HomeEntertainmentಬಾಲಿವುಡ್‌ನ ಮಾಜಿ ಜೋಡಿಯ ಅನಿರೀಕ್ಷಿತ ಭೇಟಿ: ಜಬ್ ವೀ ಮೆಟ್ ನೆನಪುಗಳನ್ನು ಮರುಕಳಿಸಿದ ಕರೀನಾ-ಶಾಹಿದ್ ಅಪ್ಪಿಕೊಳ್ಳುವಿಕೆ

ಬಾಲಿವುಡ್‌ನ ಮಾಜಿ ಜೋಡಿಯ ಅನಿರೀಕ್ಷಿತ ಭೇಟಿ: ಜಬ್ ವೀ ಮೆಟ್ ನೆನಪುಗಳನ್ನು ಮರುಕಳಿಸಿದ ಕರೀನಾ-ಶಾಹಿದ್ ಅಪ್ಪಿಕೊಳ್ಳುವಿಕೆ

ಮುಂಬೈನಲ್ಲಿ ನಡೆದ ಐಫಾ 2027 (IIFA 2027) ಪ್ರಶಸ್ತಿ ಪ್ರದಾನ ಸಮಾರಂಭದ ಮುಂಚಿತವಾಗಿ ಏರ್ಪಡಿಸಲಾಗಿದ್ದ ವಿಶೇಷ ಪತ್ರಿಕೋಷ್ಟಮದಲ್ಲಿ ಬಾಲಿವುಡ್‌ನ ಜನಪ್ರಿಯ ತಾರೆಯರಾದ ಕರೀನಾ ಕಪೂರ್ ಹಾಗೂ ಶಾಹಿದ್ ಕಪೂರ್ ಪರಸ್ಪರ ಆತ್ಮೀಯವಾಗಿ ಅಪ್ಪಿಕೊಂಡಿರುವ ಅಪರೂಪದ ದೃಶ್ಯವು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ ವೈರಲ್ ಆಗಿದ್ದು, ಇಡೀ ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸಿದೆ. ಈ ಹಿಂದೆ ಸಿನಿಮಾರಂಗದ ಹಾಟ್ ಕಪಲ್ ಆಗಿ ಗುರುತಿಸಿಕೊಂಡಿದ್ದ ಈ ಜೋಡಿ, ಹಲವು ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಮುಕ್ತವಾಗಿ ಕಾಣಿಸಿಕೊಂಡಿರುವುದು ಸಿನಿಪ್ರಿಯರಲ್ಲಿ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ.

ಗುರುವಾರದಂದು ಮುಂಬೈನಲ್ಲಿ ನಡೆದ ಈ ಅದ್ದೂರಿ ಕಾರ್ಯಕ್ರಮದಲ್ಲಿ ಕರೀನಾ ಕಪೂರ್ ಸ್ಟೈಲಿಶ್ ಕಪ್ಪು ಬಣ್ಣದ ಲೆದರ್ ಟಾಪ್ ಹಾಗೂ ಮ್ಯಾಚಿಂಗ್ ಸ್ಕರ್ಟ್ ಧರಿಸಿ ನೋಡುಗರ ಕಣ್ಣು ಕುಕ್ಕಿದರೆ, ಶಾಹಿದ್ ಕಪೂರ್ ಆಕರ್ಷಕ ಬಿಳಿ ಬಣ್ಣದ ಸೂಟ್ ಧರಿಸಿ ಗಭೀರ ಹಾಗೂ ಹ್ಯಾಂಡ್ಸಮ್ ಲುಕ್‌ನಲ್ಲಿ ಕಾಣಿಸಿಕೊಂಡರು. ವೇದಿಕೆಯಲ್ಲಿ ಇಬ್ಬರೂ ಮುಖಾಮುಖಿಯಾದಾಗ ಯಾವುದೇ ಮುಜುಗರವಿಲ್ಲದೆ ಪರಸ್ಪರ ಹಸ್ತಲಾಘವ ನೀಡಿ, ಸೌಹಾರ್ದಯುತವಾಗಿ ತಬ್ಬಿಕೊಂಡರು. ಇವರಿಬ್ಬರ ಈ ಸರಳ ಹಾಗೂ ಖುಷಿಯ ಕ್ಷಣದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಅಭಿಮಾನಿಗಳು ಭಾವುಕರಾಗಿ ಕಾಮೆಂಟ್‌ಗಳ ಸುರಿಮಳೆಗೈಯುತ್ತಿದ್ದಾರೆ.

ಇವರಿಬ್ಬರ ಈ ಅನಿರೀಕ್ಷಿತ ಭೇಟಿಯು ನಿರ್ದೇಶಕ ಇಮ್ತಿಯಾಜ್ ಅಲಿ ಅವರ ನಿರ್ದೇಶನದಲ್ಲಿ ತೆರೆಕಂಡು ಇತಿಹಾಸ ಸೃಷ್ಟಿಸಿದ್ದ ಬ್ಲಾಕ್‌ಬಸ್ಟರ್ ‘ಜಬ್ ವೀ ಮೆಟ್’ ಚಿತ್ರದ ಗೀತ್ ಮತ್ತು ಆದಿತ್ಯ ಪಾತ್ರಗಳನ್ನು ನೆನಪಿಗೆ ತಂದಿದೆ. ಅಂದಿನ ಆ ಸಿನಿಮಾದಲ್ಲಿ ಇವರ ಕೆಮಿಸ್ಟ್ರಿ ತೆರೆಮೇಲೆ ಹೇಗೆ ಅದ್ಭುತವಾಗಿ ಮೂಡಿಬಂದಿತ್ತೋ, ಇಂದಿಗೂ ಅಭಿಮಾನಿಗಳು ಆ ಜೋಡಿಯನ್ನು ಅಷ್ಟೇ ಪ್ರೀತಿಸುತ್ತಾರೆ ಎಂಬುದಕ್ಕೆ ಈ ವೈರಲ್ ವಿಡಿಯೋ ಸಾಕ್ಷಿಯಾಗಿದೆ. ಈಗ ಮುಂಬೈ ವೇದಿಕೆಯಲ್ಲಿ ಈ ಇಬ್ಬರು ನಟರು ಇಷ್ಟು ಖುಷಿಯಾಗಿ ಒಟ್ಟಿಗೆ ಕಾಣಿಸಿಕೊಂಡಿರುವುದನ್ನು ನೋಡಿದ ಬಳಿಕ, ಸಿನಿಪ್ರಿಯರು ಮತ್ತು ನೆಟ್ಟಿಗರು ಮುಂಬರುವ ದಿನಗಳಲ್ಲಿ ‘ಜಬ್ ವೀ ಮೆಟ್ 2’ ಸಿನಿಮಾ ಬರಬೇಕು ಎಂದು ನಿರ್ಮಾಪಕರಿಗೆ ಮತ್ತು ನಟರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಬಲವಾದ ಬೇಡಿಕೆ ಇಡುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular