ಮಾಡಿಲ್ಲ ಎಂದು ಐಎಂಎ ಅಧ್ಯಕ್ಷರಿಗೆ ಕಪಾಳಮೋಕ್ಷ, ಹಲ್ಲೆ

ಬೆಂಗಳೂರು: ಹಣಕಾಸಿನ ಸಹಾಯ ಮಾಡಿಲ್ಲವೆಂದು ಐಎಂಎ ಅಧ್ಯಕ್ಷ ಡಾ.ಜಯಪ್ರಸಾದ್ ಗೆ ಡಾ.ಅಬ್ದುಲ್ ಕಪಾಳಮೋಕ್ಷ ಮಾಡಿ, ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಸದ್ಯ ಆರೋಪಿ ಡಾ.ಅಬ್ದುಲ್ ವಿರುದ್ಧ ನೆಲಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಾ.ಅಬ್ದುಲ್ ರೆಹಮಾನ್ ಶರೀಫ್ ಖಾಸಗಿ ಆಸ್ಪತ್ರೆಯಲ್ಲಿ ಮೈಕ್ರೋ ಬಯಲಾಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಮಗನ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಡಾ.ಅಬ್ದುಲ್ ವೈದ್ಯಕೀಯ ಸಂಘದಿಂದ 25 ಲಕ್ಷ ಸಹಾಯ ಮಾಡುವಂತೆ ಐಎಂಎ ಅಧ್ಯಕ್ಷ ಡಾ.ಜಯಪ್ರಸಾದ್ ಗೆ ಮನವಿ ಮಾಡಿದ್ದರು. ಆದರೆ ಐಎಂಎ ಅಧ್ಯಕ್ಷ ಡಾ.ಜಯಪ್ರಸಾದ್ ಹಣ ಸಹಾಯ ಮಾಡಿರಲಿಲ್ಲ. ಇದರಿಂದ ಕೋಪಗೊಂಡ ಡಾ.ಅಬ್ದುಲ್ ಡಾ.ಜಯಪ್ರಸಾದ್ ಗೆ ಕಪಾಳಮೋಕ್ಷ ಮಾಡಿ, ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ ಜಯಪ್ರಸಾದ್ ಎಡಕಿವಿ ಮತ್ತು ಎಡದವಡೆಗೆ ಪೆಟ್ಟಾಗಿದೆ. ಎಡ ಕಿವಿಕೂಡ ಕೇಳದಂತಾಗಿದೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿನ್ನೆಲೆಯಲ್ಲಿ ಡಾ.ಜಯಪ್ರಸಾದ್, ಡಾ.ಅಬ್ದುಲ್ ವಿರುದ್ದ ನೆಲಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular