HomeKarnatakaBIG NEWS: ವಸತಿಗೃಹದಲ್ಲಿಯೇ ಕಾಲೇಜು ಪ್ರಾಧ್ಯಾಪಕ ಆತ್ಮಹತ್ಯೆ

BIG NEWS: ವಸತಿಗೃಹದಲ್ಲಿಯೇ ಕಾಲೇಜು ಪ್ರಾಧ್ಯಾಪಕ ಆತ್ಮಹತ್ಯೆ

ಹುಬ್ಬಳ್ಳಿ: ಕಾಲೇಜು ಪ್ರಾಧ್ಯಾಪಾಕರೊಬ್ಬರು ವಸತಿಗೃಹದಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಪ್ರವೀಣ್ ಕುಮಾರ್ (35) ಆತ್ಮಹತ್ಯೆಗೆ ಶರಣಾದ ಪ್ರಾಧ್ಯಾಪಕ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಹುಬ್ಬಳ್ಳಿಯ ಪ್ರತಿಷ್ಠಿತ ಕಾಲೇಜು ಪಿ.ಸಿ.ಜಾಬಿನ್ ಕಾಲೇಜಿನಲ್ಲಿ ಕೆಮೆಸ್ಟ್ರಿ ಪ್ರಾಧ್ಯಾಪಕರಾಗಿ ಕರ್ಯನಿರ್ವಹಿಸುತ್ತಿದ್ದ ಪ್ರವೀಣ್ ಕುಮಾರ್, ಕಾಲೇಜು ಕ್ವಾರ್ಟರ್ಸ್ ನಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ದಾವಣಗೆರೆ ಮೂಲದವರಾದ ಪ್ರವೀಣ್ ಕುಮಾರ್ ಕಳೆದ 4 ವರ್ಷಗಳಿಂದ ಹುಬ್ಬಳ್ಳಿಯ ಪಿ.ಸಿ.ಜಾಬಿನ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. 10 ದಿನಗಳ ಹಿಂದಷ್ಟೇ ಪ್ರವೀಣ್ ಕುಮಾರ್ ಅವರ ಪತ್ನಿ ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ ಪ್ರವೀಣ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದು, ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular