HomeLatest NewsBIG NEWS: ಹುಬ್ಬಳ್ಳಿ ಏರ್ ಪೋರ್ಟ್ ಆವರಣದಲ್ಲಿ ಚಿರತೆ ಪ್ರತ್ಯಕ್ಷ

BIG NEWS: ಹುಬ್ಬಳ್ಳಿ ಏರ್ ಪೋರ್ಟ್ ಆವರಣದಲ್ಲಿ ಚಿರತೆ ಪ್ರತ್ಯಕ್ಷ

ಹುಬ್ಬಳ್ಳಿ: ಕಾಡು ಪ್ರಾಣಿಗಳಾದ ಹುಲಿ, ಚಿರತೆ, ಕಾಡಾನೆಗಳು ಆಹಾರವನ್ನರಸುತ್ತ ನಾಡಿಗೆ ಬರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಇದೀಗ ಏರ್ ಪೂರ್ಟ್ ಆವರಣಗಳಲ್ಲಿಯೂ ಪ್ರತ್ಯಕ್ಷವಾಗುತ್ತಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಗಿದೆ.

ಹುಬ್ಬಳ್ಳಿಯ ಏರ್ ಪೋರ್ಟ್ ಆವರಣದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಸಿಸಿಟಿವಿ ಕ್ಯಾಮರಾಗಳಲ್ಲಿ ದೃಶ್ಯ ಸೆರೆಯಾಗಿದೆ. ಹುಬ್ಬಳ್ಲಿ ವಿಮಾನ ನಿಲ್ದಾಣದ ಸುತ್ತಮುತ್ತ ಚಿರತೆ ಓಡಾಟ ನಡೆಸಿದೆ. ಕಳೆದ ಐದು ದಿನಗಳ ಹಿಂದೆ ಏರ್ ಪೋರ್ಟ್ ಆವರಣದಲ್ಲಿ ಚಿರತೆ ಓಡಾಡಿದ್ದು, ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಸಿಬ್ಬಂದಿಗೆ ಮನವಿ ಮಾಡಲಾಗಿದೆ.

ಚಿರತೆ ಸೆರೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿಗಳು ವಿಮಾನ ನಿಲ್ದಾಣದ ಪರಿಸರದಲ್ಲಿ ಪ್ರತ್ಯೇಕ ಬೋನುಗಳನ್ನು ಅಳವಡಿಸಿದ್ದಾರೆ. ಗಾಮನಗಟ್ಟಿ ಹೊರವಲಯ ಹಾಗೂ ವಿಮಾನ ನಿಲ್ದಾಣದ ಪರಿಸರದಲ್ಲಿ ಕ್ಯಾಮೆರಾ ಟ್ರ್ಯಾಪ್ ಅಳವಡಿಸಲಾಗಿದೆ. ಏರ್ ಪೋರ್ಟ್ ಆವರಣದ ಗೋಡೆ ಜಿಗಿದು ಹೋಗಿರುವ ಚಿರತೆ ಶನಿವಾರ ನಸುಕಿನ ಜಾವ ಮತ್ತೆ ಗಾಮನಗಟ್ಟಿ ಕಡೆಯಿಂದ ವಿಮಾನ ನಿಲ್ದಾಣದದ ಆವರಣದೊಳಗೆ ಜಿಗಿದಿದೆ. ಏರ್ ಪೋರ್ಟ್ ಆವರಣದ ಗಿಡಗಂಟಿಗಳ ಮಧ್ಯೆ ರಾಜಾರೋಷವಾಗಿ ಚಿರತೆ ಒಡಾಡಿದೆ. ಅಲ್ಲಿಂದ ಹೊರಗೆ ಹೋಗಿರುವುದು ಕಂಡುಬಂದಿಲ್ಲ. ಚಿರತೆ ಸಂಚರಿಸಿರುವ ಮಾರ್ಗದಲ್ಲಿಯೇ ಎರಡು ಬೋನುಗಳನ್ನಿಟ್ಟು ನಿಗಾವಹಿಸಲಾಗಿದ್ದರೂ ಚಿರತೆ ಸುಳಿವು ಸಿಕ್ಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular