HomeEntertainmentBIG NEWS : ಚಿಕ್ಕವಯಸ್ಸಿನಲ್ಲಿ ನನ್ನ ಮೇಲೂ 'ಲೈಂಗಿಕ ದೌರ್ಜನ್ಯ' ನಡೆದಿದೆ : ನಟಿ ಸಂಜನಾ...

BIG NEWS : ಚಿಕ್ಕವಯಸ್ಸಿನಲ್ಲಿ ನನ್ನ ಮೇಲೂ ‘ಲೈಂಗಿಕ ದೌರ್ಜನ್ಯ’ ನಡೆದಿದೆ : ನಟಿ ಸಂಜನಾ ಗರ್ಲಾನಿ ಸ್ಪೋಟಕ ಹೇಳಿಕೆ

ಬೆಂಗಳೂರು : ಚಿಕ್ಕವಯಸ್ಸಿನಲ್ಲಿ ನನ್ನ ಮೇಲೂ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ನಟಿ ಸಂಜನಾ ಗರ್ಲಾನಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಮಾಧ್ಯಮಗಳ ಜೊತೆ ‘ಮೀಟೂ ‘ಬಗ್ಗೆ ಮಾತನಾಡಿದ ನಟಿ ಸಂಜನಾ ಚಿಕ್ಕವಯಸ್ಸಿನಲ್ಲಿ ನನ್ನ ಮೇಲೂ ಲೈಂಗಿಕ ದೌರ್ಜನ್ಯ ನಡೆದಿದೆ, ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನನಗೆ ಇಷ್ಟವಿಲ್ಲ ಎಂದರು.

ನಾನು ಚಿಕ್ಕಪರಿವಾರದಿಂದ ಬಂದವಳು. ನಾನು 17 ನೇ ವಯಸ್ಸಿಗೆ ಇಂಡಸ್ಟ್ರಿಗೆ ಬಂದೆ. ಹಾಗಾಗಿ ಕೆಲವು ಕಹಿ ಅನುಭವ ಆಗಿದೆ. 17-18 ವರ್ಷದ ವಯಸ್ಸಿನ ಹೆಣ್ಣು ಮಕ್ಕಳು ಶೂಟಿಂಗ್ ಗೆ ಬರುವಾಗ ಅವರಿಗೆ ತಿಳುವಳಿಕೆ ಮೂಡಿಸಬೇಕು. ನಾವು ಹಿರಿಯ ನಟಿಯರು ನಮಗೆ ನಮ್ಮನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದು ಗೊತ್ತಿದೆ. ಆದರೆ 18 ನೇ ವಯಸ್ಸಿಗೆ ಸಿನಿಮಾರಂಗಕ್ಕೆ ಬರುವ ಹೆಣ್ಣು ಮಕ್ಕಳಿಗೆ ತಿಳುವಳಿಕೆ ಇರಲ್ಲ,ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಕೆಲವು ರೂಲ್ಸ್ ತರಬೇಕು. ಅವರಿಗೆ ತಿಳುವಳಿಕೆ ಮೂಡಿಸಬೇಕು. ಅವರು ಶೂಟಿಂಗ್ ಗೆ ಹೊರ ಹೋಗುವಾಗ ಅವರನ್ನು ಒಬ್ಬಂಟಿಯಾಗಿ ಕಳುಹಿಸಬಾರದು ಎಂದರು. ಹೆಣ್ಣು ಮಕ್ಕಳು ಹೊರಗೆ ಶೂಟಿಂಗ್ ಹೋದಾಗ ಕ್ಯಾರಾವಾನ್ ಅಥವಾ ರೂಮ್ ವ್ಯವಸ್ಥೆ ಕೇಳಬೇಕು ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular