HomeLatest Newsಹೈ ಹೀಲ್ಸ್‌ ಧರಿಸುವವರು ನೀವಾದರೆ ಇದನ್ನೊಮ್ಮೆ ಓದಿ

ಹೈ ಹೀಲ್ಸ್‌ ಧರಿಸುವವರು ನೀವಾದರೆ ಇದನ್ನೊಮ್ಮೆ ಓದಿ

ಹೈ ಹೀಲ್ಸ್ ಧರಿಸುವುದು ಎಲ್ಲರಿಗೂ ಇಷ್ಟವೇ. ಅದರೆ ಇದು ನಿಮ್ಮ ಕಾಲುಗಳಿಗೆ ಅದೆಂಥಾ ನೋವು ಕೊಡುತ್ತದೆ ಗೊತ್ತೇ…? ಅದರಿಂದ ಸಾಕಷ್ಟು ಅನುಭವಿಸಬೇಕಾದೀತು ಎಂಬುದು ನಿಮಗೆ ತಿಳಿದಿದೆಯೇ…?

ಹೈಹೀಲ್ಸ್ ಬಳಸುವುದರಿಂದ ಬೆನ್ನು, ಕಾಲಿನ ಬೆರಳುಗಳು ಮತ್ತು ಕಾಲುಗಂಟುಗಳ ಮೇಲೆ ಭಾರೀ ಒತ್ತಡ ಬಿದ್ದು ನೋವು ಕಾಣಿಸಿಕೊಳ್ಳುತ್ತದೆ.

ನಿರಂತರವಾಗಿ ಹೀಲ್ಸ್ ಬಳಸುವುದರಿಂದ ನಿಮ್ಮ ನಡೆಯುವ ಭಂಗಿಯೇ ಬದಲಾಗಬಹುದು. ಕಾಲುಗಳನ್ನು ಬ್ಯಾಲೆನ್ಸ್ ಮಾಡಲು ಒದ್ದಾಡುವ ಜೊತೆಗೆ ಬೆನ್ನುಹುರಿಯ ಮೇಲೆ ವಿಪರೀತ ಒತ್ತಡ ಬಿದ್ದು ಬೆನ್ನೇ ಬಗ್ಗಿ ಹೋಗಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇವು ಪಾದವನ್ನು ಅಂಕುಡೊಂಕಾಗಿ ಇಟ್ಟುಕೊಳ್ಳುವಂತೆ ಮಾಡುವುದರಿಂದ ಕಾಲಿನ ಬೆರಳುಗಳಿಗೆ ಸರಿಯಾಗಿ ರಕ್ತ ಪರಿಚಲನೆಯೂ ಆಗದಿರಬಹುದು. ಹಾಗಾಗಿ ನಿತ್ಯ ಎತ್ತರದ ಚಪ್ಪಲಿ ಧರಿಸುವ ಮುನ್ನ ದೇಹದ ಆರೋಗ್ಯದ ಕಡೆಗೂ ಗಮನ ಕೊಡಿ.

ಅಪರೂಪಕ್ಕೊಮ್ಮೆ ಹೀಲ್ಸ್ ಬಳಸುವುದಾದರೆ ನಿಮ್ಮ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರದು. ಆದರೆ ನಿತ್ಯ ಬಳಸುವವರಾದರೆ ಅದಕ್ಕೂ ಮುನ್ನ ಅಲೋಚಿಸಿ.

For Latest News Updates, Join Our Whatsapp Community🚩
RELATED ARTICLES

Most Popular