HomeLatest NewsBREAKING: ಹುಬ್ಬಳ್ಳಿಯಲ್ಲಿ ಬೆಂಕಿ ಅವಘಡ: ಅಯ್ಯಪ್ಪ ಮಾಲಾಧಾರಿಗಳಿದ್ದ ಶೆಡ್ ಸಂಪೂರ್ಣ ಬೆಂಕಿಗಾಹುತಿ

BREAKING: ಹುಬ್ಬಳ್ಳಿಯಲ್ಲಿ ಬೆಂಕಿ ಅವಘಡ: ಅಯ್ಯಪ್ಪ ಮಾಲಾಧಾರಿಗಳಿದ್ದ ಶೆಡ್ ಸಂಪೂರ್ಣ ಬೆಂಕಿಗಾಹುತಿ

ಹುಬ್ಬಳ್ಳಿ: ಅಯ್ಯಪ್ಪ ಮಾಲಾಧಾರಿಗಳು ವಾಸವಾಗಿದ್ದ ಶೆಡ್ ವೊಂದರಲ್ಲಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ಹುಬ್ಬಳ್ಳಿಯ ವೀರಮಾರುತಿ ನಗರದಲ್ಲಿ ನಡೆದಿದೆ.

ಅಯ್ಯಪ್ಪ ಮಾಲಾಧಾರಿಗಳು ಪೂಜೆ ಮಾಡಿ, ದೀಪ ಹಚ್ಚಿ ಹೊರಗೆ ಹೋಗಿದ್ದರು. ದೀಪದ ಕಿಡಿಯಿಂದಾಗಿ ಶೆಡ್ ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಶೆಡ್ ಸಂಪೂರ್ಣ ಸುಟ್ಟು ಕರಕಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular