HomeBeautyವಾರಕ್ಕೆರಡು ಬಾರಿ ʼಫೇಸ್‌ ಸ್ಟೀಮಿಂಗ್‌ʼ ಮಾಡಿದ್ರೆ ಮುಖದಲ್ಲಾಗುತ್ತೆ ಇಷ್ಟೆಲ್ಲಾ ಬದಲಾವಣೆ.....!

ವಾರಕ್ಕೆರಡು ಬಾರಿ ʼಫೇಸ್‌ ಸ್ಟೀಮಿಂಗ್‌ʼ ಮಾಡಿದ್ರೆ ಮುಖದಲ್ಲಾಗುತ್ತೆ ಇಷ್ಟೆಲ್ಲಾ ಬದಲಾವಣೆ…..!

ಫೇಸ್‌ ಸ್ಟೀಮಿಂಗ್‌ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಸಾಮಾನ್ಯವಾಗಿ ಬ್ಯೂಟಿ ಪಾರ್ಲರ್‌ಗಳಲ್ಲಿ ಇದನ್ನು ಮಾಡ್ತಾರೆ. ಕೆಲವರು ಮನೆಯಲ್ಲೂ ಬಿಸಿನೀರಿನ ಹಬೆಯನ್ನು ಮುಖಕ್ಕೆ ತೆಗೆದುಕೊಳ್ಳುವುದನ್ನು ನೀವು ನೋಡಿರಬಹುದು. ಈ ರೀತಿ ಯಾಕೆ ಮಾಡಲಾಗುತ್ತದೆ? ಫೇಸ್‌ ಸ್ಟೀಮಿಂಗ್‌ನಿಂದ ಏನೇನು ಪ್ರಯೋಜನಗಳಿವೆ ಅನ್ನೋದನ್ನು ನೋಡೋಣ. ಹಬೆ ತೆಗೆದುಕೊಳ್ಳುವಾಗ ಕೆಲವರು ಬಿಸಿ ನೀರಿಗೆ ಬೇವು, ಉಪ್ಪು, ನಿಂಬೆ ಮುಂತಾದವುಗಳನ್ನು ಸೇರಿಸುತ್ತಾರೆ. ಇದರ ಹಿಂದೆ ತ್ವಚೆಗೆ ಸಂಬಂಧಿಸಿದ ಕೆಲವು ರಹಸ್ಯಗಳು ಅಡಗಿವೆ.

ಕ್ಲೆನ್ಸಿಂಗ್‌ – ಫೇಸ್‌ ಸ್ಟೀಮಿಂಗ್‌ ಮಾಡಿಕೊಳ್ಳುವುದರಿಂದ ಮುಖದ  ಚರ್ಮದ ರಂಧ್ರಗಳು ತೆರೆದುಕೊಳ್ಳುತ್ತವೆ. ಕೊಳೆ ಮತ್ತು ಡೆಡ್‌ ಸ್ಕಿನ್‌ ಹೊರಬರುತ್ತದೆ. ಅದರಲ್ಲೂ ಬ್ಲ್ಯಾಕ್ ಹೆಡ್ಸ್ ಮತ್ತು ವೈಟ್ ಹೆಡ್ಸ್‌ನಿಂದ ತೊಂದರೆಗೊಳಗಾಗಿರುವವರು ಫೇಸ್‌ ಸ್ಟೀಮಿಂಗ್‌ ಮಾಡಿಕೊಳ್ಳುವುದು ಉತ್ತಮ. ಇದು ಮುಖವನ್ನು ಶುಚಿಗೊಳಿಸುತ್ತದೆ.

ರಕ್ತ ಪರಿಚಲನೆ – ತ್ವಚೆಯ ಬಗ್ಗೆ ನೀವು ಎಷ್ಟೇ ಕಾಳಜಿ ವಹಿಸಿದರೂ ಕೆಲವೊಮ್ಮೆ ಅದು ಮಂದ ಮತ್ತು ನಿರ್ಜಲೀಕರಣಗೊಳ್ಳಲು ಪ್ರಾರಂಭಿಸುತ್ತದೆ. ಅಂತಹ ಸಂದರ್ಭದಲ್ಲಿ ಫೇಸ್‌ ಸ್ಟೀಮಿಂಗ್‌ ಸಹಾಯವನ್ನು ತೆಗೆದುಕೊಳ್ಳಿ. ಇದು ಚರ್ಮದ ರಕ್ತ ಪರಿಚಲನೆ ಸುಧಾರಿಸಲು ತುಂಬಾ ಪರಿಣಾಮಕಾರಿಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ಕಿನ್‌ ಹೈಡ್ರೇಶನ್‌- ಕೆಲವೊಮ್ಮೆ ನೀರಿನ ಕೊರತೆಯಿಂದಾಗಿ  ನಮ್ಮ ಮುಖದ ಚರ್ಮವು ನಿರ್ಜಲೀಕರಣಗೊಳ್ಳಲು ಪ್ರಾರಂಭಿಸುತ್ತದೆ. ತ್ವಚೆಯ ಸಾಮರ್ಥ್ಯವನ್ನು ಹೆಚ್ಚಿಸಲು ಫೇಸ್ ಸ್ಟೀಮಿಂಗ್ ಮಾಡಬೇಕು. ಇದರಿಂದ ಮುಖವನ್ನು ಹೈಡ್ರೇಟ್‌ ಆಗಿಡಬಹುದು. ಫೇಸ್‌ ಸ್ಟೀಮಿಂಗ್‌ನಿಂದ ಮುಖ ಹೊಳಪು ಪಡೆಯುತ್ತದೆ. ಚರ್ಮ ಯಂಗ್‌ ಆಗಿರುತ್ತದೆ – ಹಬೆಯನ್ನು ತೆಗೆದುಕೊಳ್ಳುವುದರಿಂದ ಮುಖದ ಮೇಲೆ ಕಾಲಜನ್ ಮತ್ತು ಎಲಾಸ್ಟಿನ್ ಉತ್ಪಾದನೆಯು ಹೆಚ್ಚಾಗುತ್ತದೆ, ಇದರಿಂದಾಗಿ ನಮ್ಮ ಮುಖವು ಹೊಳೆಯುತ್ತದೆ. ತಜ್ಞರು ವಾರಕ್ಕೆ 3 ಬಾರಿ ಫೇಸ್‌ ಸ್ಟೀಮಿಂಗ್‌ ಮಾಡಲು ಸಲಹೆ ನೀಡುತ್ತಾರೆ.

For Latest News Updates, Join Our Whatsapp Community🚩
RELATED ARTICLES

Most Popular