HomeAstroಈ ಕೆಲಸ ಮಾಡಿದ್ರೆ ದೂರವಾಗುತ್ತೆ ರೋಗ

ಈ ಕೆಲಸ ಮಾಡಿದ್ರೆ ದೂರವಾಗುತ್ತೆ ರೋಗ

ಆರೋಗ್ಯಕ್ಕಿಂತ ಹೆಚ್ಚಿನ ಸಂತೋಷವಿಲ್ಲ. ಯಾವುದೇ ಸಂಪತ್ತು ಮತ್ತು ಆಸ್ತಿ ರೋಗಪೀಡಿತ ದೇಹಕ್ಕೆ ಪರಿಹಾರವನ್ನು ನೀಡುವುದಿಲ್ಲ. ಹಲವು ಬಾರಿ ವ್ಯಕ್ತಿಯ ಕರ್ಮ ಮತ್ತು ಗ್ರಹಗಳ ಸ್ಥಾನಗಳು ಒಂದರ ನಂತರ ಒಂದರಂತೆ ದೈಹಿಕ ಸಮಸ್ಯೆಗಳನ್ನು ನೀಡುತ್ತವೆ. ಜ್ಯೋತಿಷ್ಯದಲ್ಲಿ ಅಂತಹ ಕೆಲವು ಪರಿಹಾರಗಳನ್ನು ನೀಡಲಾಗಿದೆ. ಅದು ಅತ್ಯಂತ ಕಷ್ಟಕರವಾದ ರೋಗದಲ್ಲಿಯೂ ಸಹ ವ್ಯಕ್ತಿಗೆ ಪರಿಹಾರವನ್ನು ನೀಡುತ್ತದೆ.

ಎಲ್ಲಾ ವೈದ್ಯಕೀಯ ಚಿಕಿತ್ಸೆಯ ನಂತರವೂ ರೋಗಿಗೆ ನೆಮ್ಮದಿ ಸಿಗದಿದ್ದರೆ ಮಡಿಕೆಗೆ ನೀರು ತುಂಬಿಸಿ, ಹಿಟ್ಟಿನ ಉಂಡೆ ಮಾಡಿ, ಅದನ್ನು 3 ಬಾರಿ ರೋಗಿಯ ಮುಂದೆ ದೃಷ್ಟಿ ನಿವಾಳಿಸಿ ತೆಗೆಯಿರಿ. ನಂತರ ಈ ನೀರನ್ನು ಅಶ್ವತ್ಥ ಮರಕ್ಕೆ ಅರ್ಪಿಸಿ. ಹಿಟ್ಟಿನ ಉಂಡೆಯನ್ನು ಹಸುವಿಗೆ ತಿನ್ನಿಸಿ. ಇದನ್ನು 3 ದಿನಗಳವರೆಗೆ ಮಾಡಿದರೆ ವ್ಯತ್ಯಾಸ ಕಾಣಬಹುದು.

ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿ ತಲೆ ಬದಿಯಲ್ಲಿ ನೀರಿನಿಂದ ತುಂಬಿದ ಬೆಳ್ಳಿಯ ಪಾತ್ರೆಯನ್ನು ಇಡಿ. ನೀರಿಗೆ ಸ್ವಲ್ಪ ಕೇಸರಿ ಹಾಕಿ. ರಾತ್ರಿ ಪೂರ್ತಿ ಅಲ್ಲೇ ಇರಲಿ. ಬೆಳಿಗ್ಗೆ ಅದನ್ನು ಹೊರಗೆ ಹಾಕಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೋಗದಿಂದ ಬಳಲುತ್ತಿರುವ ವ್ಯಕ್ತಿ, ಮಲಗುವಾಗ ತಲೆಯನ್ನು ದಕ್ಷಿಣ ದಿಕ್ಕಿಗಿಟ್ಟು ಮಲಗಿಸಬೇಕು. ನೀರು ಮತ್ತು ಔಷಧಿಗಳನ್ನು ಒಂದೇ ದಿಕ್ಕಿನಲ್ಲಿ ಇರಿಸಿ.  ಅನಾರೋಗ್ಯದಿಂದ ಬಳಲುತ್ತಿರುವ ಜನರು ಆಸ್ಪತ್ರೆಗೆ ಹೋಗಿ ರೋಗಿಗಳಿಗೆ ಔಷಧಿ ಮತ್ತು ಹಣ್ಣುಗಳನ್ನು ದಾನ ಮಾಡಬೇಕು. ಇದು ಕೂಡ ಶೀಘ್ರ ಪರಿಹಾರ ನೀಡುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular