HomeLatest Newsಸಂಬಳ 80 ಲಕ್ಷ, 2500 ರೂ ಬಿಲ್ ಕಟ್ಟಲು ಹೇಳಿದ್ದಕ್ಕೆ ಸಂಬಂಧ ಕಟ್ ಮಾಡಿಕೊಂಡ ಮಹಿಳೆ!

ಸಂಬಳ 80 ಲಕ್ಷ, 2500 ರೂ ಬಿಲ್ ಕಟ್ಟಲು ಹೇಳಿದ್ದಕ್ಕೆ ಸಂಬಂಧ ಕಟ್ ಮಾಡಿಕೊಂಡ ಮಹಿಳೆ!

ಮುಂಬೈ: ಆಧುನಿಕ ಡೇಟಿಂಗ್ ಮತ್ತು ಸಂಬಂಧಗಳಲ್ಲಿ ಸಮಾನತೆಯ ವ್ಯಾಖ್ಯಾನವೇನು? ಈ ಪ್ರಶ್ನೆಯೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ. ವಾರ್ಷಿಕ ₹80 ಲಕ್ಷ ಆದಾಯ ಗಳಿಸುವ 36 ವರ್ಷದ ಮಹಿಳೆಯೊಬ್ಬರು, ಕೇವಲ ₹2,500 ಹಣದ ವಿಚಾರಕ್ಕಾಗಿ ತಮಗೆ ಬಂದಿದ್ದ ಮದುವೆ ಸಂಬಂಧವನ್ನೇ ನಿರಾಕರಿಸಿದ ಘಟನೆ ಈಗ ವೈರಲ್ ಆಗಿದೆ.

ಘಟನೆ ಹಿನ್ನೆಲೆ ನಳಿನಿ ಉನಾಗರ್ ಎಂಬುವವರು ಹಂಚಿಕೊಂಡಿರುವ ಪೋಸ್ಟ್ ಪ್ರಕಾರ, ಮ್ಯಾಚ್‌ಮೇಕಿಂಗ್ ಸೇವೆಯ ಮೂಲಕ ಪರಿಚಯವಾದ ವ್ಯಕ್ತಿಯೊಂದಿಗೆ ಈ ಮಹಿಳೆ ಸತತ ಮೂರು ಬಾರಿ ಡೇಟಿಂಗ್‌ಗೆ ಹೋಗಿದ್ದರು. ಮೊದಲ ಎರಡು ಬಾರಿ ಆ ವ್ಯಕ್ತಿಯೇ ಬಿಲ್ ಪಾವತಿಸಿದ್ದರು. ಆದರೆ, ಮೂರನೇ ಭೇಟಿಯ ವೇಳೆ ₹5,000 ಬಿಲ್ ಬಂದಾಗ, ಆತ ಅದನ್ನು ಅರ್ಧದಷ್ಟು ಹಂಚಿಕೊಳ್ಳಲು (Split) ಕೇಳಿಕೊಂಡಿದ್ದಾನೆ. ಮಹಿಳೆ ಮುಗುಳ್ನಗುತ್ತಲೇ ತನ್ನ ಪಾಲಿನ ₹2,500 ಪಾವತಿಸಿ ಅಲ್ಲಿಂದ ಹೊರನಡೆದಿದ್ದಾರೆ.

ನಿರ್ಧಾರಕ್ಕೆ ಕಾರಣವೇನು? ಮರುದಿನವೇ ಮ್ಯಾಚ್‌ಮೇಕರ್‌ಗೆ ಕರೆ ಮಾಡಿದ ಮಹಿಳೆ, ಈ ಸಂಬಂಧ ತಮಗೆ ಇಷ್ಟವಿಲ್ಲ ಎಂದು ತಿಳಿಸಿದ್ದಾರೆ. “ಇದು ಹಣದ ವಿಚಾರವಲ್ಲ. ನಾನು ಆ ಬಿಲ್ ಅನ್ನು ಹತ್ತು ಬಾರಿ ಪಾವತಿಸುವಷ್ಟು ಸಮರ್ಥಳಿದ್ದೇನೆ. ಆದರೆ ಆತ ನನ್ನ ಮೇಲೆ ಹಣ ಖರ್ಚು ಮಾಡುವುದು ‘ವರ್ತ್’ ಹೌದೋ ಅಲ್ವೋ ಎಂದು ಲೆಕ್ಕಾಚಾರ ಮಾಡುತ್ತಿದ್ದಾನೆ ಎಂದು ನನಗೆ ಅನ್ನಿಸಿತು. ಇಂತಹ ಲೆಕ್ಕಾಚಾರ ಮಾಡುವ ವ್ಯಕ್ತಿಯೊಂದಿಗೆ ನಾನು ಜೀವನ ಕಳೆಯಲು ಇಷ್ಟಪಡುವುದಿಲ್ಲ” ಎಂದು ಅವರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆ ಈ ಪೋಸ್ಟ್ ಎಕ್ಸ್ (X) ತಾಣದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ನೆಟ್ಟಿಗರು ಎರಡು ಗುಂಪುಗಳಾಗಿ ವಿಂಗಡಣೆಯಾಗಿದ್ದಾರೆ.

  • ಪರವಾದ ವಾದ: “ಪಾವತಿಸುವುದು ಎರಡನೇ ಮಾತು, ಆದರೆ ಪರಸ್ಪರ ಅರ್ಥ ಮಾಡಿಕೊಳ್ಳುವುದು ಮುಖ್ಯ. 2026ರ ಡೇಟಿಂಗ್ ಈಗ ಮಾನಸಿಕ ಯುದ್ಧದಂತಾಗಿದೆ” ಎಂದು ಕೆಲವರು ಮಹಿಳೆಯ ನಿಲುವನ್ನು ಬೆಂಬಲಿಸಿದ್ದಾರೆ.
  • ವಿರೋಧ ವ್ಯಕ್ತಪಡಿಸಿದವರು: “ವಾರ್ಷಿಕ ₹80 ಲಕ್ಷ ಸಂಪಾದಿಸುವ ಮಹಿಳೆಗೆ ₹2,500 ದೊಡ್ಡ ಮೊತ್ತವಲ್ಲ. 36ನೇ ವಯಸ್ಸಿನಲ್ಲಿ ಇಂತಹ ಸಣ್ಣ ವಿಚಾರಗಳಿಗೆ ಸಂಬಂಧ ಕಡಿದುಕೊಳ್ಳುವುದು ಸರಿಯಲ್ಲ. ಇವರು ಅನುಕೂಲಕ್ಕೆ ತಕ್ಕಂತೆ ಸಮಾನತೆಯನ್ನು ಬಳಸಿಕೊಳ್ಳುತ್ತಿದ್ದಾರೆ” ಎಂದು ಟೀಕಿಸಿದ್ದಾರೆ.

ಸದ್ಯ ಈ ಘಟನೆಯು ಆರ್ಥಿಕ ಸ್ವಾತಂತ್ರ್ಯ ಮತ್ತು ಸಾಂಪ್ರದಾಯಿಕ ನಿರೀಕ್ಷೆಗಳ ನಡುವಿನ ಸಂಘರ್ಷವನ್ನು ಎತ್ತಿ ತೋರಿಸುತ್ತಿದ್ದು, ಚರ್ಚೆ ಇನ್ನೂ ಮುಂದುವರಿದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular