HomeKarnatakaಹುಬ್ಬಳ್ಳಿ ಏರ್ ಪೋರ್ಟ್ ನಿರ್ದೇಶಕರಿಗೆ ಜೀವ ಬೆದರಿಕೆ: ಲಾಂಗ್ ಲಿವ್ ಪ್ಯಾಲೆಸ್ತೇನ್ ಹಸರಿನಲ್ಲಿ ಸಂದೇಶ ರವಾನೆ

ಹುಬ್ಬಳ್ಳಿ ಏರ್ ಪೋರ್ಟ್ ನಿರ್ದೇಶಕರಿಗೆ ಜೀವ ಬೆದರಿಕೆ: ಲಾಂಗ್ ಲಿವ್ ಪ್ಯಾಲೆಸ್ತೇನ್ ಹಸರಿನಲ್ಲಿ ಸಂದೇಶ ರವಾನೆ

ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕರಿಗೆ ಜೀವ ಬೆದರಿಕೆ ಸಂದೇಶ ಬಂದಿದೆ. ಹುಬ್ಬಳ್ಳಿ ಏರ್ ಪೋರ್ಟ್ ನಿರ್ದೇಶಕ ರೂಪೇಶ್ ಕುಮಾರ್ ಅವರಿಗೆ ವ್ಯಕ್ತಿಯೊಬ್ಬ ಜೀವ ಬೆದರಿಕೆ ಹಾಕಿದ್ದಾನೆ.

ಲಾಂಗ್ ಲಿವ್ ಪ್ಯಾಲೆಸ್ತೇನ್ ಎಂಬ ಹೆಸರಿನಲ್ಲಿ ಇ-ಮೇಲ್ ಮೂಲಕ ನಿರ್ದೇಶಕರ ಕಚೇರಿಗೆ ಸಂದೇಶ ರವಾನಿಸಿದ್ದು, ನಾವು ನಿಮ್ಮನ್ನು ನಾಶ ಮಾಡುತ್ತೇವೆ. ನೀವು ಮಾಡಿದ ಎಲ್ಲಾ ಕೆಟ್ಟ ಕೆಲಸಗಳಿಗೆ ಉತ್ತರವಿಲ್ಲ ಎಂದುಕೊಂಡಿದ್ದೀರಾ? ಬೆಂಕಿಯಲ್ಲಿ ಎಸೆಯುತ್ತೇವೆ. ಉಸಿರುಗಟ್ಟಿಸಿ ಸಾಯಿಸುತ್ತೇವೆ ಎಂದು ಬೆದರಿಕೆ ಹಾಕಲಾಗಿದೆ.

ಈ ವಿಚಾರವನ್ನು ರೂಪೇಶ್ ಕುಮಾರ್, ಟರ್ಮಿನಲ್ ಉಸ್ತುವಾರಿ ಗಮನಕ್ಕೆ ತಂದಿದ್ದು, ನಂತರ ಸಿಎ ಎಸ್ ಒ, ಐಬಿ, ಬಿಡಿಡಿಎಸ್, ಬಾಂಬ್ ನಿಷ್ಕ್ರಿಯ ದಳ ಮಾಹಿತಿ ನೀಡಲಾಗಿದೆ. ವಾಯುಯಾನ ಭದ್ರತಾ ನಿಯಮದ ಪ್ರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಹುಬ್ಬಳ್ಳಿ ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular