SHOCKING : ಬೆಳಗಾವಿಯಲ್ಲಿ ತುಂಬು ಗರ್ಭಿಣಿ ಪತ್ನಿ ಮೇಲೆ ಕಾರು ಹತ್ತಿಸಿ ಕೊಲೆ : ಆರೋಪಿ ಪತಿ ಅರೆಸ್ಟ್.!


ಬೆಳಗಾವಿ : ಗರ್ಭಿಣಿ ಪತ್ನಿ ಮೇಲೆ ಕಾರು ಹತ್ತಿಸಿ ಕೊಲೆ ಮಾಡಿದ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಹೂಗಾರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಏನಿದು ಘಟನೆ
ಪ್ರದೀಪ್ ಎಂಬಾತ ( ಆರೋಪಿ) ವೃತ್ತಿಯಲ್ಲಿ ವಕೀಲನಾಗಿ ಕೆಲಸ ಮಾಡುತ್ತಿದ್ದನು. ಆತ ಒಂದು ಹುಡುಗಿಯನ್ನು ಪ್ರೀತಿಸಿ ಮದುವೆ ಆಗಿದ್ದನು. ಪೋಷಕರ ವಿರೋಧದ ನಡುವೆಯೂ ಆಕೆ ಮದುವೆಯಾಗಿದ್ದಳು. ಆದರೆ ಬರು ಬರುತ್ತಾ ಪ್ರದೀಪ್ ಪರ ಸ್ತ್ರೀ ಜೊತೆ ಸಂಬಂಧ ಬೆಳೆಸಿದ್ದನು.

ಪತ್ನಿ ಗರ್ಭಿಣಿಯಾಗಿದ್ದರೂ ಈತನಿಗೆ ಬುದ್ದಿ ಬಂದಿರಲಿಲ್ಲ. ಪ್ರೀತಿಸಿ ಮದ್ವೆ ಆದ ಪ್ರದೀಪ್ ಆಂಟಿ ಮೋಹಕ್ಕೆ ಬಿದ್ದು ರಾಕ್ಷಸೀಯ ಕೃತ್ಯ ಎಸಗಿದ್ದಾನೆ. ಪತಿಯನ್ನು ಕಾರಿನಲ್ಲಿ ಟೆಸ್ಟ್ ಡ್ರೈವ್ ಗೆ ಅಂತ ಕರೆದುಕೊಂಡು ಹೋಗಿ ಕಾರು ಹತ್ತಿಸಿ ಕೊಲೆ ಮಾಡಿದ್ದಾನೆ. ಪಕ್ಕದ ಮನೆಯ ಆಂಟಿ ಮೋಹಕ್ಕೆ ಬಿದ್ದು, ಆಕೆಯ ಜೊತೆ ಅನೈತಿಕ ಸಂಬಂಧ ಬೆಳೆಸಿ ತುಂಬು ಗರ್ಭಿಣಿ ಹೆಂಡತಿ ಮೇಲೆ ಕಾರು ಹತ್ತಿಸಿ ನಂತರ ಅಪಘಾತವಾಗಿದೆ ಎಂದು ಕತೆ ಕಟ್ಟಿದ್ದನು. ರಾಡ್ ನಿಂದ ಪತ್ನಿಯನ್ನು ಹೊಡೆದು ಕೊಂದು ಕಾರು ಹತ್ತಿಸಿದ್ದಾನೆ. ನಂತರ ಅಪಘಾತವಾಗಿದೆ ಎಂದು ಬಿಂಬಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಅನುಮಾನಗೊಂಡ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಯಲಿಗೆ ಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read