HomeBusinessPF ಖಾತೆದಾರರಿಗೆ ಬಿಗ್ ಶಾಕ್; ವಿತ್ ಡ್ರಾ ನಿಯಮ ಬದಲು, ಹಣ ಪಡೆಯಲು 3...

PF ಖಾತೆದಾರರಿಗೆ ಬಿಗ್ ಶಾಕ್; ವಿತ್ ಡ್ರಾ ನಿಯಮ ಬದಲು, ಹಣ ಪಡೆಯಲು 3 ವರ್ಷ ಕಾಯಬೇಕು!

ಪಿಎಫ್ (EPF) ಖಾತೆ ಹೊಂದಿರುವ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆ ತಂದಿದೆ. ಇದುವರೆಗೆ ಉದ್ಯೋಗ ತೊರೆದ ನಂತರ ಎರಡು ತಿಂಗಳು ಕಳೆದರೆ ಪಿಎಫ್ ಖಾತೆಯಲ್ಲಿದ್ದ ಸಂಪೂರ್ಣ ಹಣ ಹಾಗೂ ಪಿಂಚಣಿ ಮೊತ್ತವನ್ನು ಹಿಂಪಡೆಯಲು ಅವಕಾಶ ಇತ್ತು. ಆದರೆ ಹೊಸ ನಿಯಮಗಳ ಪ್ರಕಾರ ಇನ್ನು ಮುಂದೆ ಸಂಪೂರ್ಣ ಹಣವನ್ನು ತಕ್ಷಣ ಪಡೆಯಲು ಸಾಧ್ಯವಾಗುವುದಿಲ್ಲ.

ಉದ್ಯೋಗ ತೊರೆದ ಬಳಿಕ ಸದಸ್ಯರು ತಮ್ಮ ಪಿಎಫ್ ಖಾತೆಯಲ್ಲಿರುವ ಮೊತ್ತದ ಶೇ.75 ರಷ್ಟು ಹಣವನ್ನು ಮಾತ್ರ ತಕ್ಷಣವೇ ಹಿಂಪಡೆಯಬಹುದು. ಉಳಿದ ಶೇ.25 ರಷ್ಟು ಮೊತ್ತವನ್ನು ಪಡೆಯಲು 12 ತಿಂಗಳು ಕಾಯಬೇಕಾಗುತ್ತದೆ. ಈ ಹಿಂದೆ ಇದ್ದ ಎರಡು ತಿಂಗಳ ಅವಧಿಯನ್ನು ಈಗ ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ.

ಅದೇ ರೀತಿ, ಪಿಂಚಣಿ (EPS) ಮೊತ್ತವನ್ನು ಹಿಂಪಡೆಯುವ ನಿಯಮದಲ್ಲೂ ಬದಲಾವಣೆ ಮಾಡಲಾಗಿದೆ. ಈ ಹಿಂದೆ ಎರಡು ತಿಂಗಳ ನಿರೀಕ್ಷಣಾ ಅವಧಿಯ ನಂತರ ಪಿಂಚಣಿ ಹಣ ಪಡೆಯಲು ಅವಕಾಶವಿದ್ದರೆ, ಈಗ 36 ತಿಂಗಳು (3 ವರ್ಷ) ಕಾಯಬೇಕಾಗುತ್ತದೆ. ಪಿಂಚಣಿ ಭದ್ರತೆಯನ್ನು ಕಾಪಾಡುವುದು ಮತ್ತು ಉದ್ಯೋಗಿಗಳ ಭವಿಷ್ಯದ ಆರ್ಥಿಕ ಸುರಕ್ಷತೆಯನ್ನು ಖಚಿತಪಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉದ್ಯೋಗಿಗಳು ಪಿಂಚಣಿ ಅರ್ಹತೆಯನ್ನು ಪಡೆಯುವ ಮುನ್ನವೇ ತಮ್ಮ ಪಿಂಚಣಿ ಖಾತೆಗಳನ್ನು ಮುಚ್ಚಿ ಭವಿಷ್ಯದ ಪಿಂಚಣಿ ಹಕ್ಕು ಕಳೆದುಕೊಳ್ಳದಂತೆ ಈ ನಿಯಮ ಜಾರಿಗೊಳಿಸಲಾಗಿದೆ. ಪ್ರಸ್ತುತ 36 ತಿಂಗಳ ನಿರೀಕ್ಷಣಾ ಅವಧಿಯನ್ನು ಕಡಿಮೆ ಮಾಡುವ ಅಥವಾ ಹಿಂತೆಗೆದುಕೊಳ್ಳುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಆದರೆ, ವೈದ್ಯಕೀಯ ತುರ್ತು ಪರಿಸ್ಥಿತಿ, ಶಿಕ್ಷಣ ಹಾಗೂ ಮನೆ ನಿರ್ಮಾಣ ಅಥವಾ ಖರೀದಿ ಮುಂತಾದ ಅಗತ್ಯಗಳಿಗಾಗಿ ಸದಸ್ಯರು ತಮ್ಮ ಪಿಎಫ್ ಖಾತೆಯಲ್ಲಿರುವ ಹಣದ ಶೇ.75 ರವರೆಗೆ ಮುಂಗಡವಾಗಿ ಹಿಂಪಡೆಯಬಹುದು. ಜೊತೆಗೆ, ಪಿಎಫ್ ಕ್ಲೇಮ್‌ಗಳ ಪ್ರಕ್ರಿಯೆಯನ್ನು ಮತ್ತಷ್ಟು ವೇಗಗೊಳಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ, 2022-23ನೇ ಹಣಕಾಸು ವರ್ಷದಲ್ಲಿ 31,11,343 ಸದಸ್ಯರು 10 ವರ್ಷಗಳ ಪಿಂಚಣಿ ಅರ್ಹತಾ ಸೇವೆಯನ್ನು ಪೂರ್ಣಗೊಳಿಸುವ ಮೊದಲು ತಮ್ಮ ಪಿಂಚಣಿ ಖಾತೆಗಳನ್ನು ಮುಚ್ಚಿದ್ದಾರೆ. ಇದರಿಂದ ಅವರು ಭವಿಷ್ಯದ ಪಿಂಚಣಿ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಈ ಹಿನ್ನೆಲೆ ಉದ್ಯೋಗಿಗಳ ದೀರ್ಘಕಾಲೀನ ಆರ್ಥಿಕ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular