HomeKarnatakaದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ- 1 : ವಿದ್ಯಾರ್ಥಿಗಳ ನೋಂದಣಿ ದಿನಾಂಕ ಮತ್ತೆ ವಿಸ್ತರಣೆ

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ- 1 : ವಿದ್ಯಾರ್ಥಿಗಳ ನೋಂದಣಿ ದಿನಾಂಕ ಮತ್ತೆ ವಿಸ್ತರಣೆ

ಬೆಂಗಳೂರು : 2024 ರ ಮಾರ್ಚ್‌-ಏಪ್ರಿಲ್‌ ನಲ್ಲಿ ನಡೆಯುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ- 1 ಕ್ಕೆ ಹೊಸ ವಿದ್ಯಾರ್ಥಿಗಳ ನೋಂದಣಿಗೆ ಮತ್ತೆ ದಿನಾಂಕ ವಿಸ್ತರಿಸಲಾಗಿದೆ. 

ಹೊಸ ವಿದ್ಯಾರ್ಥಿಗಳ ಮಾಹಿತಿಯನ್ನು ಪಿಯು ಪರೀಕ್ಷಾ ಪೋರ್ಟಲ್‌ ನಲ್ಲಿ ನೋಂದಾಯಿಸಿಕೊಳ್ಳಲು ಡಿಸೆಂಬರ್‌ 1 ರವರೆಗೆ ಅವಕಾಶ ನೀಡಲಾಗಿದೆ. ಈ ಮೊದಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ನವೆಂಬರ್‌ 21 ರವರೆಗೆ ಸಮಯ ನೀಡಿತ್ತು. ಆದರೆ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ನೋಂದಣಿ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿದ್ಯಾರ್ಥಿಗಳ ಮಾಹಿತಿಯನ್ನು ಅಪ್‌ ಲೋಡ್‌ ಮಾಡದೆ ಇದ್ದರೆ ಅದಕ್ಕೆ ಪ್ರಾಂಶುಪಾಲರೇ ಹೊಣೆಯಾಗುತ್ತಾರೆ ಎಂದು ಮಂಡಳಿ ಹೇಳಿದೆ.

For Latest News Updates, Join Our Whatsapp Community🚩
RELATED ARTICLES

Most Popular