HomeKarnatakaನಟ ದರ್ಶನ್, ಯಶ್ ಚುನಾವಣಾ ಪ್ರಚಾರಕ್ಕೆ ಬಂದರೆ ಸ್ವಾಗತ : ಸಂಸದೆ ಸುಮಲತಾ ಅಂಬರೀಷ್

ನಟ ದರ್ಶನ್, ಯಶ್ ಚುನಾವಣಾ ಪ್ರಚಾರಕ್ಕೆ ಬಂದರೆ ಸ್ವಾಗತ : ಸಂಸದೆ ಸುಮಲತಾ ಅಂಬರೀಷ್

ಮಂಡ್ಯ : ನಟ ದರ್ಶನ್, ಯಶ್ ಚುನಾವಣಾ ಪ್ರಚಾರಕ್ಕೆ ಬಂದರೆ ನನಗೆ ಬಲ ಬರುತ್ತದೆ ಎಂದು ಸಂಸದೆ ಸುಮಲತಾ ಹೇಳಿದ್ದಾರೆ.

ಮಂಡ್ಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಂಸದೆ ಸುಮಲತಾ ‘ಮಂಡ್ಯದಲ್ಲಿ 100 % ಬಿಜೆಪಿ ಟಿಕೆಟ್ ಸಿಗುತ್ತದೆ ಎಂಬ ನಂಬಿಕೆ ಇದೆ. ನಟ ದರ್ಶನ್, ಯಶ್ ಚುನಾವಣಾ ಪ್ರಚಾರಕ್ಕೆ ಬಂದರೆ ನನಗೆ ಬಲ ಬರುತ್ತದೆ, ಅವರು ಪ್ರಚಾರಕ್ಕೆ ಬಂದರೆ ಸಂತೋಷ’ ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಾರೆ.

ನನಗೋಸ್ಕರ ಅವರಿಬ್ಬರು ಬರೀ ಸಪೋರ್ಟ್ ಮಾಡಿಲ್ಲ, ತ್ಯಾಗ ಮಾಡಿದ್ದಾರೆ. ಪದೇ ಪದೇ ಎಲ್ಲಾ ಬಿಟ್ಟು ಪ್ರಚಾರಕ್ಕೆ ಬನ್ನಿ ಎನ್ನುವುದು ಸರಿಯಲ್ಲ. ಇಬ್ಬರೂ ಒಂದೊಂದು ಸಿನಿಮಾ ಮಾಡುತ್ತಿದ್ದಾರೆ. ಒಂದು ವೇಳೆ ಅವರು ಪ್ರಚಾರಕ್ಕೆ ಬಂದರೆ ಸ್ವಾಗತ ಎಂದರು. ಅವತ್ತಿನ ಸ್ಥಿತಿಯಲ್ಲಿ ನಟ ಯಶ್   ನನ್ನ ಜೊತೆ ನಿಂತಿದ್ದರು. ಅವರು ಈ ಬಾರಿ ಚುನಾವಣಾ ಪ್ರಚಾರಕ್ಕೆ ಬಂದರೆ ಸ್ವಾಗತ, ಬರದಿದ್ರೆ ಬೇಸರವಂತೂ ಇಲ್ಲ ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular