HomeIndiaBIG NEWS: ಹಾಸ್ಟೆಲ್ ನಲ್ಲೇ ನೇಣಿಗೆ ಶರಣಾದ ಐಐಟಿ ವಿದ್ಯಾರ್ಥಿ

BIG NEWS: ಹಾಸ್ಟೆಲ್ ನಲ್ಲೇ ನೇಣಿಗೆ ಶರಣಾದ ಐಐಟಿ ವಿದ್ಯಾರ್ಥಿ

ಕೋಟಾ: ಐಐಟಿ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ನಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ. ಇದು ಈ ವರ್ಷ ಕೋಟಾದಲ್ಲಿ ನಡೆದ ನಾಲ್ಕನೇ ಪ್ರಕರಣವಾಗಿದೆ.

ಜಾರ್ಖಂಡ್ ಮೂಲದ ಶುಭ್ ಚೌದರಿ ಸಾವಿಗೆ ಶರಣಾದ ವಿದ್ಯಾರ್ಥಿ. ಇಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆಯಲು ಜೆಇಇ ಮೇನ್ಸ್ ಗೆ ತಯಾರಿನಡೆಸುತ್ತಿದ್ದ ವಿದ್ಯಾರ್ಥಿ ಕಳೆದ ಎರಡು ವರ್ಷಗಳಿಂದ ಕೋಟಾದಲ್ಲಿ ಹಾಸ್ಟೆಲ್ ನಲ್ಲಿ ವಾಸವಾಗಿದ್ದ.

ನಿನ್ನೆ ಜೆಇಇ ಫಲಿತಾಂಶ ಪ್ರಕಟವಾಗಿದ್ದು, ಆದರೆ ಶುಭ್ ಗೆ ತಾನು ನಿರೀಕ್ಷಿದಷ್ಟು ಫಲಿತಾಂಶ ಬಾರದ ಹಿನ್ನೆಲೆಯಲ್ಲಿ ತೀವ್ರವಾಗಿ ಮನನೊಂದಿದ್ದ. ಬೇಸರದಲ್ಲಿ ಹಾಸ್ಟೆಲ್ ಗೆ ಹೋದ ವಿದ್ಯಾರ್ಥಿ ಇಂದು ಬೆಳಿಗ್ಗೆ ಕೊಠಡಿಯಲ್ಲಿಯೇ ನೇಣಿಗೆ ಕೊರಳೊಡ್ಡಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜಸ್ಥಾನ ಕೋಟಾಗೆ ದೇಶದ ವಿವಿಧ ಭಾಗಗಳಿಂದ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗಾಗಿ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಹೀಗೆ ಬಂದ ಹಲವು ವಿದ್ಯಾರ್ಥಿಗಳು ಒತ್ತಡದಿಂದಾಗಿ ಆತ್ಮಹತ್ಯೆಗೆ ಶರಣಾದ ಹಲವು ಘಟನೆಗಳು 2023ರಲ್ಲಿ ನಡೆದಿತ್ತು. ಇದೀಗ ಕೋಟಾದಲ್ಲಿ ಐಐಟಿ ವಿದ್ಯಾರ್ಥಿ ಆತ್ಮಹತ್ಯೆ ಈ ವರ್ಷದ ನಾಲ್ಕನೇ ಪ್ರಕರಣವಾಗಿದೆ.

 

For Latest News Updates, Join Our Whatsapp Community🚩
RELATED ARTICLES

Most Popular