HomeKarnatakaಆಹಾರ ಇಲಾಖೆ ಅಧಿಕಾರಿಗಳ ದಾಳಿ: ನಿಯಮ ಉಲ್ಲಂಘನೆ ಪ್ರಕರಣ: ಬೆಂಗಳೂರಿನ 6 ಹೋಟೆಲ್ ಗಳಿಗೆ ಭಾರಿ...

ಆಹಾರ ಇಲಾಖೆ ಅಧಿಕಾರಿಗಳ ದಾಳಿ: ನಿಯಮ ಉಲ್ಲಂಘನೆ ಪ್ರಕರಣ: ಬೆಂಗಳೂರಿನ 6 ಹೋಟೆಲ್ ಗಳಿಗೆ ಭಾರಿ ದಂಡ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಆಹಾರ ಸುರಕ್ಷತೆ, ನೈರ್ಮಲ್ಯ ಹಾಗೂ ಘನತ್ಯಾಜ್ಯ ನಿರ್ವಹಣೆ ನಿಯಮಗಳನ್ನು ಗಾಳಿಗೆ ತೂರಿದ್ದ 6 ಪ್ರಸಿದ್ಧ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ಬೆಂಗಳೂರು ಉತ್ತರ ನಗರ ಪಾಲಿಕೆ (BNCC) ಭಾರಿ ದಂಡ ವಿಧಿಸಿದೆ.

ಒಟ್ಟು 1.60 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದ್ದು, ನಿಯಮ ಉಲ್ಲಂಘಿಸಿದ ಸಂಸ್ಥೆಗಳಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ. ಪಾಲಿಕೆ ಆಯುಕ್ತ ಪೊಮ್ಮಲ ಸುನಿಲ್ ಕುಮಾರ್ ಅವರ ನಿರ್ದೇಶನದಂತೆ, ಆರೋಗ್ಯ ಇಲಾಖೆ ಅಧಿಕಾರಿಗಳ ತಂಡವು ಬ್ಯಾಟರಾಯನಪುರ ಮತ್ತು ಯಲಹಂಕ ವಲಯಗಳ ವ್ಯಾಪ್ತಿಯಲ್ಲಿ ಬರುವ ಹೋಟೆಲ್‌ಗಳ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿತು. ಈ ವೇಳೆ ಅಡುಗೆ ಕೋಣೆಗಳಲ್ಲಿ ಅಸಮರ್ಪಕ ತ್ಯಾಜ್ಯ ವಿಂಗಡಣೆ, ಶುಚಿತ್ವದ ಕೊರತೆ, ನೊಣಗಳ ಹಾವಳಿ ಹಾಗೂ ನಿಷೇಧಿತ ಏಕಬಳಕೆಯ ಪ್ಲಾಸ್ಟಿಕ್ ಬಳಸುತ್ತಿರುವುದು ಕಂಡುಬಂದಿದೆ.

ಪೀಪೈ ಬ್ರೂವರಿ ಮತ್ತು ಕಿಚನ್: ಸಂಸ್ಥೆಯ ಕೋಲ್ಡ್ ಸ್ಟೋರೇಜ್‌ನಲ್ಲಿ ಅವಧಿ ಮುಗಿದ ಅಡುಗೆ ಎಣ್ಣೆ, ಸರಿಯಾಗಿ ಮುಚ್ಚದ ಮತ್ತು ಲೇಬಲ್ ಇಲ್ಲದ ಮಾಂಸ ಪತ್ತೆಯಾಗಿದೆ. ಮಾಂಸ ಖರೀದಿಸಿದ ದಿನಾಂಕದ ಬಿಲ್ ಇಲ್ಲದಿರುವುದನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ಅತಿ ಹೆಚ್ಚು ಅಂದರೆ 80,000 ರೂ. ದಂಡ ವಿಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹೋಟೆಲ್ ಗಳಿಗೆ ದಂಡ ವಿಧಿಸಿದ ಅಧಿಕಾರಿಗಳು:

ಹಯಾತ್ ಸೆಂಟ್ರಿಕ್: ತ್ಯಾಜ್ಯ ವಿಂಗಡಣೆ ಮಾಡದಿರುವುದು ಮತ್ತು ಕಿಚನ್‌ನಲ್ಲಿ ನೊಣಗಳು ಕಂಡುಬಂದ ಹಿನ್ನೆಲೆಯಲ್ಲಿ 40,000 ರೂ. ದಂಡ ಹಾಕಲಾಗಿದೆ.

ತಲಶ್ಶೇರಿ ರೆಸ್ಟೋರೆಂಟ್: ನೈರ್ಮಲ್ಯ ಕೊರತೆ, ನೊಣಗಳ ಕಾಟ ಮತ್ತು ಪ್ಲಾಸ್ಟಿಕ್ ಬಳಸಿದ್ದಕ್ಕೆ 20,000 ರೂ. ದಂಡ ವಿಧಿಸಲಾಗಿದೆ.

ನಂದನ ಪ್ಯಾಲೇಸ್: ಅಸಮರ್ಪಕ ತ್ಯಾಜ್ಯ ನಿರ್ವಹಣೆ ಹಾಗೂ ಪ್ಲಾಸ್ಟಿಕ್ ಬಳಕೆಗೆ 15,000 ರೂ. ದಂಡ.

ಚಿಕ್ಕಪೇಟೆ ಡೊಣ್ಣೆ ಬಿರಿಯಾನಿ: ಶುಚಿತ್ವದ ಲೋಪಕ್ಕೆ 5,000 ರೂ. ದಂಡ.

ಸ್ವಾತಿ ಹೋಟೆಲ್: ಅಡುಗೆ ಮನೆ ನೈರ್ಮಲ್ಯದಿಂದ ಕೂಡಿರದ ಕಾರಣ ನೋಟಿಸ್ ಜಾರಿ ಮಾಡಲಾಗಿದೆ.

ಅಪೋಲೊ ಆಸ್ಪತ್ರೆ ಕಿಚನ್: ಮತ್ತೊಂದೆಡೆ, ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಮಂಡಳಿ (FDA) ಅಧಿಕಾರಿಗಳು ಬನ್ನೇರುಘಟ್ಟ ರಸ್ತೆಯ ಅಪೋಲೊ ಆಸ್ಪತ್ರೆಯ ಕಿಚನ್ ಪರಿಶೀಲಿಸಿದಾಗ, ಅವಧಿ ಮುಗಿದ ರವೆ, ಮೈದಾ, ಐಸಿಂಗ್ ಶುಗರ್, ಹಳೆಯ ಬ್ರೆಡ್ ಹಾಗೂ ನಕಲಿ ಲೇಬಲ್‌ನ ಧಾನ್ಯಗಳು ಪತ್ತೆಯಾಗಿವೆ. ಸಾರ್ವಜನಿಕರ ಆರೋಗ್ಯದ ಜೊತೆ ಆಟವಾಡುವ ಹೋಟೆಲ್‌ಗಳ ವಿರುದ್ಧ ಈ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular